ಬೀಜಿಂಗ್ : 132 ಜನರನ್ನು ಬಲಿ ಪಡೆದ ಚೀನಾದ ಬೋಯಿಂಗ್ ವಿಮಾನ ಪತನಕ್ಕೆ ಅದರ ಪೈಲಟ್ಗಳೇ ಕಾರಣ ಎಂಬುದನ್ನು ವಾಯುಯಾನ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಅಲ್ಲದೇ, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಮಾರ್ಚ್ 21ರಂದು ದಕ್ಷಿಣ ಚೀನಾದ ಗುವಾಂಗ್ಕ್ಸಿ ಪ್ರದೇಶದ ವುಝೌನಗರದ ಸಮೀಪ 132 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ 8800 ಮೀಟರ್ ಎತ್ತರದಿಂದ ಬಿದ್ದಿತ್ತು.
ದುರ್ಘಟನೆಯಲ್ಲಿ 9 ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದರು. ವಿಮಾನ ಪತನಕ್ಕೆ ಪೈಲಟ್ಗಳೇ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ. ಇದು ತನಿಖೆಯನ್ನು ದಿಕ್ಕುತಪ್ಪಿಸುವ ಕೆಲಸವಾಗಿದೆ. ಸಾರ್ವಜನಿಕ ವಿಶ್ವಾಸವನ್ನು ಹಾಳು ಮಾಡುವುದಲ್ಲದೇ, ಕಾನೂನಿನ ಉಲ್ಲಂಘನೆ ಮಾಡಿದಂತೆ ಎಂದು ಚೀನಾದ ನಾಗರಿಕ ವಿಮಾನಯಾನ ಆಡಳಿತ (ಸಿಎಎಸಿ) ತಿಳಿಸಿದೆ.
ವಿಮಾನದ ಎರಡು ಬ್ಲ್ಯಾಕ್ಬಾಕ್ಸ್ಗಳು ದೊರಕಿದ್ದು, ತನಿಖೆ ಮುಂದುವರಿದಿದೆ. ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸರ್ಕಾರವೂ ಕೂಡ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಡಿದ ವದಂತಿಯನ್ನು ಯಾರು ನಂಬಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ದುರಂತದಲ್ಲಿ ಮೃತಪಟ್ಟ ಮೂವರು ಪೈಲಟ್ಗಳು ನುರಿತ ವ್ಯಕ್ತಿಗಳಾಗಿದ್ದು, ಅದರ ಕ್ಯಾಪ್ಟನ್ 6,709 ಗಂಟೆಗಳ ಹಾರಾಟ ನಡೆಸಿದ್ದರೆ, ಮೊದಲ ಮತ್ತು ಎರಡನೇ ಪೈಲಟ್ ಕ್ರಮವಾಗಿ 31,769 ಗಂಟೆಗಳು ಮತ್ತು 556 ಗಂಟೆಗಳ ಕಾಲ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.
ಓದಿ: ಶ್ರೀಲಂಕಾ ಮೇಲಿದೆ $51 ಬಿಲಿಯನ್ ಸಾಲ! ಮರುಪಾವತಿ ನಿಲ್ಲಿಸಿ, ಇನ್ನಷ್ಟು ಸಾಲಕ್ಕೆ ಮೊರೆ