ETV Bharat / international

ಅಮೆರಿಕದಲ್ಲಿ ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ರಜೆಗಾಗಿ ಮಸೂದೆ ಮಂಡನೆ

ಅಮೆರಿಕದಲ್ಲಿ ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ರಜೆ ದಿನ ಘೋಷಣೆಗಾಗಿ ಅಲ್ಲಿನ ಸಂಸದೆ ಗ್ರೇಸ್ಡ್ ಮೆಂಗ್ ಅವರು ಸಂಸತ್ತಿನಲ್ಲಿ ಮಸೂದೆ ಮಂಡಿಸಿದ್ದಾರೆ. ಇದು ಕಾನೂನಾಗಿ ಜಾರಿಗೆ ಬಂದಲ್ಲಿ 12 ನೇ ಸಾರ್ವತ್ರಿಕ ರಜೆ ದಿನ ಸಿಕ್ಕಂತಾಗಲಿದೆ.

ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ರಜೆಗಾಗಿ ಮಸೂದೆ ಮಂಡನೆ

author img

By

Published : May 27, 2023, 12:25 PM IST

ವಾಷಿಂಗ್ಟನ್: ಐತಿಹಾಸಿಕ ಹಿನ್ನೆಲೆ ಇರುವ ಬೆಳಕಿನ ಹಬ್ಬ ದೀಪಾವಳಿಗೆ ಭಾರತದಲ್ಲಿ ಸಾರ್ವತ್ರಿಕ ರಜೆ ಇದೆ. ಅದೇ ರೀತಿ ಅಮೆರಿಕದಲ್ಲೂ ಆ ದಿನಕ್ಕೆ ರಜೆ ಘೋಷಿಸಬೇಕು ಎಂದು ಸಂಸದೆಯೊಬ್ಬರು ಸಂಸತ್ತಿನಲ್ಲಿ ಮಸೂದೆ ಮಂಡಿಸಿದ್ದಾರೆ. ಇದನ್ನು ದೇಶಾದ್ಯಂತ ಇರುವ ವಿವಿಧ ಸಮುದಾಯಗಳು ಸ್ವಾಗತಿಸಿವೆ. ಅಮೆರಿಕಾದಲ್ಲಿ ಇದು ಕಾನೂನಾಗಿ ಜಾರಿಗೆ ಬಂದಲ್ಲಿ ಮಾನ್ಯತೆ ಪಡೆದ 12ನೇ ರಜಾ ದಿನವಾಗಲಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಸೂದೆ ಮಂಡಿಸಿದ ಸಂಸದೆ ಗ್ರೇಸ್ಡ್ ಮೆಂಗ್ ಅವರು, ದೀಪಾವಳಿಯು ಪ್ರಪಂಚದಾದ್ಯಂತ ಕೋಟ್ಯಂತರ ಜನರು ಆಚರಿಸುವ ಹಬ್ಬವಾಗಿದೆ. ಕ್ವೀನ್ಸ್, ನ್ಯೂಯಾರ್ಕ್ ಸೇರಿದಂತೆ ಅಮೆರಿಕದಲ್ಲಿ ಅಸಂಖ್ಯಾತ ಕುಟುಂಬಗಳು ಮತ್ತು ಸಮುದಾಯಗಳಿಗೆ ಇದು ವರ್ಷದ ಪ್ರಮುಖ ದಿನಗಳಲ್ಲಿ ಒಂದಾಗಿದೆ. ಹೀಗಾಗಿ ಆ ದಿನಕ್ಕೆ ಸಾರ್ವತ್ರಿಕ ರಜೆ ನೀಡಬೇಕು ಎಂದು ಮಸೂದೆಯಲ್ಲಿ ಬೇಡಿಕೆ ಮಂಡಿಸಿದ್ದಾರೆ.

ದೀಪಾವಳಿಗೆ ಸಾರ್ವತ್ರಿಕ ರಜೆ ನೀಡುವುದರಿಂದ ಕುಟುಂಬಸ್ಥರು ಮತ್ತು ಸ್ನೇಹಿತರು ಒಟ್ಟಿಗೆ ಹಬ್ಬದ ಆಚರಣೆ ಮಾಡಲು ಅನುವು ಮಾಡಿಕೊಡುತ್ತದೆ. ವೈವಿಧ್ಯಮಯ ಸಂಸ್ಕೃತಿಯನ್ನು ಸರ್ಕಾರವು ಗೌರವಿಸಿದಂತಾಗುತ್ತದೆ ಎಂದು ಗ್ರೇಸ್ಡ್ ಮೆಂಗ್ ಅಭಿಪ್ರಾಯಪಟ್ಟಿದ್ದಾರೆ.

ದೀಪಾವಳಿ ಆಚರಣೆ ಅಮೆರಿಕದಲ್ಲಿ ಅದ್ಭುತ ಸಮಯವಾಗಿದೆ. ಪ್ರತಿ ವರ್ಷವೂ ಈ ದಿನ ಅದೆಷ್ಟೋ ಜನರಿಗೆ ಮಹತ್ವದ್ದಾಗಿದೆ. ರಾಷ್ಟ್ರ ನಿರ್ಮಾಣಕ್ಕಾಗಿ ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಮುದಾಯಗಳು ಶಕ್ತಿ ನೀಡಿವೆ. ದೀಪಾವಳಿ ದಿನದ ರಜಾ ದಿನಕ್ಕಾಗಿ ಮಂಡಿಸುತ್ತಿರುವ ಮಸೂದೆಯು ಎಲ್ಲಾ ಅಮೆರಿಕನ್ನರಿಗೆ ಈ ದಿನದ ಪ್ರಾಮುಖ್ಯತೆಯ ಬಗ್ಗೆ ಶಿಕ್ಷಣ ನೀಡುವ ಒಂದು ಹೆಜ್ಜೆಯಾಗಿದೆ. ಇದನ್ನು ಸಂಸತ್ತಿನ ಮೂಲಕ ಅಧಿಕೃತಗೊಳಿಸುವ ಕಾಲವನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಹಿಂದೂ ಮೇಯರ್ ಸ್ವಾಗತ: ಹಿಂದು ಮೇಯರ್​ ಎಂದೇ ಹೆಸರಾಗಿರುವ ನ್ಯೂಯಾರ್ಕ್​ ಸಂಸದೆ ಜೆನಿಫರ್ ರಾಜ್‌ಕುಮಾರ್ ಅವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ದಕ್ಷಿಣ ಏಷ್ಯಾದ ಸಮುದಾಯದ ಪರವಾಗಿ ಧ್ವನಿಯೆತ್ತಿದ ಗ್ರೇಸ್ಡ್ ಮೆಂಗ್ ಅವರ ಅಸಾಧಾರಣ ನಿರ್ಧಾರ ತೆಗೆದುಕೊಂಡಿದ್ದಾರೆ. ದೀಪಾವಳಿಯನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಿಸಲು ಐತಿಹಾಸಿಕ ಮಸೂದೆ ತಂದಿದ್ದಾರೆ. ದೇಶದ ಕೆಲ ಭಾಗಗಳಲ್ಲಿ ಮಾತ್ರ ದೀಪಾವಳಿಗೆ ರಜೆ ಇದೆ. ಇದೀಗ ರಾಷ್ಟ್ರೀಯ ರಜಾದಿನವಾಗಲಿದೆ. 4 ಮಿಲಿಯನ್ ಅಮೆರಿಕನ್ನರಿಗೆ ಈ ದಿನದ ಸಂಭ್ರಮ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ದೇಶದ ಹಲವೆಡೆ ರಜಾ ದಿನ ಘೋಷಣೆ: ಅಮೆರಿಕದ ವಿವಿಧ ರಾಜ್ಯಗಳಲ್ಲಿ ದೀಪಾವಳಿಗೆ ರಜಾ ದಿನ ಈಗಾಗಲೇ ಘೋಷಿಸಲಾಗಿದೆ. ನ್ಯೂಯಾರ್ಕ್​, ಕ್ವೀನ್ಸ್​, ಪೆನ್ಸಿಲ್ವೇನಿಯಾಗಳಲ್ಲಿ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆ ದಿನದಂದು ಅಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಕೂಡ ನೀಡಲಾಗುತ್ತಿದೆ. ಇದೀಗ ಸಂಸದೆ ಗ್ರೇಸ್ಡ್ ಮೆಂಗ್ ಅವರು ರಾಷ್ಟ್ರೀಯ ರಜಾ ದಿನಕ್ಕಾಗಿ ಮಸೂದೆ ಮಂಡಿಸಿದ್ದಾರೆ.

ಪಟಾಕಿ ಸಿಡಿಸಲು ಅನುಮತಿ: ದೀಪಾವಳಿಯನ್ನು ಸ್ಮರಣಾರ್ಥ ಕ್ಷಣವನ್ನಾಗಿ ಮಾಡುವ ಮತ್ತು ಹಬ್ಬದಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡುವ ಮಸೂದೆಯನ್ನು ಯುಎಸ್‌ ಸೆನೆಟ್‌ನಲ್ಲಿ ಇತ್ತೀಚೆಗೆ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಸೆನೆಟ್ ಬಿಲ್-46 ಅನ್ನು ಸಂಸತ್ತಿನಲ್ಲಿ ಒಪ್ಪಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ: ದೀಪಾವಳಿಯಲ್ಲಿ ಪಟಾಕಿ ಸಿಡಿಸಲು ಅನುಮತಿ: ಮಸೂದೆಗೆ ಯುಎಸ್​​ ಸೆನೆಟ್ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.