ನವದೆಹಲಿ/ ಕೀವ್ : ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿರುವ ಭಾರತೀಯರಿಗೆ ಶೀಘ್ರವಾಗಿ ದೇಶ ತೊರೆಯುವಂತೆ ಮತ್ತೊಮ್ಮೆ ಮನವಿ ಜತೆ ಸೂಚನೆಯನ್ನೂ ನೀಡಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಹಗೆತನದ ದೃಷ್ಟಿಯಿಂದ ರಾಯಭಾರ ಕಚೇರಿ ಈ ಸಲಹೆಯನ್ನು ನೀಡಿದೆ. ಉಕ್ರೇನ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟ ನಂತರ ಈ ಸಲಹೆ ನೀಡಲಾಗಿದೆ.
-
Advisory to Indian Nationals in Ukraine@MEAIndia @DDNewslive @DDNational @PIB_India @IndianDiplomacy @eoiromania @IndiainPoland @IndiaInHungary @IndiaInSlovakia pic.twitter.com/kFR3qJKlJR
— India in Ukraine (@IndiainUkraine) October 25, 2022 " class="align-text-top noRightClick twitterSection" data="
">Advisory to Indian Nationals in Ukraine@MEAIndia @DDNewslive @DDNational @PIB_India @IndianDiplomacy @eoiromania @IndiainPoland @IndiaInHungary @IndiaInSlovakia pic.twitter.com/kFR3qJKlJR
— India in Ukraine (@IndiainUkraine) October 25, 2022Advisory to Indian Nationals in Ukraine@MEAIndia @DDNewslive @DDNational @PIB_India @IndianDiplomacy @eoiromania @IndiainPoland @IndiaInHungary @IndiaInSlovakia pic.twitter.com/kFR3qJKlJR
— India in Ukraine (@IndiainUkraine) October 25, 2022
ಅಕ್ಟೋಬರ್ 19 ರಂದು ರಾಯಭಾರ ಕಚೇರಿ ಹೊರಡಿಸಿ ಸೂಚನೆಯನ್ನೇ ಮತ್ತೆ ಪುನರುಚ್ಚರಿಸಿದೆ. ಲಭ್ಯವಿರುವ ವಿಧಾನಗಳ ಮೂಲಕ ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಹಿಂದಿನ ಸಲಹೆಯನ್ನು ಅನುಸರಿಸಿ ಕೆಲವು ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ದೇಶವನ್ನು ತೊರೆಯಲು ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸಹಕಾರ ದೊರೆಯಲಿದೆ ಎಂದು ಹೇಳಲಾಗಿದೆ.
ಉಕ್ರೇನ್ನನ್ನು ವಶಪಡಿಸಿಕೊಳ್ಳುವುದಕ್ಕಾಗಿ 'ಅಣ್ವಸ್ತ್ರ' ಬಳಸುವುದಾಗಿ ರಷ್ಯಾ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಈ ಸಲಹೆಯನ್ನು ನೀಡಲಾಗಿದೆ. ಭಾರತೀಯ ನಾಗರಿಕರು ಗಡಿಗೆ ಪ್ರಯಾಣಿಸಲು ಬೇಕಾಗುವ ಯಾವುದೇ ಸಹಾಯಕ್ಕಾಗಿ ಸಂಪರ್ಕಿಸಬಹುದಾದ ಕೆಲವು ಸಂಖ್ಯೆಗಳನ್ನು ರಾಯಭಾರ ಕಚೇರಿ ಹಂಚಿಕೊಂಡಿದೆ.
ಇತ್ತೀಚಿನ ವಾರಗಳಲ್ಲಿ, ರಷ್ಯಾವು ಉಕ್ರೇನಿಯನ್ನ ನಗರಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಯುರೋಪಿಯನ್ ರಾಷ್ಟ್ರದಲ್ಲಿ ಹೋರಾಡಲು ಮಾರ್ಷಲಾ ಲಾ ಜಾರಿ ಘೋಷಣೆ ಮಾಡಿದಾಗಿನಿಂದಲೂ ದಾಳಿಗಳು ತೀವ್ರಗೊಂಡಿವೆ. ಉಕ್ರೇನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ದೇಶವು ತ್ವರಿತಗೊಳಿಸಬೇಕಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಯುದ್ಧದಲ್ಲಿ ಭಾರತೀಯರ ಸಾವು ನೋವುಗಳು ಸಹ ಸಂಭವಿಸಿವೆ: ಎರಡು ದೇಶಗಳ ನಡುವಿನ ಯುದ್ಧದ ಸಮಯದಲ್ಲಿ ಭಾರತೀಯ ನಾಗರಿಕರೊಬ್ಬರು ಸಾವನ್ನಪ್ಪಿದ್ದಾರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಕರ್ನಾಟಕದ ವಿದ್ಯಾರ್ಥಿಯಾಗಿದ್ದು, ಖಾರ್ಕಿವ್‌ನಲ್ಲಿ ಗುಂಡಿನ ದಾಳಿ ವೇಳೆ ಅವರು ಅಸುನೀಗಿದ್ದರು. ರಷ್ಯಾದ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಉಕ್ರೇನ್ ಆರೋಪಿಸಿದ್ದು, ರಷ್ಯಾ ಈ ಆರೋಪಗಳನ್ನು ನಿರಾಕರಿಸಿತ್ತು.
ಇದನ್ನೂ ಓದಿ : ಮತ್ತೆ ಪರಿಸ್ಥಿತಿ ಉದ್ವಿಗ್ನ.. ದಕ್ಷಿಣ - ಉತ್ತರ ಕೊರಿಯಾಗಳ ಮಧ್ಯೆ ಶೆಲ್ ದಾಳಿ