ಅಬುಜಾ (ನೈಜೀರಿಯಾ): ದಕ್ಷಿಣ ನೈಜೀರಿಯಾದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಮಕ್ಕಳು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತವೊಂದರಲ್ಲಿ 11 ಮಂದಿಯ ಮೃತದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿದ್ದವು. ಇನ್ನೊಂದು ಅಪಘಾತದಲ್ಲಿ ಕಂಟೇನರ್‌ವೊಂದು ಬಸ್ ಮೇಲೆ ಉರುಳಿ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ.
ಬಸ್ ಮೇಲೆ ಬಿದ್ದ ಕಂಟೇನರ್: ನೈಜೀರಿಯಾದ ಓಜುಲೆಗ್ಬಾದ ಜನನಿಬಿಡ ಸೇತುವೆಯ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಸೇತುವೆಯ ಕೆಳಗೆ ಹಳದಿ ಬಣ್ಣದ ಮಿನಿ ಬಸ್ನಲ್ಲಿ ಸುಮಾರು 10 ಜನ ಪ್ರಯಾಣಿಸುತ್ತಿದ್ದರು. ಸೇತುವೆ ಮೇಲೆ ಟ್ರಕ್ವೊಂದು ಕಂಟೇನರ್ವೊಂದನ್ನು ಹೊತ್ತು ಸಾಗುತ್ತಿತ್ತು. ಟ್ರಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಚಾಲಕ ಸೇರಿದಂತೆ ಒಂಬತ್ತು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್ ಬಸ್ ಮೇಲೆ ಬಿದ್ದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾದರು. ಆದ್ರೆ ಸ್ಥಳೀಯರಿಗೆ ಬಸ್ ಮೇಲೆ ಬಿದ್ದ ಕಂಟೇನರ್ ತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ಥಳಕ್ಕೆ ತುರ್ತು ಸೇವಾ ಸಿಬ್ಬಂದಿ ಬರುವವರೆಗೂ ಕಾಯಬೇಕಾಯಿತು. ಸುದ್ದಿ ತಿಳಿದ ತಕ್ಷಣವೇ ಅಧಿಕಾರಿಗಳು ರಕ್ಷಣಾ ಸಾಧನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದರು. ಬಳಿಕ, 20 ಅಡಿ ಕಂಟೇನರ್ ಅನ್ನು ತೆಗೆದು ಮೃತ ಪ್ರಯಾಣಿಕರನ್ನು ಹೊರತೆಗೆದರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅದೃಷ್ಟವಶಾತ್, ದುರಂತದಲ್ಲಿ ಮಹಿಳೆಯೊಬ್ಬಳು ಮಾತ್ರ ಬದುಕುಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
-
Just take a look at the video..the trailer I use to know,is metal they use to construct it but look at what they use to construct this (wood).Tell me why this won’t cause accident🤦♂️.Nigeria need to do better😭. #Ojuelegba pic.twitter.com/vb2qoueldU
— Alwaysteegold (@AlwaysTee10) January 29, 2023 " class="align-text-top noRightClick twitterSection" data="
">Just take a look at the video..the trailer I use to know,is metal they use to construct it but look at what they use to construct this (wood).Tell me why this won’t cause accident🤦♂️.Nigeria need to do better😭. #Ojuelegba pic.twitter.com/vb2qoueldU
— Alwaysteegold (@AlwaysTee10) January 29, 2023Just take a look at the video..the trailer I use to know,is metal they use to construct it but look at what they use to construct this (wood).Tell me why this won’t cause accident🤦♂️.Nigeria need to do better😭. #Ojuelegba pic.twitter.com/vb2qoueldU
— Alwaysteegold (@AlwaysTee10) January 29, 2023
ಟ್ರಕ್-ಬಸ್ ಡಿಕ್ಕಿ, 11 ಜನ ಸಜೀವ ದಹನ: ಭಾನುವಾರ ಮುಂಜಾನೆ ಲಾಗೋಸ್ ಬಳಿಯ ಒಂಡೋ ರಾಜ್ಯದ ಒಡಿಗ್ಬೋ ಕೌನ್ಸಿಲ್ ಪ್ರದೇಶದಲ್ಲಿ ಬಸ್ ಮತ್ತು ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಭಾರಿ ಬೆಂಕಿ ಹೊತ್ತಿಕೊಂಡಿತು. ಅಪಘಾತದಲ್ಲಿ 11 ಜನರು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿದ್ದರು ಎಂದು ನೈಜೀರಿಯಾದ ರಸ್ತೆ ಸುರಕ್ಷತಾ ಸಂಸ್ಥೆ ತಿಳಿಸಿದೆ.
ರಸ್ತೆ ಸುರಕ್ಷತಾ ಸಂಸ್ಥೆಯ ಅಧಿಕಾರಿ ರಿಚರ್ಡ್ ಅಡೆಟೊರೊ ಮಾತನಾಡಿ, ನಿನ್ನೆ ಮುಂಜಾನೆ ಅಪಘಾತ ಸಂಭವಿಸಿದೆ. ಬಸ್ ಮತ್ತು ಟ್ರಕ್ ಡಿಕ್ಕಿಯಾಗಿತ್ತು. ಎರಡು ವಾಹನಗಳು ಗುದ್ದಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ವಾಹನದಲ್ಲಿ ಸಿಲುಕಿಕೊಂಡಿದ್ದ ಹನ್ನೊಂದು ಜನರು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದಾರೆ. ಚಾಲಕರ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ. ವಾಹನಗಳು ಬೆಂಕಿಯಿಂದ ಹೊತ್ತಿ ಉರಿದ ಕಾರಣ ಅಗ್ನಿಶಾಮಕ ಸಿಬ್ಬಂದಿ ಬರುವವರೆಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಇಲ್ಲಿ ರಸ್ತೆ ಅಪಘಾತಗಳು ಸಾಮಾನ್ಯ: ನೈಜೀರಿಯಾದ ಹಲವು ಭಾಗಗಳಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿವೆ. ಇಲ್ಲಿನ ರಸ್ತೆಗಳು ಕಳಪೆ ಸ್ಥಿತಿಯಲ್ಲಿದ್ದು, ಸಂಚಾರ ನಿಯಮಗಳನ್ನು ಸಾಮಾನ್ಯವಾಗಿ ಯಾರೂ ಪಾಲನೆ ಮಾಡುವುದಿಲ್ಲ. ಅತಿದೊಡ್ಡ ನಗರ ಲಾಗೋಸ್‌ನಲ್ಲಿ ರಸ್ತೆ ಸಂಚಾರ ತುಂಬಾ ಕಳಪೆಯಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ನಿಂತಿದ್ದ ಜನರ ಮೇಲೆ ಹರಿದ ಟ್ರಕ್: 6 ಮಂದಿ ದುರ್ಮರಣ