ETV Bharat / international

ಪಾಕಿಸ್ತಾನ ಕೂಡ ಭಾರತದಂತೆ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಬಯಸಿತ್ತು: ಇಮ್ರಾನ್ ಖಾನ್ - ಸಚಿವ ಇಶಾಕ್ ದಾರ್

ತಮ್ಮ ಸರ್ಕಾರ ಪತನವಾಗದಿದ್ದರೆ ಪಾಕಿಸ್ತಾನ ಕೂಡ ಭಾರತದ ಹಾಗೆ ರಷ್ಯಾದಿಂದ ಅಗ್ಗದ ದರದ ಕಚ್ಚಾ ತೈಲ ಖರೀದಿಸಬಹುದಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

imran khan pak news
imran khan pak news
author img

By

Published : Apr 10, 2023, 4:13 PM IST

ನವದೆಹಲಿ : ಭಾರತದ ವಿದೇಶ ವ್ಯಾಪಾರ ನೀತಿಯನ್ನು ಶ್ಲಾಘಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಭಾರತದ ಹಾಗೆ ಪಾಕಿಸ್ತಾನ ಕೂಡ ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾತೈಲವನ್ನು ಖರೀದಿಸಲು ಬಯಸಿತ್ತು ಎಂದು ಹೇಳಿದ್ದಾರೆ. ಆದರೆ ತಮ್ಮ ಸರ್ಕಾರವು ಅವಿಶ್ವಾಸ ಮತ ಯಾಚನೆಯಲ್ಲಿ ಅಧಿಕಾರ ಕಳೆದುಕೊಂಡ ಕಾರಣದಿಂದ ಹಾಗೆ ಮಾಡಲಾಗಲಿಲ್ಲ ಎಂದಿದ್ದಾರೆ. ವಿಡಿಯೋ ಸಂದೇಶದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಭಾರತದಂತೆಯೇ ರಷ್ಯಾದ ಕಚ್ಚಾ ತೈಲವನ್ನು ಪಡೆಯಲು ಬಯಸಿದ್ದೆವು, ಆದರೆ ಅದು ಸಾಧ್ಯವಾಗಲಿಲ್ಲ ಎಂದರು. ಉಕ್ರೇನ್ ಯುದ್ಧ ನಡೆಯುತ್ತಿರುವ ಮಧ್ಯೆಯೂ ಭಾರತದ ಹಾಗೆ ಪಾಕಿಸ್ತಾನವು ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸಬಹುದಾಗಿತ್ತು ಎಂದು ಅವರು ವಿಷಾದಿಸಿದರು.

ಪಾಶ್ಚಿಮಾತ್ಯ ರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ಭಾರತವು ರಷ್ಯಾದಿಂದ ಅಗ್ಗದ ತೈಲ ಖರೀದಿಸುತ್ತಿರುವುದು ಹಾಗೂ ದೇಶ ಆರ್ಥಿಕವಾಗಿ ಬೆಳವಣಿಗೆ ಕಾಣುತ್ತಿರುವುದಕ್ಕೆ ಇಮ್ರಾನ್ ಖಾನ್ ಭಾರತವನ್ನು ಶ್ಲಾಘಿಸಿದ್ದು ಇದೇ ಮೊದಲ ಸಲವಲ್ಲ ಎಂಬುದು ಗಮನಾರ್ಹ. ಮೇ 2022 ರಲ್ಲಿ ಕೂಡ ಇಮ್ರಾನ್ ಖಾನ್, ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಶ್ಲಾಘಿಸಿದ್ದರು.

ಸರ್ಕಾರ ಹಾಗೂ ನ್ಯಾಯಾಂಗದ ಮಧ್ಯೆ ಬಿಕ್ಕಟ್ಟು: ಪಾಕಿಸ್ತಾನದ ಆರ್ಥಿಕ ಪ್ರಕ್ಷುಬ್ಧತೆ ಮತ್ತು ಭದ್ರತಾ ಪರಿಸ್ಥಿತಿಯನ್ನು ನೋಡಿದರೆ ಸದ್ಯದ ಸ್ಥಿತಿಯಲ್ಲಿ ಪ್ರಾಂತೀಯ ಕ್ಷಿಪ್ರ ಚುನಾವಣೆ ನಡೆಸುವುದು ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲ ಎಂದು ಆ ದೇಶದ ಹಣಕಾಸು ಸಚಿವ ಇಶಾಕ್ ದಾರ್ ಸೋಮವಾರ ಹೇಳಿದ್ದಾರೆ. ಚುನಾವಣೆಗಳನ್ನು ನಡೆಸಲೇಬೇಕೆಂದು ಕಳೆದ ವಾರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಸದ್ಯ ಸಚಿವ ಇಶಾಕ್ ದಾರ್ ಅವರ ಹೇಳಿಕೆ ನ್ಯಾಯಾಂಗದ ಆದೇಶವನ್ನು ಅಲ್ಲಗಳೆಯುವಂಥ ಹೇಳಿಕೆಯಾಗಿದೆ. ಇದರಿಂದ ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆಯಿದೆ. ಈಗಾಗಲೇ ಪಾಕಿಸ್ತಾನದಲ್ಲಿ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿದೆ.

ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ಸೋಮವಾರದೊಳಗೆ 21 ಬಿಲಿಯನ್ ರೂಪಾಯಿಗಳಷ್ಟು ಅನುದಾನ ನೀಡಬೇಕೆಂದು ಸುಪ್ರೀಂ ಕೋರ್ಟ್​ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರ ಅನುದಾನ ನೀಡಿದ ಬಗ್ಗೆ ತನಗೆ ವರದಿ ಮಾಡುವಂತೆ ಕೂಡ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಈ ವರ್ಷದ ಆರಂಭದಲ್ಲಿ ಎರಡು ಪ್ರಾಂತ್ಯಗಳಲ್ಲಿ ತಮ್ಮ ಸ್ಥಳೀಯ ಸರ್ಕಾರಗಳನ್ನು ವಿಸರ್ಜಿಸಿದ್ದಾರೆ ಮತ್ತು ಅಕ್ಟೋಬರ್ ವರೆಗೆ ದೇಶದಾದ್ಯಂತ ಕ್ಷಿಪ್ರ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಇಮ್ರಾನ್ ಖಾನ್​ಗೆ ಸಮನ್ಸ್​: ತೋಷಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ನ್ಯಾಯಾಲಯವು ಏಪ್ರಿಲ್ 11 ರಂದು ಹಾಜರಾಗುವಂತೆ ಸಮನ್ಸ್ ನೀಡಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಪ್ರಕರಣದಲ್ಲಿ ತುರ್ತು ವಿಚಾರಣೆಯನ್ನು ಕೋರಿದ ಮನವಿಯ ಮೇಲೆ ಸಮನ್ಸ್ ನೀಡಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ಒಂದಾನೊಂದು ಕಾಲದಲ್ಲಿ ಸ್ಟಾರ್​ ಆಗಿದ್ದೆ, ಆದರೆ...; ಬಾಬಿ ಡಿಯೋಲ್​ ಮನದಾಳದ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.