ETV Bharat / international

ತೋಷಖಾನಾ ಕೇಸ್​: ವಿಚಾರಣೆಗೆ ತೆರಳುವಾಗ ಇಮ್ರಾನ್​ ಖಾನ್​ ಬೆಂಗಾವಲು ವಾಹನ ಪಲ್ಟಿ

ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ತೋಷಖಾನಾ ಪ್ರಕರಣದಲ್ಲಿ ವಿಚಾರಣೆ ತೆರಳುತ್ತಿದ್ದಾಗ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮ್ರಾನ್​ ಖಾನ್​ ಬೆಂಗಾವಲು ವಾಹನ ಪಲ್ಟಿ
ಮ್ರಾನ್​ ಖಾನ್​ ಬೆಂಗಾವಲು ವಾಹನ ಪಲ್ಟಿ
author img

By

Published : Mar 18, 2023, 2:11 PM IST

Updated : Mar 18, 2023, 2:24 PM IST

ಇಸ್ಲಾಮಾಬಾದ್​: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ಖಾನ್​ ತೋಷಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಸ್ಲಾಮಾಬಾದ್​ಗೆ ತೆರಳುತ್ತಿದ್ದಾಗ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿವೆ. ವಾಹನ ಪಲ್ಟಿಯಾಗಿದೆ ಎಂದು ಇನ್ನೊಂದು ಮಾಧ್ಯಮ ಚಿತ್ರ ಸಮೇಯ ಬಿತ್ತರಿಸಿದೆ. ಘಟನೆಯಲ್ಲಿ ಖಾನ್​ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

  • It is also obvious now that the entire siege of Lahore was not about ensuring I appear before the court in a case but was intended to take me away to prison so that I am unable to lead our election campaign.

    — Imran Khan (@ImranKhanPTI) March 18, 2023 " class="align-text-top noRightClick twitterSection" data=" ">

ವಿಚಾರಣೆಗೆ ಹಾಜರಾಗಲು ತೆರಳುವ ಮೊದಲು ಟ್ವೀಟ್​ ಮಾಡಿದ ಪಾಕ್​ ಮಾಜಿ ಪ್ರಧಾನಿ, "ನನ್ನ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ, ಸರ್ಕಾರ ನನ್ನನ್ನು ಬಂಧಿಸಲು ಉದ್ದೇಶಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ. ಅವರ ದುರುದ್ದೇಶಗಳ ಬಗ್ಗೆ ತಿಳಿದಿದ್ದರೂ, ನಾನು ಇಸ್ಲಾಮಾಬಾದ್ ಮತ್ತು ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ. ಏಕೆಂದರೆ ನಾನು ಕಾನೂನನ್ನು ನಂಬುತ್ತೇನೆ" ಎಂದು ಬರೆದುಕೊಂಡಿದ್ದರು.

ಲಾಹೋರ್​ ಕೋರ್ಟ್​ಗೆ ನಾನು ಹಾಜರಾಗುತ್ತಿರುವುದು ಪ್ರಕರಣ ವಿಚಾರಣೆಗಾಗಿ ಮಾತ್ರವಲ್ಲ, ದುಷ್ಟಕೂಟದ ಕೆಟ್ಟ ಉದ್ದೇಶವನ್ನು ಎಲ್ಲರಿಗೂ ತಿಳಿಸುವುದಾಗಿದೆ. ನಮ್ಮ ಚುನಾವಣಾ ಪ್ರಚಾರವನ್ನು ತಡೆಯಲಾಗದೇ ನನ್ನನ್ನು ಜೈಲಿಗೆ ಕಳುಹಿಸಲು ಸರ್ಕಾರ ಸಂಚು ರೂಪಿಸಿದೆ. ಇದು ಈಗ ಸ್ಪಷ್ಟವಾಗಿದೆ ಎಂದು ಖಾನ್​ ಸರಣಿ ಟ್ವೀಟ್​ ಮಾಡಿದ್ದಾರೆ. ಪ್ರಕರಣದ ವಿಚಾರಣೆಗೆ ಹೋಗುತ್ತಿದ್ದ ವೇಳೆ ಅಪಘಾತ ನಡೆದಿರುವುದು ಆತಂಕಕ್ಕೀಡು ಮಾಡಿದೆ.

ಇಮ್ರಾನ್​ ಖಾನ್ ವಿರುದ್ಧದ ದೂರೇನು?: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ 70 ವರ್ಷ ವಯಸ್ಸಿನ ಖಾನ್, ಚುನಾವಣೆ ಆಯೋಗ ಸಲ್ಲಿಸಿದ ದೂರಿನ ಸಂಬಂಧ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಎದುರು ಹಾಜರಾಗಲು ಇಮ್ರಾನ್​ ಖಾನ್​​ ನಿರ್ಧರಿಸಿದ್ದರು. ಆಸ್ತಿ ಘೋಷಣೆಗಳಲ್ಲಿ ಉಡುಗೊರೆಗಳ ವಿವರಗಳನ್ನು ಮರೆಮಾಚಿದ್ದಕ್ಕಾಗಿ ಪಾಕಿಸ್ತಾನದ ಚುನಾವಣಾ ಆಯೋಗ ದೂರು ದಾಖಲಿಸಿತ್ತು. ತೋಷಖಾನಾ ಎಂಬ ರಾಜ್ಯದ ಡಿಪಾಸಿಟರಿಯಿಂದ ರಿಯಾಯಿತಿ ದರದಲ್ಲಿ ಪ್ರಧಾನ ಮಂತ್ರಿಯಾಗಿ ಸ್ವೀಕರಿಸಿದ ದುಬಾರಿ ಗ್ರಾಫ್ ಕೈಗಡಿಯಾರ ಸೇರಿದಂತೆ ಉಡುಗೊರೆಗಳನ್ನು ಖರೀದಿಸಲು ಖಾನ್ ಅಡ್ಡಗಾಲು ಹಾಕಿದ್ದಾರೆ ಮತ್ತು ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ ಎಂಬುದು ಅವರ ಮೇಲಿರುವ ಪ್ರಮುಖ ಆರೋಪ.

  • It is now clear that, despite my having gotten bail in all my cases, the PDM govt intends to arrest me. Despite knowing their malafide intentions, I am proceeding to Islamabad & the court bec I believe in rule of law. But ill intent of this cabal of crooks shd be clear to all.

1974 ರಲ್ಲಿ ಸ್ಥಾಪಿತವಾದ ತೋಷಖಾನಾವು ಕ್ಯಾಬಿನೆಟ್ ವಿಭಾಗದ ಆಡಳಿತ ನಿಯಂತ್ರಣದಲ್ಲಿರುವ ಒಂದು ಇಲಾಖೆಯಾಗಿದೆ. ಇತರ ಸರ್ಕಾರಗಳು ಮತ್ತು ರಾಜ್ಯಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ಆಡಳಿತಗಾರರು, ಸಂಸದರು, ಅಧಿಕಾರಿಗಳು ಮತ್ತು ಅಧಿಕಾರಿಗಳಿಗೆ ನೀಡಿದ ಅಮೂಲ್ಯ ಉಡುಗೊರೆಗಳನ್ನು ಇದು ಸಂಗ್ರಹಿಸುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾರಾಟದ ವಿವರಗಳನ್ನು ಹಂಚಿಕೊಳ್ಳದ ಕಾರಣಕ್ಕಾಗಿ ಖಾನ್ ಅವರನ್ನು ಪಾಕಿಸ್ತಾನದ ಚುನಾವಣಾ ಆಯೋಗ (ECP) ಅನರ್ಹಗೊಳಿಸಿತ್ತು. ಅವರು ದೇಶದ ಪ್ರಧಾನಿಯಾಗಿ ಸ್ವೀಕರಿಸಿದ ಉಡುಗೊರೆಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಅವರನ್ನು ಶಿಕ್ಷಿಸುವಂತೆ ಚುನಾವಣಾ ಸಂಸ್ಥೆ ನಂತರ ಜಿಲ್ಲಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ಅದರ ವಿಚಾರಣೆ ಇಂದು ನಿಗದಿ ಆಗಿತ್ತು.

ಈ ಸಂಬಂಧ ಇಮ್ರಾನ್ ಖಾನ್​ ತಮ್ಮ ಪಕ್ಷದ ಕಾರ್ಯಕರ್ತರ ಬೆಂಗಾವಲು ಪಡೆಯೊಂದಿಗೆ ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ಹೊರಟು ಇಸ್ಲಾಮಾಬಾದ್‌ಗೆ ತೆರಳುತ್ತಿದ್ದರು ಎಂದು ಡಾನ್ ವರದಿ ಮಾಡಿದೆ.

ಇಮ್ರಾನ್​ ಖಾನ್​ ಕೋರ್ಟ್​ಗೆ ಬರುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಪೊಲೀಸರನ್ನು ಈ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. ಈ ನಡುವೆ ಈ ಅಪಘಾತ ನಡೆದಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಇಮ್ರಾನ್​ಖಾನ್​ ಹತ್ಯೆಗೆ ಯತ್ನ ಮಾಡಲಾಗಿತ್ತು. ಆದರೆ ಖಾನ್​ ಅದೃಷ್ಟವಶಾತ್ ಬದುಕುಳಿದಿದ್ದರು.

ವಾರಂಟ್​​ ಅಮಾನತಿಗೆ ನಿರಾಕರಿಸಿದ್ದ ಕೋರ್ಟ್​: ಇಮ್ರಾನ್ ಅವರಿಗೆ ನೀಡಲಾದ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಶುಕ್ರವಾರ ಇಮ್ರಾನ್‌ಗೆ ನೀಡಲಾದ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ಅಮಾನತುಗೊಳಿಸಿತ್ತು. ಶನಿವಾರ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು.

Last Updated : Mar 18, 2023, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.