ಉತ್ತರ ಕೊರಿಯಾದ ಸರ್ಕಾರಕ್ಕೆ ಸಂಬಂಧಿಸಿದ ಹ್ಯಾಕರ್‌ಗಳು ಕಳೆದ ತಿಂಗಳು ವಿಡಿಯೋ ಗೇಮಿಂಗ್ ಕಂಪನಿಯಿಂದ 600 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಕ್ರಿಪ್ಟೋಕರೆನ್ಸಿಯನ್ನು ಕದ್ದಿದ್ದಾರೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ಆರೋಪಿಸಿದೆ. ಡಿಪಿಆರ್ಕೆಗೆ ಸಂಬಂಧಿಸಿದ ಸೈಬರ್ ಕಳ್ಳರು ಮಾರ್ಚ್ 29 ರಂದು ಎಥೆರಿಯಮ್ ಕ್ರಿಪ್ಟೋಕರೆನ್ಸಿ ಮೂಲಕ 620 ಮಿಲಿಯನ್ ಡಾಲರ್ ವರ್ಚುಯಲ್ ಆಸ್ತಿ ಕಳ್ಳತನ ಮಾಡಿದೆ. ಡಿಪಿಆರ್ಕೆ ಎಂದರೆ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದ ಸಂಕ್ಷಿಪ್ತ ರೂಪವಾಗಿದೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ.
ಕ್ರಿಪ್ಟೋಕರೆನ್ಸಿಯನ್ನು ಹ್ಯಾಕ್ ಮಾಡಲು ವಿಡಿಯೊ ಗೇಮ್ ಆದ 'ಆಕ್ಸಿ ಇನ್ಫಿನಿಟಿ'ಯನ್ನು ಬಳಸಲಾಗಿದೆ. ಆಕ್ಸಿ ಇನ್ಫಿನಿಟಿಯನ್ನು ರಚಿಸಿದ ಕಂಪನಿಯಾದ ಸ್ಕೈ ಮಾವಿಸ್ ಮಾರ್ಚ್ 29 ರಂದು ಹ್ಯಾಕರ್‌ಗಳು 600 ಮಿಲಿಯನ್ ಡಾಲರ್ ಹಣ ಕದ್ದಿದ್ದಾರೆ ಎಂದು ಘೋಷಿಸಿತು. ಈ ವೇಳೆಯ ತನಿಖೆಯಲ್ಲಿ ಉತ್ತರ ಕೊರಿಯಾದ (ಡಿಪಿಆರ್ಕೆ) ಹ್ಯಾಕರ್‌ಗಳು ಇವುಗಳನ್ನು ಕಳವು ಮಾಡಿದ್ದಾರೆ.
ವಿಶ್ವಸಂಸ್ಥೆ ಮತ್ತು ಸೈಬರ್ ತಜ್ಞರ ಪ್ರಕಾರ, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಪರಮಾಣು ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಅನುದಾನ ಹೊಂದಿಸುವ ಸಲುವಾಗಿ ಸೈಬರ್ ಹ್ಯಾಕ್ ಮೂಲಕ ಹಣ ಸಂಗ್ರಹಣೆಗೆ ಇಳಿದಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆಯಲ್ಲಿ ಕಂದಕಕ್ಕೆ ಬಿದ್ದ 106 ಪ್ರಯಾಣಿಕರಿದ್ದ ಬಸ್: 35 ಮಂದಿ ಸಾವು