ನವದೆಹಲಿ : ಯುದ್ಧಪೀಡಿತ ಸುಡಾನ್‌ನಿಂದ ರಕ್ಷಿಸಲ್ಪಟ್ಟು ಸೌದಿ ಅರೇಬಿಯಾದಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸುಖವಿಂದರ್ ಸಿಂಗ್ ಎಂಬುವರು ನಿಟ್ಟುಸಿರು ಬಿಟ್ಟು, ಸುಡಾನ್ನಲ್ಲಿದ್ದಾಗ ನಾವು ಇನ್ನೇನು ಸತ್ತೇ ಹೋಗುತ್ತೇವೆ ಅನಿಸಿತ್ತು ಎಂದರು. ಸುಡಾನ್‌ನಿಂದ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಕಾವೇರಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಥಮ ಹಂತದಲ್ಲಿ ರಕ್ಷಿಸಲ್ಪಟ್ಟ 360 ಭಾರತೀಯರ ಪೈಕಿ ಒಬ್ಬರಾಗಿದ್ದಾರೆ ಸುಖವಿಂದರ್ ಸಿಂಗ್. ಹರಿಯಾಣದ ಫರಿದಾಬಾದ್ ನಿವಾಸಿಯಾದ ಸುಖ್ವಿಂದರ್ ಅವರು ಸುಡಾನ್‌ನಲ್ಲಿನ ತಮ್ಮ ಅನುಭವವನ್ನು ನೆನಪಿಸಿಕೊಂಡು, ನಾನಿನ್ನೂ ಭೀತಿಯಲ್ಲಿಯೇ ಇದ್ದೇನೆ ಎಂದರು.
-
#WATCH Indian Navy engaged in evacuation of Indian nationals from Sudan
— ANI (@ANI) April 27, 2023 " class="align-text-top noRightClick twitterSection" data="
INS Teg has evacuated 297 Indians from Port Sudan to Jeddah. This is 2nd batch to arrive by Navy's warships,first batch of 278 Indians was brought to Jeddah by INS Sumedha on 26 Apr.
(Source:Indian Navy) pic.twitter.com/WDyng0wJ47
">#WATCH Indian Navy engaged in evacuation of Indian nationals from Sudan
— ANI (@ANI) April 27, 2023
INS Teg has evacuated 297 Indians from Port Sudan to Jeddah. This is 2nd batch to arrive by Navy's warships,first batch of 278 Indians was brought to Jeddah by INS Sumedha on 26 Apr.
(Source:Indian Navy) pic.twitter.com/WDyng0wJ47#WATCH Indian Navy engaged in evacuation of Indian nationals from Sudan
— ANI (@ANI) April 27, 2023
INS Teg has evacuated 297 Indians from Port Sudan to Jeddah. This is 2nd batch to arrive by Navy's warships,first batch of 278 Indians was brought to Jeddah by INS Sumedha on 26 Apr.
(Source:Indian Navy) pic.twitter.com/WDyng0wJ47
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಒಂದು ಪ್ರದೇಶದಲ್ಲಿ ಇದ್ದೆವು. ಅಲ್ಲಿ ಒಂದು ಕೋಣೆಗೆ ಸೀಮಿತವಾಗಿದ್ದೆವು. ನಾವು ಮರಣಶಯ್ಯೆಯಲ್ಲಿದ್ದೇವೆ ಎಂಬ ಪರಿಸ್ಥಿತಿ ಇತ್ತು ಎಂದರು. ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಹಿಂಸಾಚಾರ ಪೀಡಿತ ಸುಡಾನ್‌ನಿಂದ ಕನಿಷ್ಠ 670 ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿಗೆ ತಲುಪಿದ ಮತ್ತೋರ್ವ ಭಾರತೀಯ ಉತ್ತರ ಪ್ರದೇಶದ ಕುಶಿನಗರದ ಕಾರ್ಮಿಕ ಛೋಟು, ನಾನು ಸತ್ತು ವಾಪಸ್ ಬಂದಿದ್ದೇನೆ ಎಂದು ಜೋರಾಗಿ ಕೂಗಿದ. ಇನ್ನು ಎಂದಿಗೂ ನಾನು ಎಂದಿಗೂ ಸುಡಾನ್‌ಗೆ ಹಿಂತಿರುಗುವುದಿಲ್ಲ. ನನ್ನ ದೇಶದಲ್ಲಿ ನಾನು ಏನು ಬೇಕಾದರೂ ಮಾಡುತ್ತೇನೆ. ಆದರೆ ಅಲ್ಲಿಗೆ ಹೋಗುವುದಿಲ್ಲ ಎಂದಿದ್ದಾನೆ.
ಸುಡಾನ್‌ನಿಂದ ಮರಳಿದವರ ಫೋಟೋ ಹಂಚಿಕೊಂಡ ವಿದೇಶಾಂಗ ಸಚಿವರು: ವಿದೇಶಾಂಗ ಸಚಿವ ಎಸ್ ಜೈಶಂಕರ್ ಸುಡಾನ್‌ನಿಂದ ಮರಳಿದ ಭಾರತೀಯರ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಭಾರತವು ತನ್ನ ಜನರನ್ನು ಸ್ವಾಗತಿಸುತ್ತದೆ. ಆಪರೇಷನ್ ಕಾವೇರಿ ಅಡಿಯಲ್ಲಿ ಮೊದಲ ವಿಮಾನವು ನವದೆಹಲಿಯನ್ನು ತಲುಪಿದೆ ಮತ್ತು 360 ಭಾರತೀಯ ನಾಗರಿಕರು ತಾಯ್ನಾಡಿಗೆ ಮರಳಿದ್ದಾರೆ ಎಂದು ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ. ಸುಡಾನ್‌ನಿಂದ ಬಂದ ಮತ್ತೋರ್ವ ಭಾರತೀಯ ಪಂಜಾಬ್‌ನ ಹೋಶಿಯಾರ್‌ಪುರ ನಿವಾಸಿ ತಸ್ಮರ್ ಸಿಂಗ್ (60) ತಮ್ಮಭಯಾನಕ ಅನುಭವ ಹಂಚಿಕೊಂಡರು. ನಾವು ಅಲ್ಲಿ ಒಂದು ಜೀವಂತ ಶವದ ರೀತಿಯಲ್ಲಿ ಇದ್ದೆವು. ಚಿಕ್ಕ ಕೋಣೆಯೊಂದರಲ್ಲಿ ಕರೆಂಟ್ ಇರಲಿಲ್ಲ, ನೀರೂ ಇರಲಿಲ್ಲ. ಜೀವನದಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಆದರೆ ದೇವರ ದಯೆಯಿಂದ ನಾವು ಜೀವಂತವಾಗಿದ್ದೇವೆ ಎಂದರು ತಸ್ಮರ್ ಸಿಂಗ್.
ಸುಡಾನ್‌ನಿಂದ ಮೊದಲು ಜಡ್ಡಾಕ್ಕೆ ಶಿಪ್ಟ್: ಆಪರೇಷನ್ ಕಾವೇರಿ ಅಂಗವಾಗಿ ಭಾರತವು ಮೊದಲು ತನ್ನ ಜನರನ್ನು ಸುಡಾನ್‌ನಿಂದ ರಕ್ಷಿಸಿ ಸೌದಿ ಅರೇಬಿಯಾದ ಜೆಡ್ಡಾಗೆ ಕರೆದುಕೊಂಡು ಹೋಗುತ್ತಿದೆ. ಅಲ್ಲಿಂದ ವಿಮಾನದ ಮೂಲಕ ನವದೆಹಲಿಗೆ ಕರೆತರುತ್ತಿದೆ. ಸುಡಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವವರು ಹಾಗೂ ಅವರ ಕುಟುಂಬಸ್ಥರಿಗೆ ಸಹಾಯ ಮಾಡಲು ಭಾರತದ ಹಲವಾರು ರಾಜ್ಯಗಳು ಸಹಾಯವಾಣಿ ಆರಂಭಿಸಿವೆ. ಅಲ್ಲದೆ ಅಲ್ಲಿಂದ ಮರಳಿ ಬರುವವರ ಸಹಾಯಕ್ಕೆ ಮುಂದಾಗಿವೆ.
ಸುಡಾನ್‌ನಲ್ಲಿ ನಡೆದ ತೀವ್ರ ಹೋರಾಟದಲ್ಲಿ 400ಕ್ಕೂ ಹೆಚ್ಚು ಜನರು ಈವರೆಗೆ ಸಾವನ್ನಪ್ಪಿದ್ದಾರೆ ಮತ್ತು 3,551 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಸುಡಾನ್‌ನಲ್ಲಿ ಸುಮಾರು 11 ಆಸ್ಪತ್ರೆಗಳ ಮೇಲೆ ದಾಳಿ ನಡೆದಿದೆ ಎಂದು WHO ಹೇಳಿದೆ. ಈ ಬಗ್ಗೆ ಮಾತನಾಡಿದ ಯುನಿಸೆಫ್ ವಕ್ತಾರ ಜೇಮ್ಸ್ ಎಲ್ಡರ್, ಹೋರಾಟದಲ್ಲಿ ಕನಿಷ್ಠ ಒಂಬತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಹೋರಾಟವು ಈಗಾಗಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ಸೂಡಾನ್ ಮಕ್ಕಳ ಜೀವನವನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಇರಾನ್ನಿಂದ ತಾಯ್ನಾಡಿಗೆ ಮರಳಿದ 35 ಸಾವಿರ ಅಫ್ಘನ್ ನಿರಾಶ್ರಿತರು