ವೆಸ್ಟ್ಮಿನಿಸ್ಟರ್(ಲಂಡನ್): ಏಳು ದಶಕಗಳಿಗೂ ಹೆಚ್ಚು ಕಾಲ ಬ್ರಿಟನ್ ರಾಣಿಯಾಗಿದ್ದ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಸೋಮವಾರ ಪೂರ್ಣಗೊಂಡಿವೆ. ರಾಜಮನೆತನದ ಸಂಪ್ರದಾಯ ಹಾಗೂ ಸರ್ಕಾರಿ ಗೌರವಗಳೊಂದಿಗೆ ಇಲ್ಲಿನ ವೆಸ್ಟ್ಮಿನಿಸ್ಟರ್ ಅಬೆಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಲಂಡನ್‌ನಲ್ಲಿರುವ 700 ವರ್ಷಗಳಿಗೂ ಪುರಾತನವಾದ ವೆಸ್ಟ್ ಮಿನಿಸ್ಟರ್ ಅಬ್ಬೆ ಚರ್ಚ್‌ನ ಅವರಣದಲ್ಲಿ ನಡೆದ ಅಂತಿಮ ಕಾರ್ಯಕ್ಕೆ ಯುಕೆ ಜನತೆ, ಜಗತ್ತಿನೆಲ್ಲೆಡೆಯ ಗಣ್ಯರು ಸಾಕ್ಷಿಯಾದರು.
ಸೇಂಟ್ ಜಾರ್ಜ್ ಚಾಪಲ್ನಲ್ಲಿ ರಾಣಿಯ ಪತಿ ರಾಜ ಫಿಲಿಪ್ ಅವರ ಅಂತ್ಯಕ್ರಿಯೆ ನಡೆಸಿದ ಸ್ಥಳದ ಪಕ್ಕದಲ್ಲೇ ಎಲಿಜಬೆತ್ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ಈ ಸಂದರ್ಭದಲ್ಲಿ ಇಂಗ್ಲೆಂಡ್ ರಾಷ್ಟ್ರಗೀತೆ ನುಡಿಸಲಾಯಿತು. ಗೌರವಾರ್ಥವಾಗಿ ದೇಶಾದ್ಯಂತ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಗಿದೆ.
-
Her Majesty The Queen’s coffin makes its final journey down the Long Walk to Windsor Castle for the Committal Service at St George's Chapel. pic.twitter.com/vqczfMENlM
— The Royal Family (@RoyalFamily) September 19, 2022 " class="align-text-top noRightClick twitterSection" data="
">Her Majesty The Queen’s coffin makes its final journey down the Long Walk to Windsor Castle for the Committal Service at St George's Chapel. pic.twitter.com/vqczfMENlM
— The Royal Family (@RoyalFamily) September 19, 2022Her Majesty The Queen’s coffin makes its final journey down the Long Walk to Windsor Castle for the Committal Service at St George's Chapel. pic.twitter.com/vqczfMENlM
— The Royal Family (@RoyalFamily) September 19, 2022
ಇದನ್ನೂ ಓದಿ: ರಾಣಿ ಎಲಿಜಬೆತ್ ಅಂತ್ಯಕ್ರಿಯೆ ಇಂದು: ಲಂಡನ್ಗೆ ಆಗಮಿಸಿದ ವಿಶ್ವ ನಾಯಕರು
ಸುಮಾರು 70 ವರ್ಷಗಳ ಕಾಲ ಬ್ರಿಟನ್ ರಾಣಿಯಾಗಿದ್ದ 96 ವರ್ಷದ 2ನೇ ಎಲಿಜಬೆತ್ ಅವರಿಗೆ ಬ್ರಿಟನ್ ಪ್ರಜೆಗಳು ಗೌರವ ನಮನ ಸಲ್ಲಿಸಿದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿವಿಧ ದೇಶದ 500ಕ್ಕೂ ಅಧಿಕ ಪ್ರಮುಖ ನಾಯಕರು ಭಾಗಿಯಾಗಿದ್ದರು.
ಸೋಮವಾರ ಬೆಳಗ್ಗೆ 6:30ಕ್ಕೆ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭಗೊಂಡಿದ್ದವು. ಸರ್ಕಾರಿ ಗೌರವದೊಂದಿಗೆ ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಅಂತ್ಯಕ್ರಿಯೆ ನಡೆಯಿತು. ಈ ವಿಧಿವಿಧಾನಗಳು ಸುಮಾರು 125 ಸಿನಿಮಾ ಮಂದಿರ, ಹಲವು ಚರ್ಚ್ಗಳಲ್ಲಿ ನೇರ ಪ್ರಸಾರವಾಗಿದೆ. ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ 4 ಸಾವಿರ ಸೇನಾ ಯೋಧರು ಭಾಗಿಯಾಗಿದ್ದರು.
ಯುಕೆ ಹಾಗು ಕಾಮನ್‌ವೆಲ್ತ್ ದೇಶಗಳ ಒಕ್ಕೂಟದ ಮಾಜಿ ಮುಖ್ಯಸ್ಥೆಯಾಗಿರುವ 2ನೇ ರಾಣಿ ಎಲಿಜಬೆತ್ ಸೆಪ್ಟೆಂಬರ್ 8 ರಂದು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದರು.