ಲಂಡನ್: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಳೆದ ಕೆಲ ವಾರಗಳ ಹಿಂದೆ ಪತ್ನಿ ಅಕ್ಷತಾ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯುಕೆ ಪ್ರಧಾನಮಂತ್ರಿ ಹುದ್ದೆಯ ಪ್ರಬಲ ಸ್ಪರ್ಧಿ ರಿಷಿ ಸುನಕ್ ಅವರ ಮನೆಯಲ್ಲಿ ಗೋ ಪೂಜೆ ನಡೆಸಲಾಗಿದೆ. ಅದರ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬ್ರಿಟಿಷ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗುವ ಪ್ರಬಲ ಸ್ಪರ್ಧೆಯಲ್ಲಿ ಅಂತಿಮ ಘಟ್ಟದಲ್ಲಿರುವ ರಿಷಿ ಸುನಕ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಮೇಲಿಂದ ಮೇಲೆ ಹೊಸ ಹೊಸ ವಿಡಿಯೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರ ನಿವಾಸದಲ್ಲಿ ಹಸುವಿನ ಪೂಜೆ ಮಾಡಲಾಗಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಸಹ ಉಪಸ್ಥಿತರಿದ್ದರು. ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪ್ರಕಾರ ಹಸುವಿನ ಪೂಜೆ ನಡೆಸಲಾಗಿದೆ.
-
Who? Rishi Sunak (PM candidate)
— Sumit Arora (@LawgicallyLegal) August 25, 2022 " class="align-text-top noRightClick twitterSection" data="
Where ? London, England
What ? Performing Cow worship
That’s our rich cultural heritage we must be proud about.
तत् त्वम असि = Tat twam asi #Hinduism #Rishisunak #India #London #Hindutva pic.twitter.com/aaKdz9UM5R
">Who? Rishi Sunak (PM candidate)
— Sumit Arora (@LawgicallyLegal) August 25, 2022
Where ? London, England
What ? Performing Cow worship
That’s our rich cultural heritage we must be proud about.
तत् त्वम असि = Tat twam asi #Hinduism #Rishisunak #India #London #Hindutva pic.twitter.com/aaKdz9UM5RWho? Rishi Sunak (PM candidate)
— Sumit Arora (@LawgicallyLegal) August 25, 2022
Where ? London, England
What ? Performing Cow worship
That’s our rich cultural heritage we must be proud about.
तत् त्वम असि = Tat twam asi #Hinduism #Rishisunak #India #London #Hindutva pic.twitter.com/aaKdz9UM5R
ಇದನ್ನೂ ಓದಿ: ಪತ್ನಿ ಅಕ್ಷತಾ ಜೊತೆ ದೇವಸ್ಥಾನಕ್ಕೆ ರಿಷಿ ಸುನಕ್ ಭೇಟಿ: ಮನೆಯಲ್ಲಿ ಕೃಷ್ಣಜನ್ಮಾಷ್ಟಮಿ ಸಂಭ್ರಮ
ಈ ಹಿಂದೆ 2020ರ ನವೆಂಬರ್ ತಿಂಗಳಲ್ಲೂ ಇವರು ದೀಪಾವಳಿ ಹಬ್ಬ ಆಚರಿಸಿ ಯುಕೆಯಲ್ಲಿ ವಾಸವಾಗಿರುವ ಭಾರತೀಯರ ಪ್ರಶಂಸೆ ಗಳಿಸಿದ್ದರು. ಕಳೆದ ತಿಂಗಳು ಶ್ರೀಕೃಷ್ಣನ ಜನ್ಮಾಷ್ಟಮಿ ಅಂಗವಾಗಿ ಪತ್ನಿ ಅಕ್ಷತಾ ಅವರೊಂದಿಗೆ ಭಕ್ತಿವೇದಾಂತ್ ಮೇನರ್ ದೇವಾಲಯಕ್ಕೆ ಭೇಟಿ ನೀಡಿದ್ದ ಅವರು, ಪೂಜೆಯಲ್ಲಿ ಭಾಗಿಯಾಗಿದ್ದರು.
ಅಕ್ಷತಾ ಮೂರ್ತಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ MBA ಓದುತ್ತಿದ್ದಾಗ ಇಬ್ಬರು ಭೇಟಿಯಾಗಿದ್ದರು. 2006 ರಲ್ಲಿ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಲಂಡನ್ ಪ್ರಧಾನಿ ಹುದ್ದೆಯ ರೇಸ್ನಲ್ಲಿ ರಿಷಿ ಸುನಕ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಇದ್ದು, ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಂತಿಮ ಫಲಿತಾಂಶ ಸೆಪ್ಟೆಂಬರ್ 5 ರಂದು ಪ್ರಕಟವಾಗಲಿದೆ.