ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ವಾರ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದ ಎಲೋನ್ ಮಸ್ಕ್ ಒಡೆತನದ ಟ್ವಿಟರ್, ಈಗ ಆಂತರಿಕ ಅವ್ಯವಸ್ಥೆಯಿಂದಾಗಿ ತನ್ನ ಕೆಲವು ಉದ್ಯೋಗಿಗಳಿಗೆ ಮರಳಿ ಬರುವಂತೆ ಮನವಿ ಮಾಡಿದೆ. ಮತ್ತು ಸಂಸ್ಥೆಯ ಉಳಿದ ಉದ್ಯೋಗಿಗಳಿಗೆ ಸಹಾಯ ಮಾಡುವಂತೆ ಕೇಳಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ಲಾಟ್‌ಫಾರ್ಮರ್ ಸಂಪಾದಕ ಕೇಸಿ ನ್ಯೂಟನ್ , ಟ್ವಿಟರ್ ಕಂಪನಿಯು ತನ್ನ ಕೆಲ ಉದ್ಯೋಗಿಗಳಿಗೆ ತಮ್ಮ ತಮ್ಮ ಉದ್ಯೋಗ ಸ್ಥಾನಗಳಿಗೆ ಮರುಳುವಂತೆ ಕೇಳಿದೆ ಎಂದು ಹೇಳಿದ್ದಾರೆ. ಅಲ್ಲದೆ ನಿಮ್ಮಲ್ಲಿ ಯಾರಾದರೂ ಮರಳಿ ಬರಬಹುದಾದ ಜನರೊಂದಿಗೆ ಸಂಪರ್ಕದಲ್ಲಿದ್ದರೆ ಮತ್ತು ಅಂತವರ ನಾಮನಿರ್ದೇಶನ ಮಾಡುವಂತೆ ಸೂಚಿಸಿದೆ ಎಂದು ನ್ಯೂಟನ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಟ್ವಿಟರ್ ಸಂಸ್ಥೆಯ ವಜಾಗೊಳಿಸುವಿಕೆಯಿಂದಾಗಿ ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿದ್ದ ಉದ್ಯೋಗಿಗಳನ್ನು ತೆಗೆದುಹಾಕಿದ್ದು, ಸಂಸ್ಥೆಯ ಆಂತರಿಕ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಆದರೆ, ಟ್ವಿಟರ್‌ನ ಸುರಕ್ಷತೆ ಮತ್ತು ಸಮಗ್ರತೆಯ ಮುಖ್ಯಸ್ಥ ಯೊಯೆಲ್ ರಾತ್, ಕಂಪನಿಯು ಪ್ರತಿಭಾನ್ವಿತ ಉದ್ಯೋಗಿಗಳನ್ನು ವಜಾಗೊಳಿಸಿದರೂ, ನಮ್ಮ ಪ್ರಮುಖ ಸಾಮರ್ಥ್ಯಗಳು ಸಂಸ್ಥೆಯಲ್ಲೇ ಉಳಿದಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ‘ಹೇ ಸಿರಿ’ ಕಮಾಂಡ್ ಕೇವಲ ‘ಸಿರಿ’ ಎಂದು ಬದಲಾಯಿಸಲು ಆ್ಯಪಲ್ ನಿರ್ಧಾರ