ETV Bharat / international

ಟೆಕ್ಸಾಸ್‌ನ 2 ನಗರಗಳಲ್ಲಿ ಗುಂಡಿನ ದಾಳಿ: 6 ಮಂದಿ ಸಾವು, ಮೂವರಿಗೆ ಗಾಯ - Texas shooting

ಟೆಕ್ಸಾಸ್‌ನ ಎರಡು ನಗರಗಳಾದ ಆಸ್ಟಿನ್ ಮತ್ತು ಸ್ಯಾನ್ ಆಂಟೋನಿಯೊದಲ್ಲಿ ಮಂಗಳವಾರ ನಡೆದ ನರಹತ್ಯೆ ಮತ್ತು ಗುಂಡಿನ ದಾಳಿಯನ್ನು 34 ವರ್ಷದ ವ್ಯಕ್ತಿ ನಡೆಸಿರುವುದಾಗಿ ತಿಳಿದು ಬಂದಿದೆ. ದಾಳಿಯಲ್ಲಿ ಶಂಕಿತನ ಪೋಷಕರು ಸೇರಿದಂತೆ ಇತರ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

Shooting
ಗುಂಡಿನ ದಾಳಿ
author img

By ETV Bharat Karnataka Team

Published : Dec 7, 2023, 7:01 AM IST

ಹೂಸ್ಟನ್( ಅಮೆರಿಕ) : ಟೆಕ್ಸಾಸ್‌ನ ಎರಡು ನಗರಗಳಾದ ಆಸ್ಟಿನ್ ಮತ್ತು ಸ್ಯಾನ್ ಆಂಟೋನಿಯೊದಲ್ಲಿ ಮಂಗಳವಾರ ನಡೆದ ನರಹತ್ಯೆ ಮತ್ತು ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾನ್ ಆಂಟೋನಿಯೊದಲ್ಲಿನ ಪೋರ್ಟ್ ರಾಯಲ್ ಸ್ಟ್ರೀಟ್‌ನ 6400 ಬ್ಲಾಕ್ ಬಳಿಯ ನಿವಾಸದಲ್ಲಿ 50ರ ಹರೆಯದ ಒಬ್ಬ ಪುರುಷ ಮತ್ತು ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳವಾರ ಆಸ್ಟಿನ್‌ನಲ್ಲಿ ನಡೆದ ಸರಣಿ ಗುಂಡಿನ ದಾಳಿಗೂ ಮೊದಲು ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಬೆಕ್ಸಾರ್ ಕೌಂಟಿ ಶೆರಿಫ್ ಜೇವಿಯರ್ ಸಲಾಜರ್ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಸ್ಟಿನ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, 34 ವರ್ಷದ ಶೇನ್ ಜೇಮ್ಸ್ ಆಸ್ಟಿನ್‌ನಲ್ಲಿ ನಡೆದ ನರಹತ್ಯೆ ಮತ್ತು ಗುಂಡಿನ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ. ಜೊತೆಗೆ, ಸ್ಯಾನ್ ಆಂಟೋನಿಯೊದಲ್ಲಿ ನಡೆದ ಡಬಲ್ ಕೊಲೆಗೆ ಜೇಮ್ಸ್ ಹೇಗೆ ಸಂಪರ್ಕ ಹೊಂದಿದ್ದಾನೆ ಎಂಬುದು ತಿಳಿದುಬಂದಿಲ್ಲ. ಬೆಕ್ಸಾರ್ ಕೌಂಟಿಯಲ್ಲಿ ಮೃತಪಟ್ಟಿರುವವರನ್ನು 56 ವರ್ಷದ ಶೇನ್ ಎಂ. ಜೇಮ್ಸ್ ಸೀನಿಯರ್ ಮತ್ತು 55 ವರ್ಷದ ಫಿಲ್ಲಿಸ್ ಜೇಮ್ಸ್ ಎಂದು ಗುರುತಿಸಲಾಗಿದೆ. ಸಂತ್ರಸ್ತರು ಶಂಕಿತನ ಪೋಷಕರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಗುಂಡಿನ ದಾಳಿಯ ನಂತರ ಪಾರ್ಶ್ವವಾಯು ; ಪ್ಯಾಲೇಸ್ಟಿನಿಯನ್ ವಿದ್ಯಾರ್ಥಿಗೆ 95ಸಾವಿರ ಡಾಲರ್​ ನಿಧಿ ಸಂಗ್ರಹ

ಡಿಸೆಂಬರ್ 4 ರಂದು ಮತ್ತು ಡಿಸೆಂಬರ್ 5 ರಂದು ಬೆಳಗ್ಗೆ 9 ಗಂಟೆಗೆ ಶಂಕಿತ ತನ್ನ ತಂದೆಯ ಕಾರನ್ನು ಟ್ರಾವಿಸ್ ಕೌಂಟಿಗೆ ಹೋಗಲು ಬಳಕೆ ಮಾಡಿಕೊಂಡಿದ್ದ, ಅಲ್ಲಿ ಆತ ಈ ಗುಂಡಿನ ದಾಳಿ ನಡೆಸಿದ್ದಾನೆ. ನಂತರ ಶಂಕಿತನು ಆಸ್ಟಿನ್​ಗೆ ತೆರಳಿದ್ದು ಅಲ್ಲಿ ಕೂಡ ಇದೇ ಕೃತ್ಯ ಎಸಗಿದ್ದಾನೆ. ಟ್ರಾವಿಸ್ ಕೌಂಟಿಯಲ್ಲಿ ಮೃತರ ಗುರುತುಗಳನ್ನು ಅಲ್ಲಿನ ಅಧಿಕಾರಿಗಳು ಇನ್ನೂ ಬಹಿರಂಗ ಪಡಿಸಿಲ್ಲ ಎಂದು ಸಲಾಜರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ರಕ್ತಸಿಕ್ತವಾದ ಖಾನ್​ ಯೂನಿಸ್​ ನಗರ : ಹೆಚ್ಚಿದ ಸಾವು ನೋವು, ಸುರಂಗಗಳಲ್ಲಿ ನೀರು ತುಂಬಿಸುತ್ತಿರುವ ಇಸ್ರೇಲ್​

ಈ ಕುರಿತು ಮಾಹಿತಿ ನೀಡಿರುವ ಮಧ್ಯಂತರ ಪೊಲೀಸ್ ಮುಖ್ಯಸ್ಥ ರಾಬಿನ್ ಹೆಂಡರ್ಸನ್ , ಮಂಗಳವಾರ ರಾಜ್ಯ ರಾಜಧಾನಿಯಲ್ಲಿ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಮತ್ತು ಸ್ಯಾನ್ ಆಂಟೋನಿಯೊ ಬಳಿ ಸರಣಿ ಗುಂಡಿನ ದಾಳಿಗಳು ನಡೆದಿವೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಪಡೆದ ಮಾಹಿತಿಯ ಆಧಾರದ ಮೇಲೆ ಎಲ್ಲಾ ಘಟನೆಗಳಿಗೆ ಒಬ್ಬ ವ್ಯಕ್ತಿಯೇ ಹೊಣೆಗಾರನೆಂದು ಶಂಕಿಸಲಾಗಿದೆ. ಆಸ್ಟಿನ್‌ನಲ್ಲಿ ಗುಂಡು ಹಾರಿಸಿದ ಜನರೊಂದಿಗೆ ಜೇಮ್ಸ್ ಯಾವ ರೀತಿ ಸಂಬಂಧ ಹೊಂದಿದ್ದಾನೆ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ರಜಪೂತ​ ಕರ್ಣಿ ಸೇನಾ ಮುಖ್ಯಸ್ಥನಿಗೆ ಗುಂಡಿಕ್ಕಿ ಹತ್ಯೆ, ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.