ಅಂಕಾರಾ(ಟರ್ಕಿ): ಸೋಮವಾರ ನಸುಕಿನ ಜಾವ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ ಮತ್ತು ಅದರ ನಂತರ ಮತ್ತೊಂದು ಬಲವಾದ ಕಂಪನ ಉಂಟಾಗಿದೆ. ದೇಶದ ಹಲವಾರು ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು, 5 ಜನರು ಸಾವನ್ನಪ್ಪಿದ್ದಾರೆ ಮತ್ತು 34 ಕಟ್ಟಡಗಳು ಧರೆಗುರುಳಿವೆ ಎಂದು ಒಸ್ಮಾನಿಯೆ ರಾಜ್ಯದ ಗವರ್ನರ್ ಮಾಹಿತಿ ನೀಡಿದ್ದಾರೆ. ಟರ್ಕಿ ರಾಜಧಾನಿ ಅಂಕಾರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭೂಮಿ ನಡುಗಿರುವ ಮಾಹಿತಿ ಸಿಕ್ಕಿದೆ.
ಓಸ್ಮಾನಿಯೆ ಟರ್ಕಿಯ ದಕ್ಷಿಣ ಭಾಗದಲ್ಲಿರುವ ಕುಕುರೊವಾ ಬಯಲಿನ ಪೂರ್ವದ ಅಂಚಿನಲ್ಲಿರುವ ನಗರವಾಗಿದೆ ಮತ್ತು ಒಸ್ಮಾನಿಯೆ ಪ್ರಾಂತ್ಯದ ರಾಜಧಾನಿಯಾಗಿದೆ. ಅಮೆರಿಕದ ಭೂವಿಜ್ಞಾನ ಕೇಂದ್ರದ ಸಮೀಕ್ಷೆ (USGS) ಪ್ರಕಾರ, ಟರ್ಕಿಯಲ್ಲಿ ಕೇಂದ್ರೀಕೃತವಾಗಿರುವ ಭೂಕಂಪವು 01:17:35 (UTC) 17.9 ಕಿಮೀ ಆಳದಲ್ಲಿ ಸಂಭವಿಸಿದೆ. USGS ಪ್ರಕಾರ, ಭೂಕಂಪದ ಅಕ್ಷಾಂಶ ಮತ್ತು ರೇಖಾಂಶವು ಕ್ರಮವಾಗಿ 37.174N ಮತ್ತು 37.032E ಎಂದು ಕಂಡುಬಂದಿದೆ. ಭೂಕಂಪನ ವರದಿಯಾದ ನೂರ್ಡಗಿ ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದ ಜಿಲ್ಲೆ ಮತ್ತು ನಗರವಾಗಿದೆ ಎಂದು ವಿವರಿಸಿದೆ.
ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆ, ಎಎಫ್‌ಎಡಿ, ಭೂಕಂಪವು 7.4 ರಷ್ಟಿದೆ ಮತ್ತು ಕಹ್ರಮನ್‌ಮರಸ್ ಪ್ರಾಂತ್ಯದ ಪಜಾರ್ಸಿಕ್ ಪಟ್ಟಣದಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳಿದೆ. ನೆರೆಯ ಪ್ರಾಂತ್ಯಗಳಾದ ಮಲತ್ಯ, ದಿಯಾರ್‌ಬಕಿರ್ ಮತ್ತು ಮಲತ್ಯದಲ್ಲಿ ಹಲವಾರು ಕಟ್ಟಡಗಳು ಕುಸಿದು ಬಿದ್ದಿವೆ ಎಂದು ಹೇಬರ್‌ಟರ್ಕ್ ದೂರದರ್ಶನ ವರದಿ ಮಾಡಿದೆ. ಸಾವು-ನೋವುಗಳ ಬಗ್ಗೆ ತಕ್ಷಣಕ್ಕೆ ಮಾಹಿತಿಗಳು ಮಾಹಿತಿಗಳು ಲಭ್ಯವಾಗಿಲ್ಲ.
ಟರ್ಕಿಯು ಆಗಾಗ್ಗೆ ಭೂಕಂಪಗಳಿಂದ ನಡುಗುತ್ತದೆ. ಲೆಬನಾನ್ ಮತ್ತು ಸಿರಿಯಾದಲ್ಲೂ ಭೂಕಂಪದ ಅನುಭವವಾಗಿದೆ. ಉತ್ತರದ ನಗರವಾದ ಅಲೆಪ್ಪೊ ಮತ್ತು ಕೇಂದ್ರ ನಗರವಾದ ಹಮಾದಲ್ಲಿ ಕೆಲವು ಕಟ್ಟಡಗಳು ಕುಸಿದಿವೆ ಎಂದು ಸಿರಿಯಾದ ರಾಜ್ಯ ಮಾಧ್ಯಮ ವರದಿ ಮಾಡಿದೆ.
ಟರ್ಕಿಯ ಗಡಿಯಲ್ಲಿರುವ ಸಿರಿಯಾದ ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯದಲ್ಲಿ, ವಿರೋಧ ಪಕ್ಷದ ಸಿರಿಯನ್ ನಾಗರಿಕ ರಕ್ಷಣಾ ಪ್ರಕಾರ ಹಲವಾರು ಕಟ್ಟಡಗಳು ಕುಸಿದವು. ಗಾಯಾಳುಗಳ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಬೈರುತ್ ಮತ್ತು ಡಮಾಸ್ಕಸ್‌ನಲ್ಲಿ ಕಟ್ಟಡಗಳು ನಡುಗಿದವು ಮತ್ತು ಅನೇಕ ಜನರು ಭಯದಿಂದ ಬೀದಿಗೆ ಓಡಿ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಈ ಹಿಂದೆಯೂ ಭೂಕಂಪನಕ್ಕೆ ನಲುಗಿದ್ದ ಟರ್ಕಿ.. ಮೂರು ವರ್ಷಗಳ(2000) ಹಿಂದೆ ಟರ್ಕಿಯಲ್ಲಿ ಸಂಭವಿಸಿದ್ದ 6.8 ತೀವ್ರತೆಯ ಪ್ರಬಲ ಭೂಕಂಪನದಲ್ಲಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 1999ರಲ್ಲಿ ಟರ್ಕಿ ವಾಯವ್ಯ ಭಾಗದಲ್ಲಿ ಉಂಟಾಗಿದ್ದ ಪ್ರಬಲ ಭೂಕಂಪನದಲ್ಲಿ 17 ಸಾವಿರ ಜನರು ಮೃತಪಟ್ಟಿದ್ದರು. ಟರ್ಕಿ ಇತಿಹಾಸದಲ್ಲೇ ಘನಘೋರ ದುರಂತ ಇದಾಗಿದೆ.
ಓದಿ: ಇರಾನ್ನಲ್ಲಿ 5.9 ತೀವ್ರತೆಯ ಭೂಕಂಪನ: 7 ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ