ಗೋಮಾ (ಕಾಂಗೋ): ಕಾಂಗೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಶ್ಚಿಮಾತ್ಯ ಸಂಘಟನೆಗಳ ವಿರುದ್ಧ ಪ್ರತಿಭಟ ನಡೆಯುತ್ತಿರುವ ವೇಳೆಯಲ್ಲಿ ಕಾಂಗೋ ಸಶಸ್ತ್ರ ಪಡೆಗಳು ಮತ್ತು ಧಾರ್ಮಿಕ ಪಂಥದ ಸದಸ್ಯರ ನಡುವೆ ಘರ್ಷಣೆ ನಡೆದಿವೆ. ಈ ಘರ್ಷಣೆಯಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಭುಗಿಲೆದ್ದ ಹಿಂಸಾಚಾರ: ಪೂರ್ವ ನಗರವಾದ ಗೋಮಾದಲ್ಲಿ ಬುಧವಾರ ಬೆಳಗ್ಗೆ ಹಿಂಸಾಚಾರ ಭುಗಿಲೆದ್ದಿತು. ಅಲ್ಲಿ ವಸಾಲೆಂಡೋ ಅನುಯಾಯಿಗಳು ಪ್ರತಿಭಟನೆಗಾಗಿ ಜಮಾಯಿಸಿದ್ದರು. ಇದನ್ನು ನಗರದ ಮೇಯರ್ ನಿಷೇಧಿಸಿದ್ದರು. ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆ ಮತ್ತು ವಸಾಹತುಶಾಹಿಯಂತಹ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿ, ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಿಂಸಾಚಾರದ ವೇಳೆಯಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸೇನೆ ಮನಬಂದಂತೆ ಗುಂಡು ಹಾರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆದರೆ, ಕಾಂಗೋ ಸೇನೆಯು ಹೇಳಿಕೆಯಲ್ಲಿ ಪ್ರತಿಭಟನಾಕಾರರು ಪೊಲೀಸರನ್ನು ಕಲ್ಲೆಸೆದು ಕೊಂದಿದ್ದಾರೆ ಎಂದು ಹೇಳಿದೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 160 ಜನರನ್ನು ಬಂಧಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಘರ್ಷಣೆ ಉಂಟಾದ ಹಿನ್ನೆಲೆ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಈ ತನಿಖೆಯ ಪ್ರಕಾರ ಘರ್ಷಣೆಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದಾರೆ. ಜೊತೆಗೆ ಕನಿಷ್ಠ 50 ಜನರು ಗಾಯಗೊಂಡಿದ್ದಾರೆ. ಗಾಯಗೊಂಡ ರೋಗಿಗಳಿಂದ ಗೊಮಾದ ಹತ್ತಿರದ ಎನ್‌ಡೋಶೋ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಉತ್ತರ ಕಿವು ಪ್ರದೇಶದ ನಾಗರಿಕ ಸಮಾಜದ ಉಪಾಧ್ಯಕ್ಷ ಪ್ಲ್ಯಾಸಿಡ್ ಎನ್ಜಿಲಾಂಬಾ ಹೇಳಿದರು.
ಗೋಮಾದ ಮೇಯರ್ ಫೌಸ್ಟಿನ್ ನಪೆಂಡಾ ಕಪೆಂಡ್ ಅವರು, ಆಗಸ್ಟ್ 23 ರಂದು ಪ್ರತಿಭಟನೆಯನ್ನು ಘೋಷಿಸಿದ ಕೂಡಲೇ ನಿಷೇಧ ಮಾಡಿದ್ದರು. ಬುಧವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಹಿಂಸಾಚಾರ ಭುಗಿಲೆದ್ದಾಗ, ಕಾಂಗೋದ ರಕ್ಷಣಾ ಪಡೆಗಳು ಪ್ರಮುಖ ಬೀದಿಗಳಲ್ಲಿ ಜಮಾಯಿಸಿದ್ದವು. ಧಾರ್ಮಿಕ ಮುಖಂಡ ಎಫ್ರೈಮ್ ಬಿಸಿಮ್ವಾ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಡಿದೆ. ಅವರು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಶ್ಚಿಮಾತ್ಯ ಸಂಸ್ಥೆಗಳನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು.
ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗೆ ವಿರೋಧ: ಕಾಂಗೋದಲ್ಲಿ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಯನ್ನು ಮಾನುಸ್ಕೋ (MONUSCO) ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಪ್ರತಿಭಟನಾರರು ತೀವ್ರ ವಿರೋಧ ವ್ಯಕ್ತಪಡಿಸಿದರು. ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳು 1999 ರಲ್ಲಿ ಕಾಂಗೋದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಈಶಾನ್ಯ ಪ್ರದೇಶದಲ್ಲಿ ಮೂರು ದಶಕಗಳ ಸಂಘರ್ಷದ ಪರಿಣಾಮ 6 ದಶಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ಬಿಕ್ಕಟ್ಟು 2021 ರಿಂದ ತೀವ್ರಗೊಳ್ಳುತ್ತಿದೆ. (ಎಪಿ)
ಇದನ್ನೂ ಓದಿ: ಜೋಹಾನ್ಸ್‌ಬರ್ಗ್: ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ, 73 ಮಂದಿ ಸಾವು