ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಮೇಲೆ 51 ದಿನಗಳಿಂದ ಯುದ್ಧ ಮುಂದುವರಿಸಿರುವ ರಷ್ಯಾಗೆ, ಉಕ್ರೇನ್ ಪಡೆಗಳು ದಾಳಿ ಮಾಡಿ ಯುದ್ಧ ನೌಕೆಯನ್ನು ಧ್ವಂಸ ಮಾಡಿವೆ. ಇದರ ವಿರುದ್ಧ ಸಿಡಿದೆದ್ದಿರುವ ರಷ್ಯಾ ಉಕ್ರೇನ್ ಪ್ರದೇಶಗಳ ಮೇಲೆ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಈ ಮಧ್ಯೆಯೇ ಉಕ್ರೇನ್ಗೆ ಭಾರಿ ಯುದ್ಧ ಶಸ್ತ್ರಾಸ್ತ್ರಗಳ ಪೂರೈಕೆ, 800 ಮಿಲಿಯನ್ ಮಿಲಿಟರಿ ಆರ್ಥಿಕ ನೆರವು ಘೋಷಿಸಿದ ಅಮೆರಿಕಕ್ಕೆ, ರಷ್ಯಾ ಖಡಕ್ ಎಚ್ಚರಿಕೆ ನೀಡಿದೆ. ಉಕ್ರೇನ್ಗೆ ಶಸ್ತ್ರಾಸ್ತ್ರಗಳ ಹೆಚ್ಚಿನ ನೆರವು ನೀಡಿದರೆ, 'ಮುಂದೆ ಊಹಿಸಲಾಗದ ಪರಿಣಾಮ ಎದುರಿಸಬೇಕಾಗುತ್ತದೆ' ಎಂದಿದೆ.
ಉಕ್ರೇನ್ಗೆ ಅತ್ಯಂತ ಸೂಕ್ಷ್ಮ ಶಸ್ತ್ರಾಸ್ತ್ರಗಳ ನೆರವು ನೀಡುತ್ತಿರುವ ಅಮೆರಿಕ, ನ್ಯಾಟೋ ಪಡೆಗಳ ಬಗ್ಗೆ ಕಿಡಿಕಾರಿರುವ ರಷ್ಯಾ, ಉಕ್ರೇನ್ಗೆ ಮಿಲಿಟರಿ ಸಹಾಯ ಮಾಡುವುದನ್ನು ನಿಲ್ಲಿಸಿ. ಇದು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ನಿಲುವಾಗಿದೆ. ಇದನ್ನು ಮುಂದುವರಿಸಿದ್ದೇ ಆದಲ್ಲಿ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಆಗಿ ಹೇಳಿದೆ.
ನ್ಯೂಕ್ಲಿಯರ್ ಬಾಂಬ್ ಬೆದರಿಕೆ: ಕೆಲ ದಿನಗಳ ಹಿಂದಷ್ಟೇ ಅಮೆರಿಕ, ನ್ಯಾಟೋ ಪಡೆಗಳ ವಿರುದ್ಧ ಗುಡುಗಿದ್ದ ರಷ್ಯಾ, ಉಕ್ರೇನ್ಗೆ ಸಹಾಯ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ರಷ್ಯಾ ತನ್ನ ಭದ್ರತೆಗಾಗಿ ನ್ಯೂಕ್ಲಿಯರ್ ಬಾಂಬ್ಗಳನ್ನು ನಿಯೋಜಿಸಲಾಗುವುದು ಎಂದಿತ್ತು.
ಓದಿ: ಟ್ವಿಟ್ಟರ್ ಖರೀದಿಸುವ ಎಲಾನ್ ಮಸ್ಕ್ ಕನಸಿಗೆ ಭಂಗ.. ಇದು ಕ್ರಮಬದ್ಧವಲ್ಲದ ನಿರ್ಧಾರ ಎಂದ ಮಂಡಳಿ