ETV Bharat / international

ಹೆಲಿಕಾಪ್ಟರ್​ ಹಾರುವಾಗ ನಿಮಿಷದಲ್ಲಿ 25 ಬಾರಿ ಪುಲ್​ ಅಪ್​ ಮಾಡಿ ದಾಖಲೆ ಬರೆದ ಯೂಟ್ಯೂಬರ್ಸ್​!

ಹಾರುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಜೋತು ಬಿದ್ದು ಒಂದು ನಿಮಿಷದಲ್ಲಿ ಪುಲ್​ ಅಪ್​ ಮಾಡಿ ನೆದರ್​ಲ್ಯಾಂಡ್​ನ ಇಬ್ಬರು ಯುವಕರು ಗಿನ್ನೆಸ್​ ದಾಖಲೆ ಬರೆದಿದ್ದಾರೆ.

pull-ups-world-record
ಪುಲ್​ ಅಪ್​ ಮಾಡಿ ದಾಖಲೆ
author img

By

Published : Aug 7, 2022, 10:40 AM IST

Updated : Aug 10, 2022, 6:21 AM IST

ನವದೆಹಲಿ: ಹೆಲಿಕಾಪ್ಟರ್​ ಅನ್ನು ಪಯಣಿಸಲು ಬಳಸುತ್ತಾರೆ. ಆದರೆ, ಇಲ್ಲಿಬ್ಬರು ಕ್ರೇಜಿ ಯೂಟ್ಯೂಬರ್​ಗಳು ಜೋತು ಬಿದ್ದು ಪುಲ್​​ಅಪ್​ ಮಾಡಿದ್ದಾರೆ. ಹೆಲಿಕಾಪ್ಟರ್​​ ಹಾರುತ್ತಿರುವ ವೇಳೆ ಒಂದು ನಿಮಿಷದಲ್ಲಿ 25 ಬಾರಿ ಪುಲ್​ ಅಪ್​ ಮಾಡಿ ಗಿನ್ನೆಸ್​ ದಾಖಲೆ ಬರೆದಿದ್ದಾರೆ.

  • " class="align-text-top noRightClick twitterSection" data="">

ನೆದರ್‌ಲ್ಯಾಂಡ್ಸ್‌ನ ಸ್ಟಾನ್ ಬ್ರೌನಿ ಮತ್ತು ಅರ್ಜೆನ್ ಆಲ್ಬರ್ಸ್ ಜುಲೈ 6 ರಂದು ಬೆಲ್ಜಿಯಂನ ಆಂಟ್​ವರ್ಪ್​ನ ಹೋವೆನೆಲ್​ ಏರ್​ಫೀಲ್ಡ್​ನಲ್ಲಿ ಈ ದಾಖಲೆ ಸೃಷ್ಟಿಸಿದರು. ಅರ್ಜೆನ್ ಆಲ್ಬರ್ಸ್​ ಮೊದಲು ಹಾರುತ್ತಿದ್ದ ಹೆಲಿಕಾಪ್ಟರ್​ಗೆ ಜೋತು ಬಿದ್ದು ಒಂದು ನಿಮಿಷದಲ್ಲಿ 24 ಬಾರಿ ಪುಲ್​ ಅಪ್​ ಮಾಡಿದರು. ಈ ಹಿಂದೆ ಅರ್ಮೇನಿಯನಾದ ರೋಮನ್ ಸಹರಾದ್ಯಾನ್ ನಿರ್ಮಿಸಿದ್ದ (23) ದಾಖಲೆಯನ್ನು ಮುರಿದರು.

ಇದಾದ ಬಳಿಕ ಸ್ಟಾನ್ ಬ್ರೌನಿ ಅದೇ ಹೆಲಿಕಾಪ್ಟರ್​ನಲ್ಲಿ ಒಂದು ನಿಮಿಷದೊಳಗೆ 25 ಬಾರಿ ಪುಲ್ ಅಪ್‌ ಮಾಡುವುದರೊಂದಿಗೆ ಅರ್ಜೆನ್​ ಆಲ್ಬರ್ಸ್​ ದಾಖಲೆಯನ್ನು ಕೆಲವೇ ನಿಮಿಷಗಳಲ್ಲಿ ಪುಡಿ ಮಾಡಿದರು. ಈ ದಾಖಲೆಯ ವಿಡಿಯೋವನ್ನು ಇಬ್ಬರೂ ತಮ್ಮ ಯೂಟ್ಯೂಬ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗಂಭೀರ ಆರೋಪ ಬಂದಾಗ ನ್ಯಾಯಾಧೀಶರು ಮಂಪರು ಪರೀಕ್ಷೆಗೆ ಒಳಪಡಬೇಕು: ನ್ಯಾ.ಕೃಷ್ಣ ಭಟ್

Last Updated : Aug 10, 2022, 6:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.