ಬೋಸ್ಟನ್ (ಯುಎಸ್ಎ) : ಸಮುದ್ರಯಾನದಲ್ಲಿ ಮುಳುಗಿದ್ದ ಬೃಹತ್ ಟೈಟಾನಿಕ್ ಹಡಗಿನ ಶೋಧಕ್ಕೆ ಹೋಗಿದ್ದ ಟೈಟಾನಿಕ್ ಎಂಬ ಮಿನಿ ಜಲಾಂತರ್ಗಾಮಿ ಇತ್ತೀಚೆಗೆ ಕಾಣೆಯಾಗಿತ್ತು. ಇದೀಗ ಈ ನೌಕೆಯಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಕೆಲವೇ ಗಂಟೆಗಳಿಗೆ ಆಗುವಷ್ಟು ಮಾತ್ರ ಆಮ್ಲಜನಕ ಇರುವುದರಿಂದ ಅದರಲ್ಲಿರುವ ಸಂಶೋಧಕರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದೇ ಹೇಳಲಾಗುತ್ತಿದೆ.
ಜಲಾಂತರ್ಗಾಮಿ ಕಾಣೆಯಾಗಿರುವ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಹೆಚ್ಚಿನ ಹಡಗುಗಳ ಮೂಲಕ ಧಾವಿಸಿದ್ದಾರೆ. ಈ ಹುಡುಕಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಟೈಟಾನ್ ಎಂದು ಕರೆಯಲ್ಪಡುವ ನೌಕೆಯು ಭಾನುವಾರ ಬೆಳಿಗ್ಗೆ 6 ಗಂಟೆಗೆ ಹೊರಟಾಗ ಸಿಬ್ಬಂದಿಗೆ ಕೇವಲ ನಾಲ್ಕು ದಿನಗಳಿಗೆ ಬೇಕಾಗುವಷ್ಟು ಆಮ್ಲಜನಕ ಸಂಗ್ರಹವಿತ್ತು ಎಂದು ತಿಳಿದು ಬಂದಿದೆ.
ಈ ಮೊದಲು ಜಲಾಂತರ್ಗಾಮಿ ಪತ್ತೆ ಹಚ್ಚುವ ಆಶಾವಾದ ವ್ಯಕ್ತವಾಗಿದ್ದರೂ ಸಹ ಇದೀಗ ಅನೇಕ ಅಡೆತಡೆಗಳು ಎದುರಾಗಿವೆ. ಹಡಗಿನ ಸ್ಥಳ ಗುರುತಿಸುವುದರಿಂದ ಹಿಡಿದು, ರಕ್ಷಣಾ ಸಾಧನಗಳೊಂದಿಗೆ ಅದನ್ನು ತಲುಪುವುದು, ಮೇಲ್ಮೈಗೆ ತರುವುದೆಲ್ಲ ಸದ್ಯಕ್ಕೆ ಸವಾಲಿನ ಕೆಲಸವಾಗಿದೆ. ಅದರೆ ಈ ಎಲ್ಲ ಕೆಲಸಗಳು ಆಮ್ಲಜನಕದ ಪೂರೈಕೆ ಮುಗಿಯುವ ಮೊದಲೇ ನಡೆಯಬೇಕಿದೆ.
ಸಂಶೋಧಕರ ಉದ್ದೇಶವೇನು?: 13,200 ಅಡಿ (4,020 ಮೀಟರ್‌ಗಳು) ಆಳದ ನೀರಿನಲ್ಲಿ ಟೈಟಾನಿಕ್ ಹಡಗು ಮುಳುಗಿದ್ದು ಅದನ್ನು ಶೋಧಿಸಲಾಗುತ್ತಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿ ಟೈಟಾನಿಕ್ ಜಲಾಂತರ್ಗಾಮಿಯಲ್ಲಿ ಐವರು ಪ್ರಯಾಣಿಕರ ಪ್ರಾಣ ಕಾಪಾಡುವ ಭರವಸೆ ನೀಡಿದ್ದಾರೆ.
ಟೈಟಾನ್ ಭಾನುವಾರ ಕಣ್ಮರೆಯಾದ ಉತ್ತರ ಅಟ್ಲಾಂಟಿಕ್ ಸಮುದ್ರ ಪ್ರದೇಶವು ದಟ್ಟ ಮಂಜು ಮತ್ತು ಬಿರುಗಾಳಿ ಪರಿಸ್ಥಿತಿಗಳಿಗೆ ಆಗಾಗ್ಗೆ ಗುರಿಯಾಗುತ್ತದೆ. ಇದು ಶೋಧ ಕಾರ್ಯಾಚರಣೆಯನ್ನು ನಡೆಸಲು ಅತ್ಯಂತ ಸವಾಲಿನ ವಾತಾವರಣ ಎಂದು ಸಮುದ್ರಶಾಸ್ತ್ರಜ್ಞ ಡೊನಾಲ್ಡ್ ಮರ್ಫಿ ಹೇಳಿದ್ದಾರೆ.
ಈ ಜಲಂತರ್ಗಾಮಿ ಒಂದು ಸಲಕ್ಕೆ ಕನಿಷ್ಠ ಐವರನ್ನು ಹೊತ್ತೊಯ್ಯಬಲ್ಲದು. ಟೈಟಾನಿಕ್ ಹಡಗು ಇರುವ ಪ್ರದೇಶಕ್ಕೆ ತೆರಳಿ ಅವಶೇಷವನ್ನು ಪೂರ್ಣವಾಗಿ ನೋಡಲು ಸುಮಾರು 8 ಗಂಟೆ ಸಮಯ ಬೇಕು. ನಾಲ್ಕು ದಿನಗಳ ಆಮ್ಲಜನಕದ ಪೂರೈಕೆಯೊಂದಿಗೆ ನೀರಿನೊಳಗೆ ಧುಮುಕುವ ಸಬ್‌ಮರ್ಸಿಬಲ್ ಟೈಟಾನಿಕ್, ಪೈಲಟ್, 3 ಪೇಯಿಂಗ್ ಗೆಸ್ಟ್‌ಗಳನ್ನು ಒಯ್ಯುತ್ತದೆ. ಈಗ ನಾಪತ್ತೆಯಾಗಿರುವ ಜಲಂತರ್ಗಾಮಿಯಲ್ಲಿ ಸಿಬ್ಬಂದಿ ಸೇರಿ ಐವರು ಮಂದಿ ಪ್ರವಾಸಿಗರಿದ್ದಾರೆ.
ಇದನ್ನೂ ಓದಿ: ಸಮುದ್ರದಲ್ಲಿ ಟೈಟಾನಿಕ್ ನೋಡಲು ತೆರಳಿದ್ದ ಐವರು ನಾಪತ್ತೆ.. ಭರದಿಂದ ಸಾಗಿದ ರಕ್ಷಣಾ ಕಾರ್ಯ