ಬೆಂಗಳೂರು: ಪಾಪ್ ಸಿಂಗರ್ ಶಕೀರಾ ಬಗ್ಗೆ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ತೆರಿಗೆ ವಂಚನೆ ಆರೋಪದ ಪ್ರಕರಣವೊಂದರಲ್ಲಿ ಅವರಿಗೆ ಎಂಟು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆಯಂತೆ.
2012 ರಿಂದ 2014 ರವರೆಗೆ ಸ್ಪ್ಯಾನಿಷ್ ತೆರಿಗೆ ಕಚೇರಿಗೆ ತೆರಿಗೆ ವಂಚನೆ ಮಾಡಿದ ಆರೋಪವನ್ನು ಶಕೀರಾ ಎದುರಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸ್ಪ್ಯಾನಿಷ್ ಸರ್ಕಾರಿ ಪ್ರಾಸಿಕ್ಯೂಟರ್ ಒಬ್ಬರು ತೆರಿಗೆ ಪ್ರಕರಣದ ಸೆಟ್ಲಮೆಂಟ್ಗಾಗಿ ಸಂಪರ್ಕ ಮಾಡಿದ್ದರಂತೆ. ಆದರೆ, ಇದನ್ನೊಪ್ಪದ ಶಕೀರಾ ಪ್ರಕರಣದ ತನಿಖೆಯಾಗಲಿ ಎಂದು ಹೇಳಿದ್ದಾರಂತೆ. ಕಾನೂನಿನ ಮೇಲೆ ತನಗೆ ಭರವಸೆ ಇರುವುದರಿಂದ ತನ್ನ ವಿರುದ್ಧದ ಪ್ರಕರಣ ತನಿಖೆಯಾಗಲಿ ಅಂದಿದ್ದಾರಂತೆ ಶಕೀರಾ. ಆದಾಗ್ಯೂ ಈ ಪ್ರಕರಣದ ಮೇಲಿನ ವಿಚಾರಣೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
ಕಳೆದ ಶುಕ್ರವಾರ ಸ್ಪ್ಯಾನಿಷ್ ಪ್ರಾಸಿಕ್ಯೂಟರ್ ಅವರು ಸಿಂಗರ್ ವಿರುದ್ಧ ಸುಮಾರು ಎಂಟು ವರ್ಷಗಳ ಶಿಕ್ಷೆಗೆ ಒತ್ತಾಯಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಏಕೆಂದರೆ ತೆರಿಗೆ ವಂಚನೆಯ ಅರ್ಜಿಯನ್ನು ನಿರ್ಲಕ್ಷಿಸುವ ಮೂಲಕ ಸಿಂಗರ್ ದೊಡ್ಡ ತಪ್ಪು ಮಾಡಿದ್ದಾರೆ. ಇದರೊಂದಿಗೆ, ಅವರು ಸಿಂಗರ್‌ನಿಂದ $ 45 ಮಿಲಿಯನ್ ದಂಡವನ್ನು ಸಹ ಕೇಳುತ್ತಾರೆ.
ಶಕೀರಾಗೆ ಕನಿಷ್ಠ 8 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಕೋರ್ಟ್ಗೆ ಕೋರುವುದಾಗಿ ಸ್ಪ್ಯಾನಿಷ್ ಸರ್ಕಾರಿ ವಕೀಲರು ಸ್ಪಷ್ಟವಾಗಿ ಹೇಳಿದ್ದಾರೆ. ಶಕೀರಾ ತೆರಿಗೆ ವಂಚನೆಯ ನೋಟೀಸನ್ನು ನಿರ್ಲಕ್ಷ್ಯ ಮಾಡಿದ್ದು ಗಂಭೀರ ವಿಷಯ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಶಕೀರಾಗೆ 45 ಮಿಲಿಯನ್ ಡಾಲರ್ ದಂಡ ವಿಧಿಸುವಂತೆ ಕೋರುವುದಾಗಿಯೂ ವಕೀಲರು ತಿಳಿಸಿದ್ದಾರೆ.
ಶಕೀರಾ ಈವರೆಗೆ ತಮ್ಮ 60 ಮಿಲಿಯನ್ ಮ್ಯೂಸಿಕ್ ಅಲ್ಬಂ ಗಳನ್ನು ಮಾರಾಟ ಮಾಡಿದ್ದಾರೆ. ತಾನು ಯಾವುದೇ ತೆರಿಗೆ ವಂಚನೆ ಮಾಡಿಲ್ಲವೆಂಬುದನ್ನು ಶಕೀರಾ ಈಗ ನ್ಯಾಯಾಲಯದಲ್ಲಿ ವಾದಿಸಲಿದ್ದಾರೆ ಎನ್ನಲಾಗಿದೆ.
2013 ಮತ್ತು 2014 ರ ನಡುವೆ ಶಕೀರಾ ಸಿಂಗಿಂಗ್ ಶೋಗಳನ್ನು ಹೆಚ್ಚಾಗಿ ನಡೆಸುತ್ತಿದ್ದುದರಿಂದ ಅಂತಾರಾಷ್ಟ್ರೀಯ ಪ್ರವಾಸಗಳಿಂದ ಅವರು ಹೆಚ್ಚಿನ ಹಣ ಗಳಿಸಿದ್ದಾರೆ ಎಂದು ಶಕೀರಾ ಅವರ ವಕೀಲರು ಹೇಳಿದ್ದಾರೆ. 2015 ರಲ್ಲಿ ಅವರು ಎಲ್ಲಾ ತೆರಿಗೆಗಳನ್ನು ಪಾವತಿಸಿದ್ದಾರೆ. ಶಕೀರಾ ಸ್ಪ್ಯಾನಿಷ್ ತೆರಿಗೆ ಅಧಿಕಾರಿಗಳಿಗೆ 17.2 ಮಿಲಿಯನ್ ಯುರೋಗಳನ್ನು ಪಾವತಿಸಿದ್ದು ಎಲ್ಲ ಬಾಕಿಗಳಿಂದ ಮುಕ್ತರಾಗಿದ್ದಾರೆ ಎನ್ನುತ್ತಾರೆ ಶಕೀರಾ ವಕೀಲರು.
ಇದನ್ನು ಓದಿ:ಇದು ಕ್ಯಾಸಿನೊ ನಿರ್ವಾಹಕನ ತೋಟದ ಮನೆ ಅಲ್ಲ, ಸಣ್ಣ ಮೃಗಾಲಯ.. ಪ್ರವೀಣ್ ಸೇರಿ ಐವರಿಗೆ ಇಡಿ ನೋಟಿಸ್!