ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಈ ಸಮಯದಲ್ಲಿ ಉಭಯ ದೇಶಗಳ ನಡುವೆ ಪರಸ್ಪರ ಲಾಭದಾಯಕ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಶೀಘ್ರ ತೀರ್ಮಾನದ ಅಗತ್ಯದ ಕುರಿತು ಚರ್ಚಿಸಿದರು. ಜತೆಗೆ ಭಾರತ - ಯುಕೆ ಮಾರ್ಗಸೂಚಿ 2030ರ ಭಾಗವಾಗಿ ಹಲವಾರು ದ್ವಿಪಕ್ಷೀಯ ವಿಷಯಗಳ ಪ್ರಗತಿಯನ್ನು ಇಬ್ಬರೂ ಪರಿಶೀಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
-
We also agreed on the need to take strong action against anti-India elements and to ensure security of Indian diplomatic establishments in the UK. We also discussed the issue of economic offenders.
— Narendra Modi (@narendramodi) April 13, 2023 " class="align-text-top noRightClick twitterSection" data="
">We also agreed on the need to take strong action against anti-India elements and to ensure security of Indian diplomatic establishments in the UK. We also discussed the issue of economic offenders.
— Narendra Modi (@narendramodi) April 13, 2023We also agreed on the need to take strong action against anti-India elements and to ensure security of Indian diplomatic establishments in the UK. We also discussed the issue of economic offenders.
— Narendra Modi (@narendramodi) April 13, 2023
ಉಭಯ ನಾಯಕರು ವಿಶೇಷವಾಗಿ ವ್ಯಾಪಾರ ಮತ್ತು ಆರ್ಥಿಕ ವಲಯಗಳಲ್ಲಿ ಬೆಳೆಯುತ್ತಿರುವ ಸಹಕಾರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಇಂಗ್ಲೆಂಡ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಸಂಸ್ಥೆಗಳ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಭಾರತ ವಿರೋಧಿ ಕ್ರಮಗಳ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಿದರು. ಭಾರತೀಯ ಹೈಕಮಿಷನ್ ಮೇಲಿನ ದಾಳಿಯನ್ನು ಯುಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುತ್ತದೆ ಮತ್ತು ಭಾರತೀಯ ಮಿಷನ್ ಮತ್ತು ಅದರ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಗಮನ ಹರಿಸಲಾಗುವುದು ಎಂದು ರಿಷಿ ಸುನಕ್ ಭರವಸೆ ನೀಡಿದರು.
ಆರ್ಥಿಕ ಅಪರಾಧಿಗಳ ವಿಷಯ ಪ್ರಸ್ತಾಪ: ಬ್ರಿಟನ್‌ನಲ್ಲಿ ಆಶ್ರಯ ಪಡೆದಿರುವ ಆರ್ಥಿಕ ಅಪರಾಧಿಗಳ ವಿಷಯವನ್ನೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಅವರು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮುಂದೆ ಹಾಜರಾಗಲು ಪರಾರಿಯಾದವರ ವಾಪಸಾತಿಗೆ ಪ್ರಧಾನಿ ಮೋದಿ ಆಗ್ರಹಿಸಿದರು ಎಂದು ಪಿಎಂಒ ಪ್ರಕಟಣೆ ತಿಳಿಸಿದೆ. 2023ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪಿಎಂ ಸುನಕ್ ಅವರನ್ನು ಪಿಎಂ ಮೋದಿ ಆಹ್ವಾನಿಸಿದರು. ಪ್ರಧಾನಿ ಸುನಕ್ ಭಾರತ ಜಿ20 ಅಧ್ಯಕ್ಷತೆ ವಹಿಸಿ ಮಾಡಿದ ಪ್ರಗತಿಯನ್ನು ಶ್ಲಾಘಿಸಿದರು ಮತ್ತು ಭಾರತದ ಉಪಕ್ರಮಗಳು ಮತ್ತು ಅವುಗಳ ಯಶಸ್ಸಿಗೆ ಯುಕೆ ಸಂಪೂರ್ಣ ಬೆಂಬಲವನ್ನು ಅವರು ಪುನರುಚ್ಚರಿಸಿದರು.
ಬೈಸಾಖಿ(ಉತ್ತರ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ)ಯ ಮುನ್ನ ದಿನದಂದು ಸುನಕ್ ಮತ್ತು ಇಂಗ್ಲೆಂಡ್ ನಲ್ಲಿರುವ ಭಾರತೀಯ ಸಮುದಾಯಕ್ಕೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದರು. "ಪಿಎಂ ರಿಷಿ ಸುನಕ್ ಅವರೊಂದಿಗೆ ಮಾತನಾಡಲು ಸಂತೋಷವಾಗಿದೆ. ಅವರಿಗೆ ಬೈಸಾಖಿ ಶುಭಾಶಯಗಳನ್ನು ಮತ್ತು ಯುಕೆಯಲ್ಲಿರುವ ಭಾರತೀಯ ಸಮುದಾಯಕ್ಕೆ ಶುಭಾಶಯಗಳು" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
-
Pleased to speak with UK PM @RishiSunak. Extended Baisakhi greetings to him, and new year greetings to the vibrant Indian community in the UK. We reviewed progress on a number of issues to further strengthen India-UK Comprehensive Strategic Partnership, including FTA.
— Narendra Modi (@narendramodi) April 13, 2023 " class="align-text-top noRightClick twitterSection" data="
">Pleased to speak with UK PM @RishiSunak. Extended Baisakhi greetings to him, and new year greetings to the vibrant Indian community in the UK. We reviewed progress on a number of issues to further strengthen India-UK Comprehensive Strategic Partnership, including FTA.
— Narendra Modi (@narendramodi) April 13, 2023Pleased to speak with UK PM @RishiSunak. Extended Baisakhi greetings to him, and new year greetings to the vibrant Indian community in the UK. We reviewed progress on a number of issues to further strengthen India-UK Comprehensive Strategic Partnership, including FTA.
— Narendra Modi (@narendramodi) April 13, 2023
ಎಫ್‌ಟಿಎ ಸೇರಿದಂತೆ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಹಲವಾರು ವಿಷಯಗಳ ಪ್ರಗತಿಯನ್ನು ಪರಿಶೀಲಿಸಿದ್ದೇವೆ. ಭಾರತ ವಿರೋಧಿ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯತೆ ಮತ್ತು ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಸಂಸ್ಥೆಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಹ ಒಪ್ಪಿಕೊಂಡಿದ್ದೇವೆ. ನಾವು ಆರ್ಥಿಕ ಅಪರಾಧಿಗಳ ವಿಷಯದ ಬಗ್ಗೆಯೂ ಚರ್ಚಿಸಿದ್ದೇವೆ" ಎಂದು ಪ್ರಧಾನಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಕ್ರಿಸ್ಟಿನಾ ಸ್ಕಾಟ್ "ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ಮುಂದುವರಿದಿವೆ ಮತ್ತು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಮಾತನಾಡಿದ್ದರು ಮತ್ತು ಇತ್ತೀಚಿನ ದಿನಗಳಲ್ಲಿ ಎಫ್‌ಟಿಎಗಳಿಗೆ ಸಹಿ ಹಾಕಲಾಗುತ್ತಿದೆ ಎಂದು ಹೇಳಿದ್ದರು. ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) "ನಾವು ಮಾತನಾಡುತ್ತಿದ್ದಂತೆಯೇ ನಡೆಯುತ್ತಿದೆ" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆರ್ಥಿಕ ಸಶಕ್ತ ದೇಶ ಕಟ್ಟುವೆ, ಮಾತಲ್ಲಿ ಅಲ್ಲ ಮಾಡಿ ತೋರಿಸುವೆ: ರಿಷಿ ಸುನಕ್ ಭರವಸೆ