ETV Bharat / international

ಉಕ್ರೇನ್​ ಬೀದಿಗಳಲ್ಲಿ ನಾಗರಿಕರ ಶವಗಳು ಪತ್ತೆ: ರಷ್ಯಾ ವಿರುದ್ಧ ಹೆಚ್ಚಿದ ಆಕ್ರೋಶ - ಉಕ್ರೇನ್‌ನಲ್ಲಿ ನಾಗರಿಕರ ಹತ್ಯೆ

ರಷ್ಯಾದಿಂದ ಇಂಧನ ಆಮದು ಕಡಿತಗೊಳಿಸಲು ಅನೇಕ ರಾಷ್ಟ್ರಗಳು ಮುಂದಾಗಿದೆ. ಅಲ್ಲದೇ, ಜರ್ಮನಿ ಮತ್ತು ಫ್ರಾನ್ಸ್ ರಾಷ್ಟ್ರಗಳು ರಷ್ಯಾದ ರಾಜತಾಂತ್ರಿಕರನ್ನು ವಜಾ ಮಾಡುವ ಮೂಲಕ ರಷ್ಯಾಕ್ಕೆ ವಿರುದ್ಧ ಪಾಠ ಕಲಿಸುತ್ತಿವೆ.

ಉಕ್ರೇನ್​ ಬೀದಿಗಳಲ್ಲಿ ನಾಗರಿಕರ ಶವಗಳು ಪತ್ತೆ: ರಷ್ಯಾ ವಿರುದ್ಧ ಹೆಚ್ಚಿದ ಆಕ್ರೋಶ

author img

By

Published : Apr 5, 2022, 3:35 PM IST

ಬುಕಾ(ಉಕ್ರೇನ್​): ಯುದ್ಧ ಪೀಡಿತ ಉಕ್ರೇನ್​ ಈಗ ಸ್ಮಶಾನ ಭೂಮಿಯಾಗಿದೆ. ಬೀದಿಗಳಲ್ಲಿ ನೂರಾರು ಜನರ ಶವಗಳು ಪತ್ತೆಯಾಗುತ್ತಿದ್ದು, ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳು ಮತ್ತಷ್ಟು ನಿರ್ಬಂಧಗಳನ್ನು ವಿಧಿಸುತ್ತಿವೆ.

ಕೀವ್​ನ ಹೊರವಲಯದಿಂದ ರಷ್ಯಾ ಸೇನೆ ಮರಳಿದ ಬಳಿಕ ಎಲ್ಲೆಂದರಲ್ಲಿ ನಾಗರಿಕರ ಶವಗಳೇ ಪತ್ತೆಯಾಗುತ್ತಿವೆ. ಬೀದಿಗಳು, ಕಟ್ಟಡಗಳು ಮತ್ತು ಬಯಲು ಪ್ರದೇಶಗಳಲ್ಲಿ ಭೀಕರವಾಗಿ ಸುಟ್ಟ ಸ್ಥಿತಿ, ಅರ್ಧಂಬರ್ಧ ಸಮಾಧಿ ಮಾಡಿದ ಸ್ಥಿತಿಯಲ್ಲಿ ಮೃತದೇಹಗಳ ರಾಶಿ ಬಿದ್ದಿವೆ ಎಂದು ವರದಿಯಾಗಿದೆ. ಹೀಗಾಗಿ ರಷ್ಯಾ ವಿರುದ್ಧ ಯುದ್ಧಾಪರಾಧ ಆರೋಪ ಹೊರೆಸಲಾಗುತ್ತಿದೆ.

ಜತೆಗೆ ರಷ್ಯಾದಿಂದ ಇಂಧನ ಆಮದು ಕಡಿತಗೊಳಿಸಲು ಅನೇಕ ರಾಷ್ಟ್ರಗಳು ಮುಂದಾಗಿದೆ. ಅಲ್ಲದೇ, ಜರ್ಮನಿ ಮತ್ತು ಫ್ರಾನ್ಸ್ ರಾಷ್ಟ್ರಗಳು ರಷ್ಯಾದ ರಾಜತಾಂತ್ರಿಕರನ್ನು ವಜಾ ಮಾಡುವ ಮೂಲಕ ರಷ್ಯಾಕ್ಕೆ ವಿರುದ್ಧ ಪಾಠ ಕಲಿಸುತ್ತಿವೆ. ಇತ್ತ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಕ್ರೇನ್‌ನಲ್ಲಿನ ನಾಗರಿಕರ ಹತ್ಯೆ ಆರೋಪ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಯುದ್ಧಾಪರಾಧ ತನಿಖೆಗೆ ಕರೆ ನೀಡಿದ್ದಾರೆ. 'ಈ (ಪುಟಿನ್​) ವ್ಯಕ್ತಿ ಕ್ರೂರಿ.. ಉಕ್ರೇನ್‌ನ ಬುಕಾದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡಬಹುದು’ ಎಂದೂ ಬೈಡನ್ ಕಿಡಿಕಾರಿದ್ದಾರೆ.

ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ಬುಕಾದಲ್ಲಿ ನರಮೇಧ ಮತ್ತು ಯುದ್ಧ ಅಪರಾಧ ನಡೆಸಲಾಗಿದೆ ಎಂದು ಹೇಳಿದ್ದಾರೆ. ಜತೆಗೆ ನಾಗರಿಕರ ಕೊಲೆ ಬಗ್ಗೆ ಪ್ರತಿಯೊಬ್ಬ ರಷ್ಯನ್ನರೂ ಕೂಡ ಸಂಪೂರ್ಣ ಸತ್ಯ ತಿಳಿಯುವ ಸಮಯ ಬರುತ್ತದೆ ಎಂದು ಹೇಳಿದ್ದಾರೆ. ಇತ್ತ, ಪತ್ರಕರ್ತರು ಸಹ ಬುಕಾದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಕನಿಷ್ಠ 21 ಜನರ ಶವಗಳನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಇನ್ನು ಕೀವ್ ಪ್ರದೇಶದಲ್ಲಿ ಒಟ್ಟು 410 ನಾಗರಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಆರೋಪ ಅಲ್ಲಗಳೆದ ರಷ್ಯಾ: ಉಕ್ರೇನ್‌ನಲ್ಲಿ ನಾಗರಿಕರ ಹತ್ಯೆ ಕುರಿತ ಆರೋಪವನ್ನು ರಷ್ಯಾ ಅಲ್ಲಗಳೆದಿದೆ. ಹತ್ಯೆಗಳ ಬಗ್ಗೆ ಫೇಕ್​ ಫೋಟೋಗಳನ್ನು ಹರಿಬಿಡಲಾಗುತ್ತಿದೆ ಎಂದು ರಷ್ಯಾ ಹೇಳಿದೆ.

ಇದನ್ನೂ ಓದಿ: ಯುಕ್ರೇನ್‌ ಪೂರ್ವ, ದಕ್ಷಿಣಕ್ಕೆ ರಷ್ಯಾ ದಂಡಯಾತ್ರೆ ಸಾಧ್ಯತೆ: ಅಮೆರಿಕ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.