ETV Bharat / international

ನಾಸಾದಿಂದ ಹೊಸ ಅಧ್ಯಯನ ಪ್ರಾರಂಭ... ಈ ಬಾರಿಯ ಸಂಶೋಧನೆ ಏನು ಗೊತ್ತೇ? - ನಾಸಾದಿಂದ ಮತ್ತೊಂದು ಹೊಸ ಅಧ್ಯಯನ ಪ್ರಾರಂಭ

ನಾಸಾ ಮತ್ತೊಂದು ಗುಡ್​ನ್ಯೂಸ್​ ನೀಡಿದೆ. UFOಗಳ ಅಧ್ಯಯನವನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಯುಎಪಿಗಳು ಅಥವಾ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳನ್ನು ಪರೀಕ್ಷಿಸಲು ಪ್ರಮುಖ ವಿಜ್ಞಾನಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ನಾಸಾ
ನಾಸಾ
author img

By

Published : Jun 10, 2022, 7:37 AM IST

ಕೇಪ್ ಕೆನವೆರಲ್: ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೊಂದು ಹೊಸ ಅಧ್ಯಯನವನ್ನು ಪ್ರಾರಂಭಿಸುವುದಾಗಿ ಗುರುವಾರ ಘೋಷಿಸಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ಡೇಟಾ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದೆ. ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳನ್ನು ಪರೀಕ್ಷಿಸಲು ಪ್ರಮುಖ ವಿಜ್ಞಾನಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ನಾಸಾದ ವಿಜ್ಞಾನ ಮಿಷನ್ ಮುಖ್ಯಸ್ಥ ಥಾಮಸ್ ಜುರ್ಬುಚೆನ್ , ಯುಎಪಿಗಳು ಅಥವಾ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳು ಎಂದು ಕರೆಯಲ್ಪಡುವ ಆಕಾಶದಲ್ಲಿ ಕಂಡು ಬರುವ ನಿಗೂಢ ದೃಶ್ಯಗಳನ್ನು ವಿವರಿಸಲು ಇದು ಮೊದಲ ಹೆಜ್ಜೆ ಎಂದು ನಾಸಾ ಪರಿಗಣಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೊಸ ಅಧ್ಯಯನ ಸದ್ಯದಲ್ಲೇ ಪ್ರಾರಂಭವಾಗುತ್ತದೆ. ಸುಮಾರು ಒಂಬತ್ತು ತಿಂಗಳುಗಳವರೆಗೆ ಈ ಸಂಶೋಧನೆ ನಡೆಯುತ್ತದೆ. ಲಭ್ಯವಿರುವ ಡೇಟಾವನ್ನು ಗುರುತಿಸುವುದು, ಭವಿಷ್ಯದಲ್ಲಿ ಹೆಚ್ಚಿನ ಡೇಟಾವನ್ನು ಹೇಗೆ ಸಂಗ್ರಹಿಸುವುದು ಮತ್ತು ನಾಸಾ ಸಂಶೋಧನೆಗಳನ್ನು ಹೇಗೆ ವಿಶ್ಲೇಷಿಸಬಹುದು ಎಂಬುದನ್ನು ಈ ಅಧ್ಯಯನ ಒಳಗೊಂಡಿದ್ದು, ನಮಗೆ ಗೊತ್ತಿರದ ಅಗೋಚರ ವಿದ್ಯಮಾನಗಳು ಹಾಗೂ ಅನ್ಯ ಗ್ರಹ ಜೀವಿಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅವುಗಳ ಬಗೆಗಿನ ವೈಜ್ಞಾನಿಕ ತಿಳಿವಳಿಕೆ ನೀಡುವ ಕುರಿತು ನಾಸಾ ಸುದೀರ್ಘ ಅಧ್ಯಯನ ನಡೆಸಲಿದೆ.

ಇದನ್ನೂ ಓದಿ: ಉ.ಕೊರಿಯಾ ಮೇಲಿನ ನಿರ್ಬಂಧಗಳಿಗೆ ಚೀನಾ, ರಷ್ಯಾ ವಿಟೋ: ಅಮೆರಿಕ ಪ್ರಸ್ತಾವಕ್ಕೆ ವಿರೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.