ಲಂಡನ್: ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಲಂಡನ್‌ಗೆ ಬಂದಿಳಿದಿದ್ದಾರೆ. ನಾಳೆ ಅವರು ಭಾರತ ಸರ್ಕಾರದ ಪರವಾಗಿ ರಾಣಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಲಂಡನ್‌ನಲ್ಲಿರುವ 700 ವರ್ಷಗಳಿಗೂ ಪುರಾತನ ವೆಸ್ಟ್ ಮಿನಿಸ್ಟರ್ ಅಬ್ಬೆ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಸೋಮವಾರ ಸಕಲ ರೀತಿಯ ಗೌರವಾರ್ಪಣೆಯ ಬಳಿಕ ಅವರ ರಾಣಿಯ ಮೃತದೇಹವಿರುವ ಪೆಟ್ಟಿಗೆಯನ್ನು ಮೆರವಣಿಗೆಯ ಮೂಲಕ ಲಂಡನ್ನಿನ ವೆಲ್ಲಿಂಗ್ಟನ್ ಆರ್ಚ್‌ಗೆ ತರಲಾಗುತ್ತದೆ. ನಂತರ ವಿಂಡ್ಸರ್ ತಲುಪಲಿದ್ದು ತನ್ನ ಪತಿ ಪಿನ್ಸ್ ಫಿಲಿಪ್ ಅವರ ಸಮಾಧಿ ಸಮೀಪವೇ ಮಣ್ಣು ಮಾಡಲಾಗುತ್ತದೆ. ಯುಕೆ ಹಾಗು ಕಾಮನ್‌ವೆಲ್ತ್ ದೇಶಗಳ ಒಕ್ಕೂಟದ ಮಾಜಿ ಮುಖ್ಯಸ್ಥೆಯಾಗಿರುವ 2ನೇ ರಾಣಿ ಎಲಿಜಬೆತ್ ಸೆಪ್ಟೆಂಬರ್ 8 ರಂದು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಇದನ್ನೂ ಓದಿ: ಬ್ರಿಟನ್ ರಾಣಿಯ ಅಂತಿಮಯಾತ್ರೆಗೆ 7 ಲಕ್ಷ ಜನ.. ಭದ್ರತೆಗೆ ₹59 ಕೋಟಿ ಖರ್ಚು