ಸಿಂಗಾಪುರ: ಸಿಂಗಾಪುರದಲ್ಲಿ ಶುಕ್ರವಾರ ಭಾರತೀಯ ಮೂಲದ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಇದಕ್ಕೆ ಜನಾಂಗೀಯ ನಿಂದನೆ, ಬೆದರಿಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ತನಿಖೆ ನಡೆಸಿ ಎಂದು ಕೇಂದ್ರ ಸರ್ಕಾರವು ಸಿಂಗಾಪುರ ಸರ್ಕಾರಕ್ಕೆ ಆಗ್ರಹಿಸಿದೆ.
ಅಧಿಕಾರಿ ಸಾಯುವ ಮುನ್ನ ಹಲವರ ಮೇಲೆ ಆರೋಪ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಇದಲ್ಲದೇ, ಕೆಲಸದ ಸ್ಥಳದಲ್ಲಿ ಅವರನ್ನು ಜನಾಂಗೀಯವಾಗಿ ನಿಂದಿಸಲಾಗಿತ್ತು ಎಂಬ ಆರೋಪ ಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕೇಂದ್ರ ಕಾನೂನು ಮತ್ತು ಗೃಹ ವ್ಯವಹಾರಗಳ ಸಚಿವ ಕೆ.ಷಣ್ಮುಗಂ ಅವರು ಸಿಂಗಾಪುರ ಪೊಲೀಸ್ ಪಡೆಗೆ(ಎಸ್ಪಿಎಫ್) ಕೇಳಿಕೊಂಡಿದ್ದಾರೆ.
ಸಾವಿಗೂ ಮುನ್ನ ಫೇಸ್ಬುಕ್ನಲ್ಲಿ ಪೋಸ್ಟ್: ಉವರಾಜ ಗೋಪಾಲ್(36) ಸಿಂಗಾಪುರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಯಿಶುನ್ ಹೌಸಿಂಗ್ ಎಸ್ಟೇಟ್‌ನ ಅಪಾರ್ಟ್‌ಮೆಂಟ್ ಬ್ಲಾಕ್‌ವೊಂದರಲ್ಲಿ ಅವರು ಶುಕ್ರವಾರ ಶವವಾಗಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿತ್ತು. ಗೋಪಾಲ್ ಅವರು ಸಾಯುವ ಮೊದಲು ತಮಗಾದ ಅನ್ಯಾಯ, ಬೆದರಿಕೆಗಳ ಬಗ್ಗೆ ಫೇಸ್ಬುಕ್ನಲ್ಲಿ ಸವಿಸ್ತಾರ ಪೋಸ್ಟ್ ಹಂಚಿಕೊಂಡಿದ್ದರು.
ಕೆಲಸದೊತ್ತಡ, ಇತರ ಕಾರಣಗಳಲ್ಲದೇ ಗೋಪಾಲ್ ಅವರು ವರ್ಣ ನಿಂದನೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಆ ಕೋನದಲ್ಲಿ ತನಿಖೆ ನಡೆಸುವಂತೆ ಭಾರತ ಸರ್ಕಾರ ಕೋರಿದೆ. ಈ ನಡುವೆ ಗೋಪಾಲ್ ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಅಳಿಸಲಾಗಿದೆ. ಅದರ ಸ್ಕ್ರೀನ್ಶಾಟ್ಗಳು ಮಾತ್ರ ಲಭ್ಯವಿವೆ.
ಜನಾಂಗೀಯ ತಾರತಮ್ಯ ನಿಜವೇ?: ಕೇಂದ್ರ ಸಚಿವ ಷಣ್ಮುಗಂ ಅವರು ಗೋಪಾಲ್ ಅವರ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಸಾವಿಗೆ ಮುನ್ನ ಅಧಿಕಾರಿ ಮಾಡಿದ ಆರೋಪಗಳನ್ನು ಪರಿಶೀಲಿಸುವಂತೆ ಪೊಲೀಸರನ್ನು ಕೋರಿದ್ದಾಗಿ ಹೇಳಿದರು. ಸಾವಿಗೂ ಮೊದಲು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇತರ ವಿಷಯಗಳ ಜೊತೆಗೆ, ಜನಾಂಗೀಯ ತಾರತಮ್ಯವನ್ನು ಎದುರಿಸಿದ್ದರು. ಇತರ ಆರೋಪಗಳು ಕೂಡ ಗಂಭೀರವಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ತನಿಖೆಗೆ ಎಸ್ಪಿಎಸ್ ಸಮ್ಮತಿ: ಇದಕ್ಕೆ ಸ್ಪಂದಿಸಿರುವ ಸಿಂಗಾಪುರ ಪೊಲೀಸ್ ಪಡೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದಿದೆ. ಅಧಿಕಾರಿ ಹಂಚಿಕೊಂಡ ಪೋಸ್ಟ್ ಮತ್ತು ಅದರ ಸ್ಕ್ರೀನ್ಶಾಟ್ಗಳನ್ನು ಪರಿಶೀಲಿಸಲಾಗುವುದು. ಅವರ ಸಾವಿನ ನಿಖರ ಕಾರಣವನ್ನು ಪತ್ತೆ ಮಾಡಲಾಗುವುದು ಎಂದು ಅಧಿಕಾರಿ ಗೋಪಾಲ್ ಕುಟುಂಬಸ್ಥರಿಗೆ ಪೊಲೀಸರು ಅಭಯ ನೀಡಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ವೇಳೆ ಗೋರಖ್ಪುರ ವಿವಿ ಕುಲಪತಿ, ರಿಜಿಸ್ಟ್ರಾರ್ ಮೇಲೆ ಎಬಿವಿಪಿ ಪ್ರತಿಭಟನಾಕಾರರಿಂದ ತೀವ್ರ ಹಲ್ಲೆ