ETV Bharat / international

ಇರಾನ್​ ಬತ್ತಳಿಕೆಗೆ ಹೊಸ ಅಸ್ತ್ರ: 1400 ಕಿಮೀ ದೂರ ಸಾಗಿ ಹೊಡೆಯುವ 'ಹೈಪರ್ಸಾನಿಕ್ ಕ್ಷಿಪಣಿ' ಸೇರ್ಪಡೆ - ಇಸ್ರೇಲ್​ ಹಮಾಸ್​ ಯುದ್ಧ

ಇರಾನ್​ ಸೇನಾ ಬತ್ತಳಿಕೆಗೆ ಬಲಿಷ್ಠ ಹೈಪರ್ಸಾನಿಕ್ ಕ್ಷಿಪಣಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇಸ್ರೇಲ್​ - ಹಮಾಸ್​ ಯುದ್ಧದ ನಡುವೆ ಇದನ್ನು ಅನಾವರಣಗೊಳಿಸಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹೈಪರ್ಸಾನಿಕ್ ಕ್ಷಿಪಣಿ
ಹೈಪರ್ಸಾನಿಕ್ ಕ್ಷಿಪಣಿ
author img

By ETV Bharat Karnataka Team

Published : Nov 25, 2023, 6:17 PM IST

ನವದೆಹಲಿ: ಹಮಾಸ್​ -ಇಸ್ರೇಲ್​ ಯುದ್ಧದ ನಡುವೆಯೇ ಇರಾನ್​ ತನ್ನ ಸೇನಾ ಬತ್ತಳಿಕೆಗೆ 1400 ಕಿಮೀ ದೂರ ನುಗ್ಗಿ ಶತ್ರು ಭೇದಿಸಬಲ್ಲ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ (ಎಚ್​ಸಿಎಂ)ಯನ್ನು ಸೇರಿಸಿಕೊಂಡಿದೆ. ಇದು ಇಸ್ರೇಲ್​ ಮೇಲಿನ ದಾಳಿಗೆ ಬಳಸಲಾಗುತ್ತದೆಯೇ ಎಂಬ ಅನುಮಾನ ಮೂಡಿಸಿದೆ.

ಕ್ಷಿಪಣಿ ಸರಣಿಯ ಹೊಸ ಆವೃತ್ತಿಗೆ ಫತ್ತಾಹ್​-II ಎಂದು ಹೆಸರಿಸಲಾಗಿದೆ. ಇದನ್ನು ಇರಾನ್​ ಸ್ವದೇಶಿ ನಿರ್ಮಿಯ ಕ್ಷಿಪಣಿ ಎಂದು ಹೇಳಿದೆ. ಆದರೆ, ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಆ ದೇಶ ಸೃಜಿಸಿದ್ದು ಅನುಮಾನಕ್ಕೆ ಕಾರಣವಾಗಿದೆ. ಈ ತಂತ್ರಜ್ಞಾನವನ್ನ ಅದು ಮಿತ್ರ ರಾಷ್ಟ್ರಗಳಿಂದ ಎರವಲು ಪಡೆದಿರುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗಿದೆ.

ಇರಾನ್‌ನ ಅಶುರಾ ಏರೋಸ್ಪೇಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರದರ್ಶನದಲ್ಲಿ ಈ ಕ್ಷಿಪಣಿಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಫತ್ತಾಹ್ II ಗ್ಲೈಡ್ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಕ್ಷಿಪಣಿ ಎಂದು ಇರಾನ್ ಹೇಳಿಕೊಂಡಿದೆ. ಇದು ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳಾದ ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ ಮತ್ತು ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ ವರ್ಗಗಳಿಗೆ ಸೇರಿದ್ದಾಗಿದೆ.

ಈ ಹೈಪರ್ಸಾನಿಕ್ ಕ್ಷಿಪಣಿ ತಯಾರಿಸುವ ಸಾಮರ್ಥ್ಯ ಇರುವ ಅಮೆರಿಕ, ಚೀನಾ ಸೇರಿದಂತೆ ವಿಶ್ವದ ನಾಲ್ಕು ರಾಷ್ಟ್ರಗಳ ಸಾಲಿಗೆ ಇರಾನ್​ ಕೂಡ ಈಗ ಸೇರಿದೆ. ಇರಾನ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (IRGC) ಏರೋಸ್ಪೇಸ್ ಫೋರ್ಸ್ ಈ ವರ್ಷದ ಆರಂಭದಲ್ಲಿ ಕ್ಷಿಪಣಿಯನ್ನು ಸ್ವದೇಶಿ ನಿರ್ಮಿತ ಹೇಳಿಕೊಂಡಿದೆ. ಹೈಪರ್ಸಾನಿಕ್ ಕ್ಷಿಪಣಿಯು 1,400 ಕಿಮೀ ವ್ಯಾಪ್ತಿವರೆಗೂ ಸಾಗುವ ಸಾಮರ್ಥ್ಯ ಹೊಂದಿದೆ. ಇದು ಕ್ಷಿಪಣಿ ವಿರೋಧಿ ಶೀಲ್ಡ್‌ಗಳನ್ನು ಹೊಂದಿದೆ ಎಂದು ಐಆರ್​ಜಿಸಿ ಹೇಳಿದೆ.

ತಂತ್ರಜ್ಞಾನ ಕದಿಯಿತೇ ಇರಾನ್​?: ಅಮೆರಿಕ, ಚೀನಾ ದೇಶಗಳು ಮಾತ್ರ ಇಂತಹ ಪ್ರಬಲ ಕ್ಷಿಪಣಿಗಳನ್ನು ಹೊಂದಿವೆ. ಈಗ ಇರಾನ್​ ಈ ತಂತ್ರಜ್ಞಾನವನ್ನು ಬಳಸಿ ಕ್ಷಿಪಣಿ ತಯಾರಿಸಿದ್ದು, ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಜೊತೆಗೆ ಇರಾನ್, ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್​ನ ಸದಸ್ಯ ರಾಷ್ಟ್ರವಾಗಿಲ್ಲ. ಇದು ಕ್ಷಿಪಣಿಗಳು ಮತ್ತು ಕ್ಷಿಪಣಿ ತಂತ್ರಜ್ಞಾನದ ಪ್ರಸರಣದ ಮೇಲೆ ಹಿಡಿತ ಹೊಂದಿದೆ. ಭಾರತ ಸೇರಿದಂತೆ 35 ಸದಸ್ಯ ರಾಷ್ಟ್ರಗಳು ಈ ಒಪ್ಪಂದದ ಭಾಗವಾಗಿವೆ. 500 ಕಿಮೀ ಸಾಗುವ ಪೆಲೋಡ್​ಗಿಂತ ಹೆಚ್ಚಿನ ಕ್ಷಿಪಣಿಗಳ ತಯಾರಿಕೆ ಮತ್ತು ಪೂರೈಕೆಯನ್ನು ಇದು ತಡೆಗಟ್ಟುತ್ತದೆ.

ಇರಾನ್ ಈವರೆಗೂ 300 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯನ್ನು ದಾಟುವ ಕ್ಷಿಪಣಿಗಳನ್ನು ಹೊಂದಿರಲಿಲ್ಲ. ಇದೀಗ 1400 ಕಿಮೀ ಸಾಗುವ ಕ್ಷಿಪಣಿ ಹೊಂದಿದ್ದು, ಇರಾನ್ ಈ ತಂತ್ರಜ್ಞಾನವನ್ನು ಮಿತ್ರರಾಷ್ಟ್ರಗಳಿಂದ ಪಡೆದುಕೊಂಡಿದೆ ಎಂದು ಊಹಿಸಲಾಗಿದೆ.

ಇದನ್ನೂ ಓದಿ: Wi-Fiಗೆ ಪರ್ಯಾಯ Li-Fi ತಂತ್ರಜ್ಞಾನ ಕಂಡುಹಿಡಿದ ಒಡಿಯಾ ವಿದ್ಯಾರ್ಥಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.