ವಾಷಿಂಗ್ಟನ್: ಎರಡು ವರ್ಷಗಳಿಂದ ಖಾಲಿಯಾಗಿದ್ದ ಭಾರತದಲ್ಲಿ ಅಮೆರಿಕದ ರಾಯಭಾರಿ ಹುದ್ದೆಗೆ ಎರಿಕ್ ಗಾರ್ಸೆಟ್ಟಿ ಅವರನ್ನು ನೇಮಿಸಲಾಗಿದೆ. ಪ್ರಮುಖ ರಾಜತಾಂತ್ರಿಕ ಹುದ್ದೆಗೆ ಅಧ್ಯಕ್ಷ ಜೋ ಬೈಡನ್ ಅವರ ಆಪ್ತ ಸಹಾಯಕನನ್ನು ಸೆನೆಟ್ ಬುಧವಾರ ಸೂಚಿಸಿತು. ಗಾರ್ಸೆಟ್ಟಿ ಅವರ ನಾಮನಿರ್ದೇಶನವನ್ನು ಅಮೆರಿಕದ ಸೆನೆಟ್ 52- 42 ಮತಗಳಿಂದ ಅನುಮೋದಿಸಿದೆ.
2021 ರಲ್ಲಿ ಎರಿಕ್ರನ್ನು ಭಾರತದಲ್ಲಿ ಅಮೆರಿಕದ ರಾಯಭಾಗಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಅನುಮೋದನೆಗೊಂಡಿರಲಿಲ್ಲ. ಈ ವರ್ಷದ ಆರಂಭದಲ್ಲಿ ಮತ್ತೊಮ್ಮೆ ಬೈಡನ್ ಅವರು ಎರಿಕ್ರನ್ನು ಹುದ್ದೆಗೆ ಸೂಚಿಸಿದ್ದರು. ನಾಮನಿರ್ದೇಶನವನ್ನು ಮತಕ್ಕೆ ಹಾಕಲು ಅಮೆರಿಕ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಬಾಬ್ ಮೆನೆಂಡೆಝ್ ಅವರು ಫೆಬ್ರವರಿ 20 ಕ್ಕೆ ದಿನಾಂಕ ಗೊತ್ತು ಮಾಡಿದ್ದರು. ಆದರೆ, ಅದು ನಡೆಯದೇ ಇಲ್ಲಿಯವರೆಗೂ ಮುಂದೂಡಿಕೆಯಾಗಿತ್ತು.
ಬುಧವಾರ ನಡೆದ ಮತದಾನದಲ್ಲಿ ಎರಿಕ್ ಪರ 52 ಸೆನೆಟ್ ಸದಸ್ಯರು ಮತ ಹಾಕಿದರೆ, ಪ್ರತಿಸ್ಪರ್ಧಿಗೆ 42 ಮತಗಳು ಬಿದ್ದವು. 10 ಮತಗಳ ಅಂತರದಿಂದ ಎರಿಕ್ ಅವರು ಪರೀಕ್ಷೆಯನ್ನು ಗೆದ್ದರು. ಇದಕ್ಕೂ ಮೊದಲು, ವಿದೇಶಾಂಗ ವ್ಯವಹಾರಗಳ ಸಮಿತಿಯು ಎರಿಕ್ ಪರವಾಗಿ ಮತ ಚಲಾಯಿಸಿದ್ದರು. ಸಮಿತಿಯು 13-8 ಮತಗಳಿಂದ ನಾಮನಿರ್ದೇಶನ ಅನುಮೋದಿಸಿತ್ತು.
-
#WATCH | US Senate voted 52-42 advancing former Los Angeles Mayor Eric Garcetti’s nomination to be US Ambassador to India. pic.twitter.com/YJfdMNfRzY
— ANI (@ANI) March 15, 2023 " class="align-text-top noRightClick twitterSection" data="
">#WATCH | US Senate voted 52-42 advancing former Los Angeles Mayor Eric Garcetti’s nomination to be US Ambassador to India. pic.twitter.com/YJfdMNfRzY
— ANI (@ANI) March 15, 2023#WATCH | US Senate voted 52-42 advancing former Los Angeles Mayor Eric Garcetti’s nomination to be US Ambassador to India. pic.twitter.com/YJfdMNfRzY
— ANI (@ANI) March 15, 2023
ಯಾರು ಎರಿಕ್?: ಅಧ್ಯಕ್ಷ ಜೋ ಬೈಡನ್ ಅವರ ಆಪ್ತ ಸಹಾಯಕರಾಗಿದ್ದ ಎರಿಕ್ ಗಾರ್ಸೆಟ್ಟಿ ಅವರು ಲೈಂಗಿಕ ದೌರ್ಜನ್ಯ ಆರೋಪಗಳನ್ನೂ ಎದುರಿಸುತ್ತಿದ್ದಾರೆ. ಹೀಗಾಗಿ ಅಧ್ಯಕ್ಷರೇ ಸೂಚಿಸಿದಾಗ್ಯೂ ಅವರು ರಾಯಭಾರಿಯಾಗಿ ಆಯ್ಕೆಯಾಗಿರಲಿಲ್ಲ. ಆಡಳಿತಾರೂಢ ಡೆಮಾಕ್ರೆಟಿಕ್ ಪಕ್ಷದವರೇ ಎರಿಕ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಮತ ಹಾಕುವ ವೇಳೆಯೂ ಕೆಲವರು ಎರಿಕ್ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಲಾಸ್ ಏಂಜಲೀಸ್ನ ಮೇಯರ್ ಆಗಿರುವ ಎರಿಕ್, ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಲು ಸಾಕಷ್ಟು ಬೆಂಬಲ ಹೊಂದಿರಲಿಲ್ಲ. ಲೈಂಗಿಕ ದೌರ್ಜನ್ಯ ಆರೋಪ ಇರುವ ಕಾರಣ ಅವರ ನೇಮಕಕ್ಕೆ ರಿಪಬ್ಲಿಕ್ ಪಕ್ಷ ಕೂಡ ವಿರೋಧಿಸಿತ್ತು. ಈ ಕಾರಣಕ್ಕಾಗಿ ಮತಕ್ಕೆ ಹಾಕದೇ ವರ್ಷಾನುಗಟ್ಟಲೇ ತಡೆ ನೀಡಲಾಗಿತ್ತು.
ಅಮೆರಿಕದ ಪ್ರತಿಕ್ರಿಯೆ: ಚೀನಾದ ದಬ್ಬಾಳಿಕೆ ಹೆಚ್ಚುತ್ತಿರುವ ಕಾರಣಕ್ಕಾಗಿ ಅಮೆರಿಕ ಮತ್ತು ಭಾರತದ ಮಧ್ಯೆ ರಕ್ಷಣಾ ಮತ್ತು ವಿದೇಶಾಂಗ ಸಂಬಂಧ ಬಲಿಷ್ಠವಾಗಬೇಕಿದೆ. ಕಾರ್ಯತಂತ್ರ ಆಧಾರಿತ ಪಾಲುದಾರಿಕೆ ಹೊಂದುವ ಅಗತ್ಯ ಎಂದಿಗಿಂತಲೂ ಈಗ ಹೆಚ್ಚಿದೆ. ದ್ವಿಪಕ್ಷೀಯ ಸಂಬಂಧ ಮತ್ತು ರಾಷ್ಟ್ರೀಯ ಭದ್ರತೆ ಬಲಗೊಳಿಸುವ ನಿಟ್ಟಿನಲ್ಲಿ ಭಾರತಕ್ಕೆ ರಾಯಭಾಗಿ ನೇಮಕ ಮಾಡುವುದು ಅತ್ಯಗತ್ಯವಾಗಿದೆ ಎಂದು ಅಮೆರಿಕ ತಿಳಿಸಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೀನ್ ಪಿಯರ್ ಮಾತನಾಡಿ, ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ನಾಮನಿರ್ದೇಶನ ಹೊಂದಿದ್ದಾರೆ. ಉತ್ತಮ ಅರ್ಹತೆ ಹೊಂದಿದ್ದು, ಸೇವೆ ಸಲ್ಲಿಸಲು ಅವರು ಅರ್ಹರಾಗಿದ್ದಾಗಿ ಹೇಳಿದರು. ಕೆನ್ನೆತ್ ಜಸ್ಟರ್ ಅವರು ಭಾರತದಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಕೊನೆಯವರಾಗಿದ್ದಾರೆ. ಅವರ ಜಾಗಕ್ಕೆ ಈಗ ಎರಿಕ್ ಗಾರ್ಸೆಟ್ಟಿ ಬಂದಿದ್ದಾರೆ. 2021 ರಲ್ಲಿ ಕೆನ್ನೆತ್ ರಾಯಭಾಗಿ ಸ್ಥಾನ ತ್ಯಜಿಸಿದ್ದರು.
ಇದನ್ನೂ ಓದಿ: "ಮುಝೇ ಚಲ್ತೆ ಜಾನಾ ಹೈ..": ಬಿಜೆಪಿಯಿಂದ ಮೋದಿ ರಾಜಕೀಯ ಪಯಣದ ವಿಶೇಷ ವಿಡಿಯೋ