ಇಸ್ಲಾಮಾಬಾದ್(ಪಾಕಿಸ್ತಾನ): ಇಮ್ರಾನ್ ಖಾನ್ ಪದಚ್ಯುತಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ನೂತನ ಪ್ರಧಾನಿಯ ಆಯ್ಕೆಯಾಗಿದೆ. ವಿಪಕ್ಷ ಮೈತ್ರಿಕೂಟದ ಪ್ರಮುಖ ಹಾಗೂ ಪಿಎಂಎಲ್-ಎನ್ ನಾಯಕ ಶೆಹಬಾಜ್ ಷರೀಫ್ ನೂತನ ಪ್ರಧಾನಿಯಾಗಿದ್ದಾರೆ. 342 ಸದಸ್ಯ ಬಲದ ಪಾಕಿಸ್ತಾನ ಸಂಸತ್ತು 'ನ್ಯಾಷನಲ್ ಅಸೆಂಬ್ಲಿ'ಯಲ್ಲಿ ಪಿಟಿಐ ಪಕ್ಷದ ನಾಯಕ ಇಮ್ರಾನ್ ಖಾನ್ ವಿಶ್ವಾಸ ಮತಯಾಚನೆ ವೇಳೆ ಸೋಲು ಕಂಡಿದ್ದರು. ಹೀಗಾಗಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇದೀಗ 174 ಸದಸ್ಯರ ಬೆಂಬಲ ಹೊಂದಿರುವ ಶಹಬಾಜ್ ಷರೀಫ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
-
Pakistan | PTI members walk out of the session to elect the new prime minister.
— ANI (@ANI) April 11, 2022 " class="align-text-top noRightClick twitterSection" data="
Qureshi says although he was the PTI's candidate for the prime minister, he announces to boycott the election, reports Pakistan's Samaa
Source: PTV pic.twitter.com/BVUhVEO2EE
">Pakistan | PTI members walk out of the session to elect the new prime minister.
— ANI (@ANI) April 11, 2022
Qureshi says although he was the PTI's candidate for the prime minister, he announces to boycott the election, reports Pakistan's Samaa
Source: PTV pic.twitter.com/BVUhVEO2EEPakistan | PTI members walk out of the session to elect the new prime minister.
— ANI (@ANI) April 11, 2022
Qureshi says although he was the PTI's candidate for the prime minister, he announces to boycott the election, reports Pakistan's Samaa
Source: PTV pic.twitter.com/BVUhVEO2EE
ನೂತನ ಪ್ರಧಾನಿ ಆಯ್ಕೆ ಮಾಡುವ ಉದ್ದೇಶದಿಂದ ಇಂದು ಪಾಕಿಸ್ತಾನ ಸಂಸತ್ತಿನ ಅಧಿವೇಶನ ಕರೆಯಲಾಗಿತ್ತು. ಈ ವೇಳೆ ಪಿಟಿಐ(ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್) ಪಕ್ಷದ ಸದಸ್ಯರು ಅಧಿವೇಶನದಿಂದ ಹೊರನಡೆದರು. ಇದರ ಜೊತೆಗೆ ಮತದಾನ ಬಹಿಷ್ಕರಿಸಿ, ಸದನದಿಂದ ಹೊರನಡೆದರು.
ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ 70 ವರ್ಷದ ಶೆಹಬಾಜ್ ಷರೀಫ್ ಹಾಗೂ ಪಿಟಿಐ ಪಕ್ಷದ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಪ್ರಧಾನಿ ರೇಸ್ಗೋಸ್ಕರ ನಾಮಪತ್ರ ಸಲ್ಲಿಸಿದ್ದರು. ಆದರೆ, ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೂ ಸ್ವಲ್ಪ ಸಮಯ ಮುಂಚಿತವಾಗಿ ಖುರೇಷಿ ರಾಷ್ಟ್ರೀಯ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಈ ರೇಸ್ನಿಂದ ಹೊರಬಿದ್ದಿದ್ದರು. ಹೀಗಾಗಿ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆಯಾಗಿದ್ದಾರೆ.
ಯಾರಿದು ಶೆಹಬಾಜ್?: 1988ರಲ್ಲಿ ಪಂಜಾಬ್ ಪ್ರಾಂತ್ಯದ ವಿಧಾನಸಭೆಗೆ ಆಯ್ಕೆಯಾಗಿದ್ದ ಶೆಹಬಾಜ್ ಷರೀಫ್ ಮೂರು ಸಲ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 1990ರಲ್ಲಿ ಪಾಕ್ ರಾಷ್ಟ್ರೀಯ ಸಂಸತ್ತು ಪ್ರವೇಶ ಮಾಡಿದ ಇವರು, ಭ್ರಷ್ಟಾಚಾರ ಆರೋಪ ಹೊತ್ತು ಕೆಲ ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಕಾಲ ಕಳೆದಿದ್ದಾರೆ. 2007ರಲ್ಲಿ ಪಾಕಿಸ್ತಾನಕ್ಕೆ ವಾಪಸ್ ಆಗಿ, ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಸಾರ್ವಜನಿಕ ಭಾಷಣಗಳಲ್ಲಿ ವೇಳೆ ಅನೇಕ ಸಲ ಸಂಯಮ ಕಳೆದುಕೊಂಡಿದ್ದು, ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಭಾವಿ ಉಕ್ಕು ಉದ್ಯಮಿಯಾಗಿರುವ ಇವರು, ಇದೀಗ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಇಂದು ಮಧ್ಯರಾತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಇಮ್ರಾನ್ ಖಾನ್ ಭರ್ಜರಿ ಗೆಲುವು ದಾಖಲು ಮಾಡಿ, ಮಿತ್ರಪಕ್ಷಗಳು ಬೆಂಬಲದೊಂದಿಗೆ ಪ್ರಧಾನಿ ಆಗಿ ಆಯ್ಕೆಯಾಗಿದ್ದರು. ಆದರೆ, ಕಳೆದ ಕೆಲ ವಾರಗಳಿಂದ ಪಿಟಿಐ ಪಕ್ಷ ಹಾಗೂ ಮಿತ್ರ ಪಕ್ಷದ ಕೆಲವರು ಇವರ ವಿರುದ್ಧ ತಿರುಗಿಬಿದ್ದ ಕಾರಣ ಇದೀಗ ಆಡಳಿತ ಕಳೆದುಕೊಳ್ಳುವಂತಾಯಿತು.
-
Congratulations to H. E. Mian Muhammad Shehbaz Sharif on his election as the Prime Minister of Pakistan. India desires peace and stability in a region free of terror, so that we can focus on our development challenges and ensure the well-being and prosperity of our people.
— Narendra Modi (@narendramodi) April 11, 2022 " class="align-text-top noRightClick twitterSection" data="
">Congratulations to H. E. Mian Muhammad Shehbaz Sharif on his election as the Prime Minister of Pakistan. India desires peace and stability in a region free of terror, so that we can focus on our development challenges and ensure the well-being and prosperity of our people.
— Narendra Modi (@narendramodi) April 11, 2022Congratulations to H. E. Mian Muhammad Shehbaz Sharif on his election as the Prime Minister of Pakistan. India desires peace and stability in a region free of terror, so that we can focus on our development challenges and ensure the well-being and prosperity of our people.
— Narendra Modi (@narendramodi) April 11, 2022
ಪ್ರಧಾನಿ ಮೋದಿ ಅಭಿನಂದನೆ: ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಪಾಕ್ನ ಶೆಹಬಾಜ್ ಷರೀಫ್ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದು, ಭಾರತ ಯಾವಾಗಲೂ ಶಾಂತಿ ಬಯಸುತ್ತದೆ ಎಂದಿದ್ದಾರೆ.