ಸಾವೊ ಪಾಲೊ (ಬ್ರೆಜಿಲ್): ದಕ್ಷಿಣ ಬ್ರೆಜಿಲ್ ಭೀಕರ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. ಹಲವಾರು ನಗರಗಳಲ್ಲಿ ಪ್ರವಾಹ ಉಂಟಾಗಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಸುಮಾರು 60 ನಗರಗಳು ಚಂಡಮಾರುತಕ್ಕೆ ತುತ್ತಾಗಿವೆ. ಇದನ್ನು ಉಷ್ಣವಲಯದ (extratropical) ಸೈಕ್ಲೋನ್ ಎಂದು ಕರೆಯಲಾಗುತ್ತಿದೆ.
ಮ್ಯೂಕಮ್‌ನಲ್ಲಿ ಸುಮಾರು 50,000 ನಿವಾಸಿಗಳು ನೆಲೆಸಿದ್ದಾರೆ. ಮ್ಯೂಕಮ್ ನಗರದ ಒಂದೇ ಕುಟುಂಬದ 15 ಜನರು ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿಯಿಂದ 1,650 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಲೈಟ್ ಹೇಳಿದರು. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ದಡದಲ್ಲಿರುವ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಲ್ಲಿನ ಮನೆಯ ಛಾವಣಿ ಮೇಲೆ ಹತ್ತಿ ಕುಳಿತ ಕುಟುಂಬಸ್ಥರು ಸಹಾಯಕ್ಕಾಗಿ ಮನವಿ ಮಾಡುವುದನ್ನು ಮಾಧ್ಯಮಗಳಲ್ಲಿ ಕಂಡು ಬಂದಿದೆ.
ಒಬ್ಬ ಮಹಿಳೆಯನ್ನು ರಕ್ಷಣೆ ಮಾಡುತ್ತಿದ್ದ ವೇಳೆಯಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಭಯಾನಕ ಘಟನೆ ಜರುಗಿದೆ. ತಕ್ವಾರಿ ನದಿಯ ಸಮೀಪದ ರಕ್ಷಣಾ ಪ್ರಯತ್ನದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ಲೈಟ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿದ್ದಾರೆ. ಹಗ್ಗ ಕಟ್ ಆಗಿ ಮಹಿಳೆ ಮತ್ತು ರಕ್ಷಕನು ಕೆಳಗೆ ಬಿದ್ದರು. ದುರದೃಷ್ಟವಶಾತ್ ಮಹಿಳೆ ಬದುಕುಳಿಯಲಿಲ್ಲ ಮತ್ತು ರಕ್ಷಣಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೂನ್‌ನಲ್ಲಿ ರಿಯೊ ಗ್ರಾಂಡೆ ಡೊ ಸುಲ್ನಲ್ಲಿ ಅಪ್ಪಳಿಸಿದ ಉಷ್ಣವಲಯದ ಚಂಡಮಾರುತದಿಂದಾಗಿ 16 ಜನರು ಮೃತಪಟ್ಟಿದ್ದರು. ಜೊತೆಗೆ 40 ನಗರಗಳು ಚಂಡಮಾರುತಕ್ಕೆ ತುತ್ತಾಗಿದ್ದವು.
ಇತ್ತೀಚೆಗೆ ಚಂಡಮಾರುತದ ಅಬ್ಬರದ ಹಿನ್ನೆಲೆ ಜಾರ್ಜಿಯಾ, ಸೌತ್ ಕೆರೊಲಿನಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಸೆಡರ್ ಕೀ (ಅಮೆರಿಕ), ಇಡಾಲಿಯಾ ಚಂಡಮಾರುತ ಫ್ಲೋರಿಡಾದ ಗಲ್ಫ್ ಕರಾವಳಿಗೆ ಅಪ್ಪಳಿಸಿತ್ತು. ಮಿಯಾಮಿಯ ರಾಷ್ಟ್ರೀಯ ಚಂಡಮಾರುತ ಕೇಂದ್ರದ ಹಾವಾಮಾನ ಮುನ್ಸೂಚಕರ ಪ್ರಕಾರ, ಇಡಾಲಿಯಾ ಚಂಡಮಾರುತ ಬಿಗ್ ಬೆಂಡ್ ಅನ್ನು ತಲುಪಿತ್ತು. ಫ್ಲೋರಿಡಾ ಪ್ಯಾನ್‌ಹ್ಯಾಂಡಲ್ ಪರ್ಯಾಯ ದ್ವೀಪಕ್ಕೆ ವಕ್ರವಾಗಿ ಚಲಿಸಿತ್ತು. ಬಳಿಕ ದಕ್ಷಿಣ ಜಾರ್ಜಿಯಾಕ್ಕೆ ಚಂಡಮಾರುತ ಅಪ್ಪಳಿಸಿತ್ತು. ಹೆಚ್ಚಿನ ಗಾಳಿ ಮತ್ತು ವಿನಾಶಕಾರಿ ಪ್ರವಾಹದಿಂದ ತಪ್ಪಿಸಿಕೊಳ್ಳಲು ಗಲ್ಫ್ ಕರಾವಳಿ ಉದ್ದಕ್ಕೂ ಸೂಕ್ಷ್ಮ ಪ್ರದೇಶಗಳ ನಿವಾಸಿಗಳ ಸ್ಥಳಾಂತರ ಮಾಡಲಾಗಿತ್ತು.
ಕ್ಲಿಯರ್‌ವಾಟರ್ ಬೀಚ್ ಸೇರಿದಂತೆ ಫ್ಲೋರಿಡಾ ಕೀಸ್ ಹಾಗೂ ಫ್ಲೋರಿಡಾದ ನೈಋತ್ಯ ಕರಾವಳಿಯಲ್ಲಿ ಇತ್ತೀಚೆಗೆ ಇಡಾಲಿಯಾದ ಎಫೆಕ್ಟ್ ಕಂಡುಬಂದಿತ್ತು. ಬಿಗ್ ಬೆಂಡ್ ಪ್ರದೇಶದ ಪ್ರವೇಶದ ಬಳಿಕ, ಇಡಾಲಿಯಾ ಚಂಡಮಾರುತ ಫ್ಲೋರಿಡಾ ಪರ್ಯಾಯ ದ್ವೀಪವನ್ನು ದಾಟಿ, ದಕ್ಷಿಣ ಜಾರ್ಜಿಯಾ ಮತ್ತು ಕೆರೊಲಿನಾಸ್ ಪ್ರದೇಶದಲ್ಲಿ ಚಂಡಮಾರುತದ ಎಫೆಕ್ಟ್ ಕಂಡುಬಂದಿತ್ತು. ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ಮತ್ತು ಸೌತ್ ಕೆರೊಲಿನಾ ಗವರ್ನರ್ ಹೆನ್ರಿ ಮ್ಯಾಕ್ ಮಾಸ್ಟರ್ ಇಬ್ಬರೂ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ನೂರಾರು ರಾಷ್ಟ್ರೀಯ ಗಾರ್ಡ್ ಪಡೆಗಳು ಸೇರಿದಂತೆ ರಾಜ್ಯದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವು.
ಇದನ್ನೂ ಓದಿ: ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ನಿಂದ ಹೊರಬರಲು ಇಟಲಿ ಚಿಂತನೆ: ಇಕ್ಕಟ್ಟಿನಲ್ಲಿ ಚೀನಾ!