ಪ್ಯಾರಿಸ್ : ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ದೆಹಲಿ ವಿಮಾನ ನಿಲ್ದಾಣದಿಂದ ಫ್ರಾನ್ಸ್‌ಗೆ ತೆರಳಿದ್ದರು. ಇಂದು ಬೆಳಗ್ಗೆ ಪ್ಯಾರಿಸ್ ಪ್ರವಾಸ ಮುಗಿಸಿ ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಈ ಬೆನ್ನಲ್ಲೇ ಫ್ರಾನ್ಸ್ ಭೇಟಿಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ತಮ್ಮ ಪ್ರವಾಸ ಸ್ಮರಣೀಯ ಎಂದು ಬಣ್ಣಿಸಿದ್ದಾರೆ. ಜೊತೆಗೆ, ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ತುಕಡಿಗೆ ಸ್ಥಾನ ಸಿಕ್ಕಿರುವುದು ಅದ್ಭುತ ಎಂದು ವರ್ಣಿಸಿದ್ದಾರೆ.
"ಈ ಬಾರಿಯ ಫ್ರಾನ್ಸ್ ಭೇಟಿಯು ಸ್ಮರಣೀಯವಾಗಿತ್ತು. ಅದರಲ್ಲೂ ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ವಿಶೇಷ. ಪರೇಡ್‌ನಲ್ಲಿ ಭಾರತೀಯ ತುಕಡಿ ಭಾಗಿಯಾಗಿ ಹೆಮ್ಮೆ ಪಡುವುದನ್ನು ನೋಡಿ ಸಂತಸವಾಯಿತು. ಈ ಪ್ರೀತಿಯ ಆತಿಥ್ಯಕ್ಕಾಗಿ ನಾನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರೆಂಚ್ ಜನರಿಗೆ ಕೃತಜ್ಞನಾಗಿದ್ದೇನೆ. ಭಾರತ-ಫ್ರಾನ್ಸ್ ಸ್ನೇಹವು ಹೀಗೆ ಮುಂದುವರೆಯಲಿ" ಎಂದು ಪರೇಡ್ನ ಛಾಯಾಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ರಕ್ಷಣಾ ಸಹಕಾರವೇ ಭಾರತ - ಫ್ರಾನ್ಸ್ ಬಾಂಧವ್ಯದ ಆಧಾರಸ್ತಂಭ: ಪ್ರಧಾನಿ ಮೋದಿ
ನಿನ್ನೆ ಭಾರತ - ಫ್ರಾನ್ಸ್ ಸ್ಟ್ರಾಟೆಜಿಕ್ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಮಿಲಿಟರಿ ಬ್ಯಾಂಡ್ ನೇತೃತ್ವದ 241 ಸದಸ್ಯ ತ್ರಿಸೇವಾ ಭಾರತೀಯ ಸಶಸ್ತ್ರ ಪಡೆಗಳು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದವು. ಭಾರತೀಯ ವಾಯುಪಡೆಯ (ಐಎಎಫ್) ರಫೇಲ್ ಫೈಟರ್ ಜೆಟ್‌ಗಳು ಫ್ರೆಂಚ್ ಜೆಟ್‌ಗಳೊಂದಿಗೆ ತಾಲೀಮು ನಡೆಸಿದವು. ಪ್ಯಾರಿಸ್‌ನಲ್ಲಿ ನಡೆದ ಈ ಪರೇಡ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಮುಖ ಗಣ್ಯರನ್ನು ಭೇಟಿಯಾದರು.
-
This France visit was a memorable one. It was made even more special because I got the opportunity to take part in the Bastille Day celebrations. Seeing the Indian contingent get a pride of place in the parade was wonderful. I am grateful to President @EmmanuelMacron and the… pic.twitter.com/BllJ8gVj8e
— Narendra Modi (@narendramodi) July 14, 2023 " class="align-text-top noRightClick twitterSection" data="
">This France visit was a memorable one. It was made even more special because I got the opportunity to take part in the Bastille Day celebrations. Seeing the Indian contingent get a pride of place in the parade was wonderful. I am grateful to President @EmmanuelMacron and the… pic.twitter.com/BllJ8gVj8e
— Narendra Modi (@narendramodi) July 14, 2023This France visit was a memorable one. It was made even more special because I got the opportunity to take part in the Bastille Day celebrations. Seeing the Indian contingent get a pride of place in the parade was wonderful. I am grateful to President @EmmanuelMacron and the… pic.twitter.com/BllJ8gVj8e
— Narendra Modi (@narendramodi) July 14, 2023
ಇದನ್ನೂ ಓದಿ : ಹಿಂದಿಯಲ್ಲಿ ಟ್ವೀಟ್ ಮಾಡಿ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಫ್ರಾನ್ಸ್ ಅಧ್ಯಕ್ಷ
ಶುಕ್ರವಾರ ರಾತ್ರಿ, ಮ್ಯಾಕ್ರನ್ ಅವರು ಇಲ್ಲಿನ ಲೌವ್ರೆ ಮ್ಯೂಸಿಯಂನಲ್ಲಿ ಪಿಎಂ ಮೋದಿ ಅವರಿಗಾಗಿ ಔತಣಕೂಟವನ್ನು ಏರ್ಪಡಿಸಿದ್ದರು. ಫ್ರೆಂಚ್ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರು ಮ್ಯೂಸಿಯಂನಲ್ಲಿ ಮೋದಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.
ಇದನ್ನೂ ಓದಿ : ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಬಳಕೆ, ವಿದ್ಯಾರ್ಥಿಗಳಿಗೆ 5 ವರ್ಷದ ದೀರ್ಘಾವಧಿಯ ಪೋಸ್ಟ್ ಸ್ಟಡಿ ವೀಸಾ ಸೌಲಭ್ಯ : ಪ್ರಧಾನಿ ಮೋದಿ
ಇನ್ನು ಫ್ರಾನ್ಸ್‌ನಲ್ಲಿ ಮಾತನಾಡಿದ್ದ ಮೋದಿ, ಆಳವಾದ ನಂಬಿಕೆ ಮತ್ತು ಬದ್ಧತೆಯಿಂದ ನಮ್ಮ ಎರಡು ದೇಶಗಳು ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ವ್ಯಾಪಾರ, ಹೂಡಿಕೆ, ಆರ್ಥಿಕತೆ, ಸಂಸ್ಕೃತಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತೇವೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದಿದ್ದರು.
ಇದನ್ನೂ ಓದಿ : ಆಟಿಸ್ಟಿಕ್ ಗಾಯಕ ವೆಂಕಟ್ ಶ್ಲಾಘಿಸಿದ ಪಿಎಂ ಮೋದಿ : ಈವರೆಗೆ 500 ಶೋಗಳ ಪ್ರದರ್ಶನ, ರಾಷ್ಟ್ರಪತಿಗಳಿಂದ ಪ್ರಶಸ್ತಿ