ETV Bharat / international

ಇಸ್ರೇಲ್​ನಲ್ಲಿ ಭುಗಿಲೆದ್ದ ಪ್ರತಿಭಟನೆ; ಪ್ರಜಾಪ್ರಭುತ್ವ ವಿರೋಧಿ ನ್ಯಾಯಾಂಗ ಸುಧಾರಣಾ ಕ್ರಮಕ್ಕೆ ಖಂಡನೆ - ನೀಲಿ ಮತ್ತು ಬಿಳಿ ಬಣ್ಣದ ಇಸ್ರೇಲಿ ಧ್ವಜಗಳು

ಸರ್ಕಾರದ ನ್ಯಾಯಾಂಗ ಸುಧಾರಣಾ ಕ್ರಮಗಳನ್ನು ವಿರೋಧಿಸಿ ಇಸ್ರೇಲ್​ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

Israelis protest against overhaul plan
Israelis protest against overhaul plan
author img

By ETV Bharat Karnataka Team

Published : Sep 12, 2023, 3:10 PM IST

ಜೆರುಸಲೇಂ : ನ್ಯಾಯಾಲಯದ ಅಧಿಕಾರ ಹತ್ತಿಕ್ಕುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೈತ್ರಿಕೂಟದ ಕ್ರಮಗಳ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿರುವ ಐತಿಹಾಸಿಕ ವಿಚಾರಣೆ ಮುನ್ನಾದಿನವಾದ ಸೋಮವಾರ ಇಸ್ರೇಲ್​ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಸಾವಿರಾರು ಸರಕಾರಿ ವಿರೋಧಿ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ಎದುರು ಬೃಹತ್ ರ‍್ಯಾಲಿ ನಡೆಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಎದುರುಗಡೆಯ ಪ್ರದೇಶದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಇಸ್ರೇಲಿ ಧ್ವಜಗಳು ಸಮುದ್ರದಂತೆ ಕಾಣುತ್ತಿವೆ. ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್​ ಪರವಾಗಿ ಬೆಂಬಲಿಸಿ "ಪ್ರಜಾಪ್ರಭುತ್ವ" ಬೇಕು ಎಂದು ಘೋಷಣೆಗಳನ್ನು ಕೂಗಿದರು. ಇಸ್ರೇಲ್​​ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್​ನ ಎಲ್ಲ 15 ನ್ಯಾಯಮೂರ್ತಿಗಳ ಪೀಠ ಒಟ್ಟಾಗಿ ಮಂಗಳವಾರ ವಿಚಾರಣೆ ನಡೆಸಲಿದೆ.

ನೆತನ್ಯಾಹು ಅವರ ರಾಷ್ಟ್ರೀಯ-ಧಾರ್ಮಿಕ ಒಕ್ಕೂಟವು ಜುಲೈನಲ್ಲಿ ಅಂಗೀಕರಿಸಿದ ನ್ಯಾಯಾಂಗ ತಿದ್ದುಪಡಿಯ ವಿರುದ್ಧದ ಮೇಲ್ಮನವಿಗಳನ್ನು ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ. ನೇತನ್ಯಾಹು ಸರ್ಕಾರದ ನ್ಯಾಯಾಂಗ ತಿದ್ದುಪಡಿಗಳು ನ್ಯಾಯಾಲಯವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.

ಇದನ್ನೂ ಓದಿ : ಕೆನಡಾದಲ್ಲಿ ತೀವ್ರಗೊಂಡ ಕಾಳ್ಗಿಚ್ಚು: ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ

ಇಸ್ರೇಲ್ ಯಾವಾಗಲೂ ಪ್ರಜಾಪ್ರಭುತ್ವ, ಮುಕ್ತ ಮತ್ತು ಉದಾರವಾದಿ ದೇಶವಾಗಿದೆ. ಅದನ್ನು ಬದಲಾಯಿಸಲು ಈ ಸರ್ಕಾರಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರ ಡೇವಿಡ್ ಲೆಶೆಮ್ ಹೇಳಿದರು. ದೊಡ್ಡ ಪ್ರಮಾಣದಲ್ಲಿ ನ್ಯಾಯಾಂಗದ ಅಧಿಕಾರಗಳನ್ನು ಬದಲಾಯಿಸುವ ಸರ್ಕಾರದ ಕ್ರಮದಿಂದ ಇಸ್ರೇಲ್​​ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಇದರ ವಿರುದ್ಧ ಜನವರಿಯಿಂದಲೇ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿದ್ದು, ಲಕ್ಷಾಂತರ ಜನ ಸರ್ಕಾರದ ವಿರುದ್ಧ ಬೀದಿಗಿಳಿಯುತ್ತಿದ್ದಾರೆ.

ಸರ್ಕಾರದ ನ್ಯಾಯಾಂಗ ಸುಧಾರಣಾ ಹಸ್ತಕ್ಷೇಪದಿಂದ ನ್ಯಾಯಾಲಯದ ಸ್ವಾತಂತ್ರ್ಯ ಮೊಟಕುಗೊಳ್ಳಲಿದೆ, ಭ್ರಷ್ಟಾಚಾರ ಹೆಚ್ಚಾಗಲಿದೆ ಮತ್ತು ಪ್ರಜಾಪ್ರಭುತ್ವ ದುರ್ಬಲಗೊಳ್ಳಲಿದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ. ಆದರೆ, ಇದು ನ್ಯಾಯಾಂಗದ ವಿಪರೀತ ಅಧಿಕಾರಗಳನ್ನು ನಿಯಂತ್ರಿಸುವ ಮೂಲಕ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಮತೋಲನ ತರಲಿದೆ ಎಂಬುದು ಸರ್ಕಾರದ ಬೆಂಬಲಿಗರ ವಾದವಾಗಿದೆ. ನೆತನ್ಯಾಹು ಮತ್ತು ವಿರೋಧಿಗಳ ಸಂಧಾನ ನಡೆಸುವ ಪ್ರಯತ್ನಗಳು ವಿಫಲವಾಗಿದ್ದು, ದೇಶದಲ್ಲಿನ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕಗಳು ಮೂಡಿವೆ.

ಪೊಲೀಸರ ಅಂದಾಜಿನ ಪ್ರಕಾರ, 9.656 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು ಏಳು ಮಿಲಿಯನ್ ಜನರು ಸತತ 36 ವಾರಗಳಿಂದ ದೇಶಾದ್ಯಂತ ನಡೆಯುತ್ತಿರುವ ಸಾಪ್ತಾಹಿಕ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಐತಿಹಾಸಿಕ ಮೊದಲ ಬಾರಿಗೆ ವಿವಾದಾತ್ಮಕ ಕಾನೂನಿನ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯದ ಎಲ್ಲಾ 15 ನ್ಯಾಯಾಧೀಶರು ಒಟ್ಟಾಗಿ ಸೇರಲಿದ್ದಾರೆ. ಸುಪ್ರೀಂ ಕೋರ್ಟ್​ನ ಈ ವಿಚಾರಣೆ ಒಂದೆರಡು ದಿನ ಅಥವಾ ಅದಕ್ಕೂ ಹೆಚ್ಚು ಕಾಲ ನಡೆಯಬಹುದು. ಏನೇ ಆದರೂ ಕೆಲ ನ್ಯಾಯಾಧೀಶರು ಇಷ್ಟರಲ್ಲೇ ನಿವೃತ್ತಿಯಾಗಲಿರುವುದರಿಂದ ನ್ಯಾಯಪೀಠವು ಜನವರಿ 12, 2024 ರೊಳಗೆ ತನ್ನ ತೀರ್ಪನ್ನು ನೀಡಬೇಕಿದೆ.

ಇದನ್ನೂ ಓದಿ : 9/11 ದಾಳಿಗೆ 22 ವರ್ಷ: ಇನ್ನೂ ಪತ್ತೆಯಾಗದ ಸಾವಿರಾರು ಮೃತರ ಗುರುತು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.