ETV Bharat / international

ಜೆಲೆನ್​ಸ್ಕಿದು ಯಹೂದಿ ರಕ್ತ: ಉಕ್ರೇನ್​ ಅಧ್ಯಕ್ಷರನ್ನು ಹಿಟ್ಲರ್​ಗೆ ಹೋಲಿಸಿದ ರಷ್ಯಾ - ವೊಲೊಡಿಮಿರ್​ ಜೆಲೆನ್​ಸ್ಕಿ ವಿರುದ್ಧ ರಷ್ಯಾ ವಿದೇಶಾಂಗ ಸಚಿವ ಟೀಕೆ

ರಷ್ಯಾ ವಿದೇಶಾಂಗ ಸಚಿವ ಉಕ್ರೇನ್​ ಅಧ್ಯಕ್ಷರನ್ನು ಜರ್ಮನ್​ ಸರ್ವಾಧಿಕಾರಿ ಹಿಟ್ಲರ್​ಗೆ ಹೋಲಿಕೆ ಮಾಡಿದ್ದಾರೆ. ಇದೇ ವೇಳೆ ಯಹೂದಿಗಳನ್ನು ಟೀಕೆ ಮಾಡಿದ್ದರ ವಿರುದ್ಧ ಇಸ್ರೇಲ್​ ಆಕ್ಷೇಪ ವ್ಯಕ್ತಪಡಿಸಿದೆ.

russian-foreign-minister
ಹಿಟ್ಲರ್​ಗೆ ಹೋಲಿಸಿದ ರಷ್ಯಾ
author img

By

Published : May 2, 2022, 3:35 PM IST

ರಷ್ಯಾದ ನಿರಂತರ ದಾಳಿಯನ್ನು ನ್ಯಾಟೋ ರಾಷ್ಟ್ರಗಳ ಸಹಾಯದಿಂದ ತಡೆವೊಡ್ಡುತ್ತಿರುವ ಉಕ್ರೇನ್​ ಅಧ್ಯಕ್ಷರ ವಿರುದ್ಧ ರಷ್ಯಾ ಕೆಂಡಕಾರಿದೆ. ಅಲ್ಲದೇ, ವೊಲೊಡಿಮಿರ್​ ಜೆಲೆನ್​​ಸ್ಕಿ ಜರ್ಮನ್​ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್​ ಹಿಟ್ಲರ್​ ಇದ್ದಂತೆ. ಯಹೂದಿಯಾಗಿರುವ ಜೆಲೆನ್​ಸ್ಕಿ ಹಿಟ್ಲರ್​ನಂತೆ ರಕ್ತದಾಹಿ ಎಂದು ಟೀಕಿಸಿದೆ.

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಉಕ್ರೇನ್ ಅಧ್ಯಕ್ಷರ ವಿರುದ್ಧ ಭಾವೋದ್ವೇಗದ ಹೇಳಿಕೆ ನೀಡಿದ್ದು, ವೊಲೊಡಿಮಿರ್ ಜೆಲೆನ್​ಸ್ಕಿಯನ್ನು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್​ಗೆ ಹೋಲಿಸಿದ್ದಾರೆ. ಜೆಲೆನ್​ಸ್ಕಿ ಮತ್ತು ಹಿಟ್ಲರ್ ಇಬ್ಬರೂ ನಾಜಿಗಳು. ಅವರಲ್ಲಿ ಯಹೂದಿ ರಕ್ತ ಇದೆ ಎಂದು ವಿವಾದ ಉಂಟು ಮಾಡುವ ಹೇಳಿಕೆ ನೀಡಿದ್ದಾರೆ.

ರಷ್ಯಾ ವಿದೇಶಾಂಗ ಸಚಿವ ಈ ಹೇಳಿಕೆಯನ್ನು ಖಂಡತುಂಡವಾಗಿ ವಿರೋಧಿಸಿರುವ ಇಸ್ರೇಲ್​, ಸೆರ್ಗೆಯ್​ ಲಾವ್ರೊವ್​ ಅವರ ಹೇಳಿಕೆ 'ಕ್ಷಮಿಸಲಾಗದ, ಅತಿರೇಕದ ಮತ್ತು ಐತಿಹಾಸಿಕ ತಪ್ಪು' ಎಂದು ಟೀಕಿಸಿದೆ. ಹತ್ಯಾಕಾಂಡದಲ್ಲಿ ಯಹೂದಿಗಳು ಎಂದೂ ಕೊಲೆ ಮಾಡಿಲ್ಲ. ಯಹೂದಿಗಳ ವಿರುದ್ಧದ ಅತ್ಯಂತ ಕೆಳಮಟ್ಟದ ವರ್ಣಭೇದ ನೀತಿ ಎಂದರೆ ನಮ್ಮ ವಿರುದ್ಧವೇ ದಾಳಿ ಮಾಡಿ ನಮ್ಮನ್ನೇ ಟೀಕಿಸುವುದು ಎಂದು ಇಸ್ರೇಲ್​ ಕಿಡಿಕಾರಿದೆ.

ರಷ್ಯಾದ ಹೇಳಿಕೆಯ ಬಳಿಕ ಪ್ರತಿಭಟನೆ ವ್ಯಕ್ತಪಡಿಸಿದ ಇಸ್ರೇಲ್​ ರಷ್ಯಾದ ರಾಯಭಾರಿಗಳನ್ನು ತಮ್ಮ ದೇಶಕ್ಕೆ ಕರೆಸಿಕೊಂಡು ವಿವರಣೆ ಕೇಳಿದೆ.

ಓದಿ: ಹಿರಿಯ ನಟ ಮಿಥುನ್​ ಚಕ್ರವರ್ತಿಗೆ ಮೂತ್ರಪಿಂಡದಲ್ಲಿ ಕಲ್ಲು, ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.