ETV Bharat / international

ಪಾಕಿಸ್ತಾನ ರಾಜಕೀಯ ಬಿಕ್ಕಟ್ಟು.. ಪಿಟಿಐನಿಂದ ತ್ರಿಸದಸ್ಯ ಸಮಿತಿ ರಚನೆ

author img

By

Published : Apr 17, 2023, 1:30 PM IST

ದೇಶದಲ್ಲಿನ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತುಕತೆಗಾಗಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ.

Pakistan
ಪಾಕಿಸ್ತಾನ

ಇಸ್ಲಾಮಾಬಾದ್(ಪಾಕಿಸ್ತಾನ): ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಸಮಾಲೋಚನೆ ನಡೆಸಲು ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಭಾನುವಾರ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ಪಾಕಿಸ್ತಾನ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ. ಪಿಟಿಐ ಮುಖಂಡರಾದ ಪರ್ವೇಜ್ ಖಟ್ಟಕ್, ಎಜಾಜ್ ಚೌಧರಿ ಮತ್ತು ಮಿಯಾನ್ ಮೆಹಮೂದೂರ್ ರಶೀದ್ ಅವರು ಜಮಾತ್-ಇ-ಇಸ್ಲಾಮಿ (ಜೆಐ) ಯೊಂದಿಗೆ ಸಂವಾದ ನಡೆಸಲಿದ್ದಾರೆ.

ಜೆಐ ಮುಖ್ಯಸ್ಥ ಸಿರಾಜುಲ್ ಹಕ್ ಅವರು ಪಿಟಿಐ ಅಧ್ಯಕ್ಷ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಲಾಹೋರ್‌ನಲ್ಲಿರುವ ಅವರ ನಿವಾಸದಲ್ಲಿ ಸಭೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಂಜಾಬ್, ಖೈಬರ್ ಪಖ್ತುಂಖ್ವಾ ಮತ್ತು ಅಂತಿಮವಾಗಿ ಇಡೀ ದೇಶದಲ್ಲಿ ಚುನಾವಣೆ ನಡೆಸಲು ಹೆಚ್ಚಿನ ಒಮ್ಮತ ಅಭಿಪ್ರಾಯ ಸಂಗ್ರಹಿಸಿಲು ಸಮಿತಿಯನ್ನು ರಚಿಸಬೇಕು ಎಂದು ಹಕ್ ಸಲಹೆ ನೀಡಿದರು.

ಹಕ್ ಅವರ ಪ್ರಯತ್ನಗಳನ್ನು ಪ್ರಧಾನಿ ಶೆಹಬಾಜ್ ಮತ್ತು ಇಮ್ರಾನ್ ಇಬ್ಬರೂ ಶ್ಲಾಘಿಸಿದರು. ಸದ್ಯ ಆರ್ಥಿಕ, ರಾಜಕೀಯ ಮತ್ತು ಸಾಂವಿಧಾನಿಕ ಬಿಕ್ಕಟ್ಟಿನಿಂದ ದೇಶವನ್ನು ಹೊರತರಲು ಚುನಾವಣೆಗಳು ಮುಂದಿನ ದಾರಿ ಎಂದು ಅಭಿಪ್ರಾಯಪಟ್ಟರು. ಅವರು ತಮ್ಮ ಸಂಪೂರ್ಣ ಸಹಕಾರವನ್ನು ಅವರಿಗೆ ನೀಡುವ ಭರವಸೆ ನೀಡಿದರು. ಎಲ್ಲಾ ಪಕ್ಷಗಳನ್ನು ಸಂಧಾನ ಸಭೆಗೆ ಕರೆತರುವ ಅವರ ಪ್ರಯತ್ನಗಳ ಭಾಗವಾಗಿ, ಹಕ್ ಅವರು ಈದ್ ನಂತರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಆಸಿಫ್ ಜರ್ದಾರಿಯನ್ನು ಭೇಟಿ ಮಾಡಲು ಯೋಜಿಸಿದ್ದಾರೆ ಮತ್ತು ಮುಂದಿನ ಎರಡು ವಾರಗಳಲ್ಲಿ ಪ್ರಗತಿಯನ್ನು ನಿರೀಕ್ಷಿಸುತ್ತಾರೆ ಎಂದು ಜೆಐ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಿಪಿಪಿ ನಾಯಕ ಆಸಿಫ್ ಅಲಿ ಜರ್ದಾರಿ ಈ ವಾರದ ಆರಂಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕುಳಿತು ಚುನಾವಣೆಗೆ ಒಂದೇ ದಿನಾಂಕದ ಬಗ್ಗೆ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಲು ಸೂಚಿಸಿದ್ದರು. ಪಿಪಿಪಿ ಈ ಉದ್ದೇಶಕ್ಕಾಗಿ, ಸೆನೆಟರ್ ಯೂಸುಫ್ ರಜಾ ಗಿಲಾನಿ, ಫೆಡರಲ್ ವಾಣಿಜ್ಯ ಸಚಿವ ಸೈಯದ್ ನವೀದ್ ಕಮರ್ ಮತ್ತು ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಕುರಿತು ಪ್ರಧಾನಿ ಸಲಹೆಗಾರ ಕಮರ್ ಜಮಾನ್ ಕೈರಾ ಅವರನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರದಲ್ಲಿ ಮಿತ್ರಪಕ್ಷಗಳನ್ನು ಮನವೊಲಿಸಲು ಇಮ್ರಾನ್ ನೇತೃತ್ವದ ಪಕ್ಷದೊಂದಿಗೆ ಕೈಜೋಡಿಸಿದೆ.

ನಡೆಯುತ್ತಿರುವ ಬಿಕ್ಕಟ್ಟುಗಳನ್ನು ಕೊನೆಗೊಳಿಸಲು ಚುನಾವಣೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಪಿಟಿಐ ಜೊತೆ ಮಾತುಕತೆ ನಡೆಸುವಂತೆ ಪಿಎಂಎಲ್-ಎನ್ ಮತ್ತು ಜೆಯುಐ-ಎಫ್ ಮನವೊಲಿಸುವುದು ಮೂವರು ಪಿಪಿಪಿ ನಾಯಕರ ಮುಖ್ಯ ಕಾರ್ಯವಾಗಿದೆ. ಕಳೆದ ಕೆಲವು ದಿನಗಳಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳ ನಡುವೆ ಸಂವಾದಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಚುನಾವಣೆಗೆ ಹಣ ಬಿಡುಗಡೆ ಮಾಡುವಂತೆ ಸ್ಟೇಟ್​ ಬ್ಯಾಂಕಿಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.