ಚಿಕಾಗೋ: ಎರಡನೇ ಮಹಾಯುದ್ಧದ ವೇಳೆ ಅಮೆರಿಕದ ಪರ್ಲ್ ಹಾರ್ಬರ್ ಮೇಲೆ ಜರ್ಮನಿ ನಡೆಸಿದ ದಾಳಿಯಲ್ಲಿ ಸಾವಿರಾರು ಯೋಧರು ಪ್ರಾಣ ಕಳೆದುಕೊಂಡಿದ್ದರು. 80 ವರ್ಷಗಳ ಹಿಂದೆ ನಡೆದ ದಾಳಿಯಲ್ಲಿ ಮೃತಪಟ್ಟಿದ್ದವರ ಪೈಕಿ 21 ವರ್ಷದ ನಾವಿಕನ ಶವದ ಅವಶೇಷಗಳನ್ನು ಗುರುತಿಸಿ ಇಂದು ಅಂತ್ಯಕ್ರಿಯೆ ಮಾಡಲಾಗಿದೆ.
ಬರ್ಟ್ ಕುಟುಂಬದ ಜಾಕೋಬ್ಸನ್ ಗುರುತಿಸಲಾದ ನಾವಿಕ. ಬರ್ಟ್ ಕುಟುಂಬಸ್ಥರಿಗೆ 1941 ರಲ್ಲಿ ನಡೆದ ದಾಳಿಯ ಬಳಿಕ ಜಾಕೋಬ್ಸನ್ ಬಗ್ಗೆ ಸುಳಿವೇ ಸಿಕ್ಕಿರಲಿಲ್ಲ. ಒಕ್ಲಹೋಮದ ಪರ್ಲ್ ಹಾರ್ಬರ್ ದುರಂತದಲ್ಲಿ 400 ಕ್ಕೂ ಅಧಿಕ ನಾವಿಕರು ಹತರಾಗಿದ್ದರು. ಅವರಲ್ಲಿ ಜಾಕೋಬ್ಸನ್ ಕೂಡ ಒಬ್ಬರಾಗಿದ್ದರು.
ಅಂದಿನ ದುರಂತದಲ್ಲಿ ಯುದ್ಧನೌಕೆ ಮುಳುಗಿತ್ತು. ಅದರಲ್ಲಿ ಮೃತಪಟ್ಟವರ ಶವಗಳ ಅವಶೇಷಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ನಡೆದಿತ್ತು. ಪೆಸಿಫಿಕ್‌ನ ನ್ಯಾಷನಲ್ ಮೆಮೋರಿಯಲ್ನಲ್ಲಿ ಶವಗಳ ಮರುಹೊಂದಿಸು ಕಾರ್ಯನ ನಡೆಯಿತು. ಹೀಗೆ 100 ಕ್ಕೂ ಅಧಿಕ ಅವಶೇಷಗಳನ್ನು ಹೊರತೆಗೆಯಲಾಗಿತ್ತು. ಇದರಲ್ಲಿ 27 ಶವಗಳ ಅವಶೇಷಗಳನ್ನು ಪತ್ತೆ ಮಾಡಲಾಗಿಲ್ಲ.
2015ರಲ್ಲಿ 355 ಪುರುಷ ಶವಗಳ ಅವಶೇಷಗಳನ್ನು ಹೊರತೆಗೆದು ಮರು ಜೋಡಣೆ ಮಾಡಲಾಗಿತ್ತು. ಇದರಲ್ಲಿ ಜಾಕೋಬ್ಸನ್ ಶವದ ಅವಶೇಷವೂ ಇತ್ತು. ಇದನ್ನು ಜಾಕೋಬ್ಸನ್ ಅವರ ಕುಟುಂಬಸ್ಥರು 2019 ರಲ್ಲಿ ಗುರುತಿಸಿದ್ದರು. ಬಳಿಕ ಅವಶೇಷಗಳನ್ನು ವಶಕ್ಕೆ ನೀಡಲು ಕುಟುಂಬ ಕೋರಿತ್ತು. ಆದರೆ, ನಿಯಮಗಳು ಮತ್ತು ಕೋವಿಡ್ ಕಾರಣದಿಂದಾಗಿ ಇದು ಸಾಧ್ಯವಾಗಿರಲಿಲ್ಲ. 3 ವರ್ಷಗಳ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.
ಓದಿ: ಬಲೂಚ್ ಮಹಿಳೆಯರನ್ನು ಎಳೆದಾಡಿದ ಪೊಲೀಸರು.. ಪಾಕ್ ಸರ್ಕಾರದ ಅಮಾನವೀಯ ಕೃತ್ಯ