ETV Bharat / international

ಬೋಯಿಂಗ್ 737-800 ವಿಮಾನ ಪತನ : ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆ - ಬೋಯಿಂಗ್ 737-800 ವಿಮಾನ ಪತನ

ನಾಲ್ಕು ದಿನಗಳ ಹಿಂದೆ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಪತ್ತೆಯಾದ ನಂತರ ಶೋಧಕರು ಡೇಟಾ ರೆಕಾರ್ಡರ್‌ಗಾಗಿ ಹುಡುಕುತ್ತಿದ್ದರು. ಇನ್ನು ಈ ಬ್ಲ್ಯಾಕ್ ಬಾಕ್ಸ್‌ಗಳು ತನಿಖಾಧಿಕಾರಿಗಳಿಗೆ, ವಿಮಾನವು 29,000 ಅಡಿಗಳಿಂದ (8,800 ಮೀಟರ್) ಬೀಳಲು ಕಾರಣ ಏನು ಎಂದು ನಿರ್ಧರಿಸಲು ಸಹಾಯ ಮಾಡುತ್ತವೆ..

ಬೋಯಿಂಗ್ 737-800 ವಿಮಾನ ಪತನ: ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆ

author img

By

Published : Mar 27, 2022, 7:17 PM IST

ಬೀಜಿಂಗ್ : ಚೀನಾದ ಈಸ್ಟರ್ನ್ ಬೋಯಿಂಗ್ 737-800 ವಿಮಾನದ ಎರಡನೇ ಬ್ಲ್ಯಾಕ್ ಬಾಕ್ಸ್ ಇಂದು ಪತ್ತೆಯಾಗಿದೆ. ಕಳೆದ ವಾರ ಪ್ರಯಾಣಿಕ ವಿಮಾನವು ದಕ್ಷಿಣ ಚೀನಾದ ದೂರದ ಪರ್ವತ ಪ್ರದೇಶಕ್ಕೆ ಬಿದ್ದ ಪರಿಣಾಮ ವಿಮಾನದಲ್ಲಿದ್ದ ಎಲ್ಲಾ 132 ಜನ ಸಾವಿಗೀಡಾಗಿದ್ದರು. ಇನ್ನು ಬ್ಲ್ಯಾಕ್ ಬಾಕ್ಸ್ ಸಿಕ್ಕಿದ್ದು, ದುರಂತಕ್ಕೆ ಕಾರಣ ತಿಳಿದು ಬರಲಿದೆ.

ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ಪರ್ವತದ ಇಳಿಜಾರಿನಲ್ಲಿ ಸುಮಾರು 40 ಮೀಟರ್ (130 ಅಡಿ) ಮತ್ತು 1.5 ಮೀಟರ್ (5 ಅಡಿ) ಭೂಗತದಲ್ಲಿ ಶೋಧದಲ್ಲಿ ಭಾಗವಹಿಸಿದ್ದ ಅಗ್ನಿಶಾಮಕ ದಳದವರು ಪತ್ತೆ ಮಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದು ಎರಡನೇ ಬ್ಲ್ಯಾಕ್ ಬಾಕ್ಸ್ ಎಂದು ತಜ್ಞರು ದೃಢಪಡಿಸಿದ್ದಾರೆ. ಇನ್ನು ಈ ಅಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ಪರ್ವತದ ಬದಿಯಲ್ಲಿ 20-ಮೀಟರ್ ಆಳವಾದ ಹೊಂಡವನ್ನು ಸೃಷ್ಟಿಸಿದೆ. ಮತ್ತು ವ್ಯಾಪಕವಾಗಿ ಚದುರಿದ ಅವಶೇಷಗಳು ಕಂಡು ಬಂದಿವೆ.

ಇದನ್ನೂ ಓದಿ:ಮುಂದಿನ 100 ದಿನಗಳ ಕ್ರಿಯಾ ಯೋಜನೆ ರೂಪಿಸುವಂತೆ ಉನ್ನತ ಅಧಿಕಾರಿಗಳಿಗೆ ಯೋಗಿ ಸರ್ಕಾರದ ಸೂಚನೆ

ನಾಲ್ಕು ದಿನಗಳ ಹಿಂದೆ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಪತ್ತೆಯಾದ ನಂತರ ಶೋಧಕರು ಡೇಟಾ ರೆಕಾರ್ಡರ್‌ಗಾಗಿ ಹುಡುಕುತ್ತಿದ್ದರು. ಇನ್ನು ಈ ಬ್ಲ್ಯಾಕ್ ಬಾಕ್ಸ್‌ಗಳು ತನಿಖಾಧಿಕಾರಿಗಳಿಗೆ, ವಿಮಾನವು 29,000 ಅಡಿಗಳಿಂದ (8,800 ಮೀಟರ್) ಬೀಳಲು ಕಾರಣ ಏನು ಎಂದು ನಿರ್ಧರಿಸಲು ಸಹಾಯ ಮಾಡುತ್ತವೆ.

ಈ ವಿಮಾನವು ಕಳೆದ ಸೋಮವಾರ ಆಗ್ನೇಯ ಚೀನಾದ ಕುನ್ಮಿಂಗ್ ನಗರದಿಂದ ಹಾಂಗ್ ಕಾಂಗ್ ಬಳಿಯ ಪ್ರಮುಖ ನಗರ ಮತ್ತು ರಫ್ತು ಉತ್ಪಾದನಾ ಕೇಂದ್ರವಾದ ಗುವಾಂಗ್‌ಝೌಗೆ ಹೋಗುವ ಮಾರ್ಗದಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆ ನಡೆದ ಎರಡು ದಿನಗಳ ನಂತರ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಪತ್ತೆಯಾಗಿದ್ದು, ಇದನ್ನು ಪರೀಕ್ಷೆ ಮತ್ತು ವಿಶ್ಲೇಷಣೆಗಾಗಿ ಬೀಜಿಂಗ್ ಲ್ಯಾಬ್‌ಗೆ ಕಳುಹಿಸಲಾಗಿದೆ ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ಡಿಕೋಡಿಂಗ್‌ಗಾಗಿ ಚೀನಾದ ರಾಜಧಾನಿಗೆ ಕಳುಹಿಸಲಾಗುತ್ತಿದೆ.

ಈ ಘಟನೆಯಲ್ಲಿ ಬದುಕುಳಿದವರು ಯಾರೂ ಇಲ್ಲ ಎಂದು ಅಧಿಕಾರಿಗಳು ಶನಿವಾರ ತಡರಾತ್ರಿ ಘೋಷಿಸಿದ್ದರು. ಡಿಎನ್‌ಎ ವಿಶ್ಲೇಷಣೆಯು ವಿಮಾನದಲ್ಲಿದ್ದ 120 ಜನರ ಗುರುತುಗಳನ್ನು ದೃಢಪಡಿಸಿದೆ ಎಂದು ಅವರು ಹೇಳಿದ್ದಾರೆ. ಸಂತ್ರಸ್ತರಿಗೆ ಸೇರಿದ ಐಡಿ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ಶೋಧಕರು ಪತ್ತೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.