ETV Bharat / international

ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ದಾಳಿ: ಹೊಸ ವರ್ಷಾಚರಣೆ ನಿಷೇಧಿಸಿದ ಪಾಕಿಸ್ತಾನ - ಹೊಸ ವರ್ಷದ

ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಪ್ರಧಾನಿ 2024ರ ಹೊಸ ವರ್ಷದ ಆಚರಣೆಯನ್ನು ದೇಶದಲ್ಲಿ ನಿಷೇಧಿಸಿದ್ದಾರೆ.

ಪಾಕಿಸ್ತಾನ
ಪಾಕಿಸ್ತಾನ
author img

By PTI

Published : Dec 29, 2023, 11:34 AM IST

ಇಸ್ಲಾಮಾಬಾದ್ : 2024ರ ಹೊಸ ವರ್ಷದ ಸಂಭ್ರಮಾಚರಣೆಯನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ನಡುವಿನ ದಾಳಿಯನ್ನು ಖಂಡಿಸಿ, ಪ್ಯಾಲೆಸ್ಟೀನ್ ಪರವಾಗಿ ಗಾಜಾದಲ್ಲಿರುವ ಜನರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಗುರುವಾರ ದೇಶದಲ್ಲಿ ಹೊಸ ವರ್ಷ ಆಚರಣೆಯನ್ನು ನಿಷೇಧಿಸಿರುವುದಾಗಿ ಘೋಷಿಸಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿದ ಕಾಕರ್, "ಪ್ಯಾಲೆಸ್ಟೀನಿಯನ್ನರೊಂದಿಗೆ ಒಗ್ಗಟ್ಟನ್ನು ತೋರಿಸಲು ಮತ್ತು ಹೊಸ ವರ್ಷದಲ್ಲಿ ಸಮಚಿತ್ತತೆ ಮತ್ತು ನಮ್ರತೆಯನ್ನು ಪ್ರದರ್ಶಿಸಲು ಒತ್ತಾಯಿಸಿದರು. ಪ್ಯಾಲೆಸ್ಟೀನ್​ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ನಮ್ಮ ಸಹೋದರ- ಸಹೋದರಿಯರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದನ್ನು ಸರ್ಕಾರವು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ" ಎಂದು ಹೇಳಿದ್ದಾರೆ.

ಅಕ್ಟೋಬರ್ 7 ರಂದು ಇಸ್ರೇಲ್​ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಸುಮಾರು 9,000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಇದುವರೆಗೆ 21 ಸಾವಿರ ಪ್ಯಾಲೆಸ್ಟೀನ್‌ ಜನ ಸತ್ತಿದ್ದಾರೆ. ಇಸ್ರೇಲಿ ಪಡೆಗಳು ಹಿಂಸಾಚಾರ ಮತ್ತು ಅನ್ಯಾಯದ ಎಲ್ಲಾ ಮಿತಿಗಳನ್ನು ದಾಟಿದೆ ಎಂದು ಅನ್ವರುಲ್ಲಾ ಕಿಡಿಕಾರಿದರು.

ಪಾಕಿಸ್ತಾನವು ವಿವಿಧ ಜಾಗತಿಕ ವೇದಿಕೆಗಳಲ್ಲಿ ಪ್ಯಾಲೆಸ್ಟೀನ್‌ ಜನರ ದುಃಸ್ಥಿತಿಯನ್ನು ಎತ್ತಿ ತೋರಿಸಲು ಪ್ರಯತ್ನಿಸಿದೆ ಮತ್ತು ಪ್ಯಾಲೆಸ್ಟೀನ್‌ಗೆ ಸಮಯೋಚಿತ ನೆರವು ನೀಡಲು ಹಾಗೂ ಗಾಜಾದಲ್ಲಿರುವ ಗಾಯಾಳುಗಳನ್ನು ಸ್ಥಳಾಂತರಿಸಲು ಪಾಕಿಸ್ತಾನವು ಜೋರ್ಡಾನ್ ಮತ್ತು ಈಜಿಪ್ಟ್‌ನೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಹಾಗೆಯೇ, ಇಸ್ರೇಲಿ ರಕ್ತಪಾತವನ್ನು ತಡೆಯಲು ಭವಿಷ್ಯದಲ್ಲಿ ಹಮಾಸ್​ಗೆ ಸಹಾಯ ಮುಂದುವರೆಸುವುದಾಗಿ ಕಾಕರ್ ಹೇಳಿದ್ದಾರೆ.

ಇದನ್ನೂ ಓದಿ : ಮುಸ್ಲಿಂ ಧರ್ಮಿಯರೇ ಇಲ್ಲದ ಗ್ರಾಮದಲ್ಲಿ ಹಿಂದೂಗಳಿಂದ ಉರುಸ್ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.