ETV Bharat / international

ಮೂರು ದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿಗೆ ವಿಶೇಷ ಗೌರವ: ಏನೇನು ಗೊತ್ತಾ?

ಜಪಾನ್​, ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಕೆಲವು ವಿಶೇಷ ಗೌರವಗಳಿಗೆ ಪಾತ್ರರಾಗಲಿದ್ದಾರೆ.

ವಿದೇಶ ಪ್ರವಾಸದ ವೇಳೆ ಪ್ರಧಾನಿ ಮೋದಿಗೆ ವಿಶೇಷ ಗೌರವ

author img

By

Published : May 21, 2023, 11:41 AM IST

ನವದೆಹಲಿ: ವಿಶ್ವದ ಪ್ರಭಾವಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳ ಪ್ರವಾಸದಲ್ಲಿದ್ದು, ಈ ವೇಳೆ ಅವರು ಅಪರೂಪದ ಗೌರವಕ್ಕೆ ಪಾತ್ರರಾಗುವ ನಿರೀಕ್ಷೆ ಇದೆ. ಪ್ರಸ್ತುತ ಜಪಾನ್​ ದೇಶದಿಂದ ಪಪುವಾ ನ್ಯೂಗಿನಿಗೆ ಅವರು ಪ್ರಯಾಣ ಬೆಳೆಸಿದ್ದಾರೆ. ಆ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳುವರು.

ಸತತ 2ನೇ ಸಲ ಜಿ7 ಶೃಂಗದಲ್ಲಿ ಭಾಗಿ: ಪ್ರಧಾನಿ ಮೋದಿ ಅವರು ಜಪಾನ್‌ನ ಹಿರೋಶಿಮಾದಲ್ಲಿ ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್/ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅಂದರೆ, ಭಾರತವು ಜಿ7 ಶೃಂಗಸಭೆಗೆ ಸತತ ಎರಡನೇ ಬಾರಿಗೆ ಆಹ್ವಾನ ಪಡೆದುಕೊಂಡಿದೆ. ಈ ವಿಶೇಷ ಗೌರವ ಸಿಕ್ಕಿದ್ದು ಇದೇ ಮೊದಲು. ಅಮೆರಿಕ, ಜಪಾನ್​ ಸೇರಿದಂತೆ ವಿವಿಧ ರಾಷ್ಟ್ರಗಳು ಜಿ7 ಶೃಂಗ ರಚಿಸಿಕೊಂಡಿದ್ದು, ಭಾರತವೂ ಅದರಲ್ಲಿ ಭಾಗಿಯಾಗಿ, ದ್ವಿಪಕ್ಷೀಯ ಸಭೆಗಳನ್ನು ನಡೆಸಿದೆ.

ಮೋದಿಗೆ ಪಪುವಾ ವಿಶೇಷ ಸ್ವಾಗತ: ಪಪುವಾ ನ್ಯೂಗಿನಿಗೆ ಮೋದಿ ಅವರ ಮೊದಲ ಪ್ರವಾಸ ಇದಾಗಿದೆ. ಜೊತೆಗೆ, ಇಂಡೋ ಪೆಸಿಫಿಕ್ ದೇಶಕ್ಕೂ ಕೂಡಾ ಯಾವುದೇ ಭಾರತೀಯ ಪ್ರಧಾನಿಯ ಮೊದಲ ಭೇಟಿಯೂ ಹೌದು. ಮೋದಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಆ ದೇಶ ಸಜ್ಜಾಗಿದೆ.

ಸಾಮಾನ್ಯವಾಗಿ, ಪಪುವಾ ನ್ಯೂಗಿನಿಯಲ್ಲಿ ಸೂರ್ಯಾಸ್ತದ ನಂತರ ಬರುವ ಯಾವುದೇ ನಾಯಕರಿಗೆ ವಿಧ್ಯುಕ್ತ ಸ್ವಾಗತ ನೀಡುವುದಿಲ್ಲ. ಆದರೆ, ಮೋದಿ ಅವರಿಗೆ ವಿಶೇಷ ವಿನಾಯಿತಿ ನೀಡಲು ದೇಶ ನಿರ್ಧರಿಸಿದೆ. ಪೂರ್ಣ ಪ್ರಮಾಣದಲ್ಲಿ ವಿಧ್ಯುಕ್ತ ಸ್ವಾಗತವನ್ನು ಕೋರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಪಪುವಾ ನ್ಯೂಗಿನಿ ಭೇಟಿಯ ವೇಳೆ, ಮೋದಿ ಅವರು ಭಾರತ- ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆಯ (ಎಫ್‌ಪಿಐಸಿ III ಶೃಂಗಸಭೆ) 3 ನೇ ಶೃಂಗಸಭೆಯ ಸಹ ಅಧ್ಯಕ್ಷತೆ ವಹಿಸಲಿದ್ದಾರೆ. ಪಪುವಾ ನ್ಯೂಗಿನಿ ಅಧ್ಯಕ್ಷ ಜೇಮ್ಸ್ ಮರಾಪೆ ಅವರು ಅಧ್ಯಕ್ಷರಾಗಿರಲಿದ್ದಾರೆ.

FIPIC ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಸಂಪರ್ಕ ಮತ್ತು ಇತರ ಸಮಸ್ಯೆಗಳಿಂದಾಗಿ ಎಲ್ಲ ನಾಯಕರೂ ಒಗ್ಗೂಡುವುದು ಅಪರೂಪ. ಆದರೆ, ಈ ಬಾರಿ ಎಲ್ಲ ನಾಯಕರೂ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವರು. 2014 ರಲ್ಲಿ ಪ್ರಧಾನಿ ಮೋದಿಯವರ ಫಿಜಿ ದೇಶ ಭೇಟಿಯ ವೇಳೆ ಈ FIPIC ವೇದಿಕೆಯನ್ನು ಪ್ರಾರಂಭಿಸಲಾಗಿತ್ತು.

ಪೂರ್ವ ನಿರ್ಧರಿತದಂತೆ FIPIC ಶೃಂಗಸಭೆಯಲ್ಲದೇ, ಪಿಎಂ ಮೋದಿ ಅವರು ಪಪುವಾ ನ್ಯೂಗಿನಿ ಗವರ್ನರ್ ಜನರಲ್ ಸರ್ ಬಾಬ್ ದಾಡೆ, ಪ್ರಧಾನಮಂತ್ರಿ ಮರಾಪೆ ಮತ್ತು ಶೃಂಗಸಭೆಯಲ್ಲಿ ಭಾಗವಹಿಸುವ ಇತರ ಕೆಲವು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದಾರೆ.

ಆಸೀಸ್​ನಲ್ಲಿ 'ಲಿಟಲ್​ ಇಂಡಿಯಾ' ಘೋಷಣೆ: ಪಪುವಾ ನ್ಯೂಗಿನಿ ಪ್ರವಾಸ ಮುಗಿಸಿದ ಬಳಿಕ ಪ್ರಧಾನಿ, ಆಸ್ಟ್ರೇಲಿಯಾ ಸಿಡ್ನಿಗೆ ತೆರಳಲಿದ್ದಾರೆ. ಕಾಂಗರೂ ನಾಡಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಅಲ್ಲಿಗೆ ಪ್ರಯಾಣಿಸಲಿದ್ದಾರೆ. ಸಿಡ್ನಿಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.

ಇದೇ ವೇಳೆ ಪರಮಟ್ಟ ಎಂಬಲ್ಲಿರುವ ಹ್ಯಾರಿಸ್ ಪಾರ್ಕ್ ಪ್ರದೇಶಕ್ಕೆ 'ಲಿಟಲ್ ಇಂಡಿಯಾ' ಎಂದು ಘೋಷಣೆ ಮಾಡಲಿದ್ದಾರೆ. ಹ್ಯಾರಿಸ್ ಪಾರ್ಕ್ ಪ್ರದೇಶದಲ್ಲಿ ಭಾರತೀಯ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ನೆಲೆಯೂರಿದೆ. ಈ ಪ್ರದೇಶ ಭಾರತೀಯರ ಒಡೆತನದಲ್ಲಿದೆ. ಹೀಗಾಗಿ ಈ ಪ್ರದೇಶವನ್ನು ಅನೌಪಚಾರಿಕವಾಗಿ 'ಲಿಟಲ್ ಇಂಡಿಯಾ' ಎಂದು ಕರೆಯಲಾಗುತ್ತದೆ. ಇದನ್ನೀಗ ಪ್ರಧಾನಿ ಮೋದಿ ಅವರು ಅಧಿಕೃತರವಾಗಿ ಪ್ರಕಟಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.

ಇದನ್ನೂ ಓದಿ: ಭಾರತ-ಬ್ರಿಟನ್ ಆಲಿಂಗನ: ರಿಷಿ ಸುನಕ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.