ETV Bharat / international

ನಾರ್ವೆಯ ಪ್ರಸಿದ್ಧ ಲೇಖಕ, ನಾಟಕಕಾರ ಜಾನ್ ಫಾಸ್ಸೆಗೆ ಸಾಹಿತ್ಯ ನೊಬೆಲ್ ಗರಿ

author img

By ETV Bharat Karnataka Team

Published : Oct 5, 2023, 5:41 PM IST

Updated : Oct 5, 2023, 6:03 PM IST

ನಾರ್ವೆಯ ಲೇಖಕ, ನಾಟಕಕಾರ ಜಾನ್ ಫಾಸ್ಸೆ ಅವರಿಗೆ ಸಾಹಿತ್ಯ ವಿಭಾಗದಲ್ಲಿ ಪ್ರತಿಷ್ಟಿತ ನೊಬೆಲ್ ಪ್ರಶಸ್ತಿ ಸಂದಿದೆ.

2023 Nobel Prize in Literature awarded to Norwegian author Jon Fosse
ನಾರ್ವೆಯ ಲೇಖಕ, ನಾಟಕಕಾರ ಜಾನ್ ಫಾಸ್ಸೆಗೆ ಒಲಿದ ಸಾಹಿತ್ಯ ನೊಬೆಲ್ ಗರಿ

ಸ್ಟಾಕ್‌ಹೋಮ್ (ಸ್ವೀಡನ್): ಸಾಹಿತ್ಯ ವಿಭಾಗದ ಪ್ರತಿಷ್ಟಿತ ನೊಬೆಲ್ ಪ್ರಶಸ್ತಿಯನ್ನು ನಾರ್ವೆಯ ಲೇಖಕ ಜಾನ್ ಫಾಸ್ಸೆ ಅವರಿಗೆ ಇಂದು ಘೋಷಿಸಲಾಗಿದೆ. ದಮನಿತರ ಧ್ವನಿಯಾಗುವ ಇವರ ನವೀನ ನಾಟಕಗಳು ಮತ್ತು ಗದ್ಯಗಳಿಗಾಗಿ ನೊಬೆಲ್​ ಪ್ರಶಸ್ತಿ ಪ್ರಕಟಿಸಲಾಗಿದೆ.

  • BREAKING NEWS
    The 2023 #NobelPrize in Literature is awarded to the Norwegian author Jon Fosse “for his innovative plays and prose which give voice to the unsayable.” pic.twitter.com/dhJgGUawMl

    — The Nobel Prize (@NobelPrize) October 5, 2023 " class="align-text-top noRightClick twitterSection" data=" ">

1999ರಲ್ಲಿ 'ನೋಕಾನ್​ ಕೆಜೆಮ್ ಟಿಲ್ ಎ ಕಮ್ಮೆ' ಎಂಬ ನಾಟಕದೊಂದಿಗೆ ಜಾನ್ ಫಾಸ್ಸೆ ನಾಟಕಕಾರನಾಗಿ ಮುನ್ನೆಲೆಗೆ ಬಂದರು. ಮನುಷ್ಯನ ಆತಂಕ, ದುಗುಡ ಹಾಗೂ ಅಸೂಯೆಯನ್ನು ತೊಡೆದುಹಾಕುವ ಕುರಿತ ಮನೋಜ್ಞ ಸಾಹಿತ್ಯವೇ ಇವರನ್ನು ಇದೀಗ ನೊಬೆಲ್ ಪ್ರಶಸ್ತಿಯವರೆಗೆ ಕರೆತಂದಿದೆ. ನಾರ್ವೇಜಿಯನ್ ಭಾಷೆಯಲ್ಲಿ ಅಗಾಧ ಸಾಹಿತ್ಯ ಕೃಷಿಯನ್ನು ಜಾನ್ ಫಾಸ್ಸೆ ಮಾಡಿದ್ದಾರೆ.

ನಾಟಕಗಳು, ಕಾದಂಬರಿಗಳು, ಕವನ ಸಂಗ್ರಹಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಮತ್ತು ಅನುವಾದಗಳ ಸಂಪತ್ತನ್ನು ಇವರ ಕೃತಿಗಳು ಒಳಗೊಂಡಿವೆ. ಇಂದು ವಿಶ್ವದ ಅತ್ಯಂತ ವ್ಯಾಪಕವಾಗಿ ಪ್ರದರ್ಶನ ನೀಡಿದ ನಾಟಕಕಾರರಲ್ಲಿ ಫಾಸ್ಸೆ ಕೂಡಾ ಒಬ್ಬರು. ತಮ್ಮ ಗದ್ಯ ಸಾಹಿತ್ಯಕ್ಕಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ ಎಂದು ರಾಯಲ್​ ಸ್ವೀಡಿಶ್ ಅಕಾಡೆಮಿ ತಿಳಿಸಿದೆ.

ಜಾನ್ ಫಾಸ್ಸೆ ಸಮಕಾಲೀನ ರಂಗಭೂಮಿಯಲ್ಲಿ ಪ್ರಮುಖ ನಾವೀನ್ಯಕಾರರಾಗಿಯೂ ಪರಿಗಣಿಸಲ್ಪಟ್ಟವರು. ತಮ್ಮ ಜೀವನದಲ್ಲಿ ಕಂಡ ದೈನಂದಿನ ಸನ್ನಿವೇಶಗಳನ್ನೇ ಸಾಹಿತ್ಯದ ಮೂಲಕ ಪ್ರಸ್ತುತಪಡಿಸುತ್ತಾರೆ. ಅತ್ಯಂತ ಪ್ರಭಾವಶಾಲಿ ಮಾನವ ಭಾವನೆಗಳನ್ನೂ ಅಷ್ಟೇ ಸರಳ ಪದ ರಚನೆ ಹಾಗೂ ತಮ್ಮ ನಾಟಕಗಳಲ್ಲಿ ವ್ಯಕ್ತಪಡಿಸುತ್ತಾರೆ ಎಂದು ಅಕಾಡೆಮಿ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಕ್ವಾಂಟಮ್ ಡಾಟ್ಸ್‌ ಆವಿಷ್ಕಾರ: ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್‌ ಗೌರವ

ಸಾಹಿತ್ಯ ನೊಬೆಲ್ ಪ್ರಶಸ್ತಿ ಬಗ್ಗೆ...: 2022ರಲ್ಲಿ ಅನ್ನಿ ಎರ್ನಾಕ್ಸ್‌ ಅವರಿಗೆ ಸಾಹಿತ್ಯ ನೊಬೆಲ್​ ಪ್ರಶಸ್ತಿ ನೀಡಲಾಗಿತ್ತು. 2021ರಲ್ಲಿ ಅಬ್ದುಲ್ ರಜಾಕ್ ಗುರ್ನಾಹ್​ ಹಾಗೂ 2020ರಲ್ಲಿ ಲೂಯಿಸ್ ಗ್ಲುಕ್​ ಅವರಿಗೆ ಪ್ರತಿಷ್ಟಿತ ಗೌರವ ಸಂದಿತ್ತು. 1901ರಿಂದ ಇದುವರೆಗೆ ಸಾಹಿತ್ಯ ವಿಭಾಗದಲ್ಲಿ 115 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ.

ಈ ಪೈಕಿ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿಗಳನ್ನು ಇಬ್ಬರು ಸಾಹಿತಿಗಳಿಗೆ ಜಂಟಿಯಾಗಿ ವಿತರಿಸಲಾಗಿದೆ. ಇಲ್ಲಿಯವರೆಗೆ 17 ಮಹಿಳೆಯರು ನೊಬೆಲ್​ ಸಾಹಿತ್ಯ ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ​ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಸಾಹಿತಿ ರುಡ್ಯಾರ್ಡ್ ಕಿಪ್ಲಿಂಗ್​. ಇವರ ತಮ್ಮ 41ನೇ ವಯಸ್ಸಿಗೆ ನೊಬೆಲ್​ಗೆ ಭಾಜನರಾಗಿದ್ದರು. ಅತ್ಯಂತ ಹಿರಿಯ ಸಾಹಿತಿಗಳ ಸಾಲಿನಲ್ಲಿ ಡೋರಿಸ್ ಲೆಸ್ಸಿಂಗ್ ಅವರಿದ್ದು, 88ನೇ ಇಳಿಯಸ್ಸಿನಲ್ಲಿ ನೊಬೆಲ್ ಗೌರವಕ್ಕೆ ಪಾತ್ರರಾಗಿದ್ದರು.

ಇದನ್ನೂ ಓದಿ: ಭೌತಶಾಸ್ತ್ರದ ನೊಬೆಲ್: ಅಮೆರಿಕ, ಜರ್ಮನಿ, ಸ್ವೀಡನ್​ನ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ

Last Updated : Oct 5, 2023, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.