ETV Bharat / international

ಸರ್ಕಾರಿ ಸಂಸ್ಥೆಗಳ ವೆಚ್ಚ ಕಡಿತಗೊಳಿಸುವಂತೆ ವಿಕ್ರಮ್ ಸಿಂಘೆ ಸೂಚನೆ - ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾ

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾದಲ್ಲಿ, ಇಲ್ಲಿನ ಸರ್ಕಾರಿ ಸಂಸ್ಥೆಗಳ ವೆಚ್ಚ ಕಡಿತಗೊಳಿಸುವಂತೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ್ ಸಿಂಘೆ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

sl-prez-asks-govt-institutions-to-cut-expenses
ಸರ್ಕಾರಿ ಸಂಸ್ಥೆಗಳ ವೆಚ್ಚವನ್ನು ಕಡಿತಗೊಳಿಸುವಂತೆ ವಿಕ್ರಮ್ ಸಿಂಘೆ ಸೂಚನೆ
author img

By

Published : Aug 16, 2022, 8:05 AM IST

ಕೊಲಂಬೊ (ಶ್ರೀಲಂಕಾ) : ಸರ್ಕಾರಿ ವೆಚ್ಚದ ಮಿತಿಗಳ ಕುರಿತು ಹಣಕಾಸು ಇಲಾಖೆ ಹೊರಡಿಸಿರುವ ಸುತ್ತೋಲೆಗೆ ಬದ್ಧವಾಗಿರಬೇಕು ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ್ ಸಿಂಘೆ ಎಲ್ಲಾ ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಈ ನಿಯಮವನ್ನು ಮೀರಿ ಸಂಸ್ಥೆಯು ಹೆಚ್ಚಿನ ವೆಚ್ಚ ಮಾಡಿದಲ್ಲಿ ಇದನ್ನು ಸಂಸ್ಥೆಯ ಮುಖ್ಯಸ್ಥರು ತಮ್ಮ ವೈಯಕ್ತಿಕ ಹಣದಿಂದ ಭರಿಸಬೇಕೆಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸೂಚನೆಯನ್ನು ಸಚಿವಾಲಯದ ಕಾರ್ಯದರ್ಶಿಗಳಿಗೆ, ಇಲಾಖೆಗಳ ಮುಖ್ಯಸ್ಥರುಗಳಿಗೆ, ಪ್ರಾಂತೀಯ ಕಾರ್ಯದರ್ಶಿಗಳಿಗೆ, ನಿಗಮದ ಅಧ್ಯಕ್ಷರುಗಳಿಗೆ, ಸಾಂಸ್ಥಿಕ ಮಂಡಳಿಗಳಿಗೆ ಮತ್ತು ಸರ್ಕಾರಿ ಸ್ವಾಮ್ಯದ ವ್ಯಾಪಾರ ಸಂಸ್ಥೆಗಳಿಗೆ ರವಾನಿಸಲಾಗಿದೆ ಎಂದು ಮಾಧ್ಯಮ ಘಟಕ ತಿಳಿಸಿದೆ.

ದೇಶ ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ದುಂದುವೆಚ್ಚವನ್ನು ಮಿತಿಗೊಳಿಸಲು ಶ್ರೀಲಂಕಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದ್ದು, ಈ ಪರಿಣಾಮ ದೇಶದಲ್ಲಿ ಜನ ದಂಗೆ ಎದ್ದಿದ್ದರು. ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಆ ದೇಶದ ಪ್ರಧಾನಿ ಹಾಗೂ ರಾಷ್ಟ್ರಾಧ್ಯಕ್ಷರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆ ಈಗ ಥಾಯ್ಲೆಂಡ್​ನಲ್ಲಿದ್ದಾರೆ.

ಇದನ್ನೂ ಓದಿ : ಇಂಡಿಯಾ ಹೌಸ್‌ನಲ್ಲಿ ಹಾರಿದ ರಾಷ್ಟ್ರಧ್ವಜ.. ನವ ಭಾರತ ನಿರ್ಮಾಣಕ್ಕೆ ಅಮೆರಿಕ ಸಾಥ್​ ನೀಡಲಿದೆ ಎಂದ ಭಾರತೀಯ ರಾಯಭಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.