ETV Bharat / international

ಸಿಂಗಾಪುರ: ಕೋವಿಡ್ ಲಸಿಕೆ ಬಗ್ಗೆ ಸುಳ್ಳು ಮಾಹಿತಿ ಕೊಟ್ಟ ಇಬ್ಬರು ಭಾರತೀಯರಿಗೆ 5 ದಿನಗಳ ಜೈಲುಶಿಕ್ಷೆ! - ಲಸಿಕೆ ಪಡೆದಿರುವುದಾಗಿ ಸುಳ್ಳು ಹೇಳಿದ ಭಾರತೀಯರಿಗೆ ಜೈಲುಶಿಕ್ಷೆ

ಬಾರ್‌ಗೆ ಪ್ರವೇಶಿಸಲು ಕೋವಿಡ್ ಲಸಿಕೆ ಪಡೆದಿರುವುದಾಗಿ ಸುಳ್ಳು ಮಾಹಿತಿ ಕೊಟ್ಟ ಪ್ರಕರಣದಲ್ಲಿ ಉಥೇಯಕುಮಾರ್ ನಲ್ಲತಂಬಿ ಮತ್ತು ಕಿರಣ್​ ಸಿಂಗ್ ರುಘ್​ಬೀರ್ ಸಿಂಗ್​ಗೆ 5 ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ.

Indian men get jail in Singapore
ಸಿಂಗಾಪುರದಲ್ಲಿ ಭಾರತೀಯರಿಗೆ ಜೈಲುಶಿಕ್ಷೆ
author img

By

Published : Apr 28, 2022, 11:50 AM IST

ಸಿಂಗಾಪುರ: ಬಾರ್‌ಗೆ ಪ್ರವೇಶಿಸಲು ಕೋವಿಡ್ ಲಸಿಕೆ ಸ್ಥಿತಿ ಬಗ್ಗೆ ಸುಳ್ಳು ಮಾಹಿತಿ ಕೊಟ್ಟ ಪ್ರಕರಣದಲ್ಲಿ ಇಬ್ಬರು ಭಾರತೀಯರನ್ನು ಇಲ್ಲಿನ ನ್ಯಾಯಾಲಯವು ಐದು ದಿನಗಳ ಜೈಲಿಗೆ ಕಳುಹಿಸಿದೆ. ಉಥೇಯಕುಮಾರ್ ನಲ್ಲತಂಬಿ ಮತ್ತು ಕಿರಣ್​ ಸಿಂಗ್ ರುಘ್​ಬೀರ್ ಸಿಂಗ್ ಶಿಕ್ಷೆಗೊಳಗಾದವರು.

ಕಿರಣ್​ ಸಿಂಗ್ ರುಘ್​ಬೀರ್ ಮತ್ತು ಆತನ ಸ್ನೇಹಿತೆ ಉಥೇಯಕುಮಾರ್ ನಲ್ಲತಂಬಿಯನ್ನು ಕಳೆದೊಂದು ವರ್ಷದ ಹಿಂದೆ ಪರಿಚಯ ಮಾಡಿಕೊಂಡಿದ್ದರು. ಈ ಮೂವರು ಬಿಕಿನಿ ಬಾರ್​ಗೆ ತೆರಳಲು ಯೋಜಿಸಿದ್ದಾರೆ. ಆದರೆ, ಉಥೇಯಕುಮಾರ್ ನಲ್ಲತಂಬಿ ಲಸಿಕೆ ಹಾಕಿಸಿಕೊಳ್ಳದ ಕಾರಣ ಬಿಕಿನಿ ಬಾರ್​ಗೆ ಪ್ರವೇಶ ಸಿಕ್ಕಿಲ್ಲ. ಅಲ್ಲಿಂದ ಹೊರ ಬಂದ ನಂತರ ಕೋಸ್ಟೆಸ್ ಬಾರ್​ ಪ್ರವೇಶಿಸಲು ಒಂದು ಪ್ಲ್ಯಾನ್ ಮಾಡಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನ ಖೇರ್ಸನ್ ನಗರದಲ್ಲಿ ರಷ್ಯಾದ ದೂರದರ್ಶನ ಗೋಪುರದ ಬಳಿ ಸರಣಿ ಸ್ಫೋಟ

ಕಿರಣ್​ ಸಿಂಗ್ ರುಘ್​ಬೀರ್ ಸಿಂಗ್​​ನ ವ್ಯಾಕ್ಸಿನೇಶನ್​ ಸ್ಟೇಟಸ್ ಬಳಸಿಕೊಂಡು ಉಥೇಯಕುಮಾರ್ ನಲ್ಲತಂಬಿ ಕೋಸ್ಟೆಸ್ ಬಾರ್​ ಪ್ರವೇಶಿದ್ದಾರೆ. ಉಥೇಯಕುಮಾರ್ ನಲ್ಲತಂಬಿ ತನ್ನನ್ನು ತಾನು ಕಿರಣ್​ ಸಿಂಗ್ ರುಘ್​ಬೀರ್ ಸಿಂಗ್ ಎಂದು ಹೇಳಿಕೊಂಡಿದ್ದಾನೆ. ಇದನ್ನು ಬಿಕಿನಿ ಬಾರ್ ಮ್ಯಾನೇಜರ್ ಗಮನಿಸಿದ್ದು, ಕೋವಿಡ್ ಲಸಿಕೆ ಬಗ್ಗೆ ಸುಳ್ಳು ಮಾಹಿತಿ ಕೊಟ್ಟ ವಿಷಯ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೂ 5 ದಿನಗಳ ಜೈಲುಶಿಕ್ಷೆಯನ್ನು ಸಿಂಗಾಪುರದ ನ್ಯಾಯಾಲಯ ವಿಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.