ETV Bharat / international

ಕೆನಡಾದಲ್ಲಿ ಭಾರತೀಯ ಮೂಲದ ಕಬಡ್ಡಿ ಪ್ರವರ್ತಕ 'ಕಮಲಜಿತ್ ಕಾಂಗ್‌' ಮೇಲೆ ಗುಂಡಿನ ದಾಳಿ

ಕೆನಡಾದ ಸರ್ರೆಯಲ್ಲಿ ಭಾರತೀಯ ಮೂಲದ ಕಬಡ್ಡಿ ಪ್ರವರ್ತಕ ಕಮಲಜಿತ್ ಕಾಂಗ್ ಮೇಲೆ ಮಾರಣಾಂತಿಕ ದಾಳಿ ನಡೆದಿದೆ.

Kabaddi promoter shot at in Canada
ಕಮಲಜಿತ್ ಕಾಂಗ್‌ ಮೇಲೆ ಗುಂಡಿನ ದಾಳಿ
author img

By

Published : May 6, 2023, 12:52 PM IST

ಸರ್ರೆ: ಕೆನಡಾದ ಸರ್ರೆಯಲ್ಲಿ ಕಬಡ್ಡಿ ಪ್ರವರ್ತಕ ಕಮಲಜಿತ್ ಕಾಂಗ್​ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು ಮೊದಲು ಕಮಲಜಿತ್ ಕಾಂಗ್‌ಗಾಗಿ ಅವರ ನಿವಾಸದ ಹೊರಗೆ ಕಾಯುತ್ತಿದ್ದರು. ಕಾಂಗ್​ ಮನೆಯಿಂದ ಹೊರಬಂದ ತಕ್ಷಣ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಕಾಂಗ್‌ಗೆ ಕನಿಷ್ಠ ಎರಡು ಗುಂಡುಗಳು ತಗುಲಿವೆ ಎನ್ನಲಾಗಿದೆ. ಒಂದು ಅವರ ಹೊಟ್ಟೆ ಭಾಗಕ್ಕೆ ತಗುಲಿದರೆ, ಮತ್ತೊಂದು ಕಾಲಿಗೆ ತಗುಲಿದೆ ಎಂದು ತಿಳಿದು ಬಂದಿದೆ.

ಆಸ್ಪತ್ರೆಗೆ ದಾಖಲು: ಮಾಧ್ಯಮ ವರದಿಗಳ ಪ್ರಕಾರ ದಾಳಿಯ ವೇಳೆ ಕಮಲಜಿತ್ ಕಾಂಗ್ ಅವರಿಗೆ 2 ಗುಂಡುಗಳು ತಗುಲಿವೆ. ಸದ್ಯ ಕಮಲಜಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಭಾರತದ ಜಲಂಧರ್‌ನ ಉಗಿ ಗ್ರಾಮದ ನಿವಾಸಿಯಾದ ಕಾಂಗ್ ವಿಶ್ವದ ಅತ್ಯುತ್ತಮ ಕಬಡ್ಡಿ ಪ್ರವರ್ತಕರಲ್ಲಿ ಒಬ್ಬರಾಗಿದ್ದಾರೆ. ಅವರು ಉತ್ತರ ಭಾರತ ಸರ್ಕಲ್ ಸ್ಟೈಲ್ ಕಬಡ್ಡಿ ಫೆಡರೇಶನ್‌ನ ಪ್ರಮುಖ ಸದಸ್ಯರಾಗಿದ್ದರು.

ಆಟದ ಮೈದಾನದಲ್ಲಿ ಕಬಡ್ಡಿ ಗ್ಲಾಡಿಯೇಟರ್ ಹತ್ಯೆ: ಪಂಜಾಬಿಗಳ ಮಾತೃ ಕ್ರೀಡೆಯಾದ ಕಬಡ್ಡಿಯ ಮೇಲೆ ಬಹಳ ದಿನಗಳಿಂದ ಕಾರ್ಮೋಡ ಕವಿದಿದೆ. ಕಳೆದ ವರ್ಷ ಮಾರ್ಚ್ 14 ರಂದು ಜಲಂಧರ್‌ನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ ವೇಳೆ ಕ್ರೀಡಾ ಮೈದಾನದಲ್ಲಿಯೇ ಕಬಡ್ಡಿ ಗ್ಲಾಡಿಯೇಟರ್ ಸಂದೀಪ್ ನಂಗಲ್ ಅಂಬಿಯಾನ್ ಅವರನ್ನು ಹತ್ಯೆ ಮಾಡಲಾಗಿತ್ತು.

ಅಂತಾರಾಷ್ಟ್ರೀಯ ಸರ್ಕಲ್ ಶೈಲಿಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅಲಿಯಾಸ್ ಅಂಬಿಯಾ ಅವರನ್ನು ನಕೋದರ್‌ನ ಮಲ್ಲಿಯನ್ ಗ್ರಾಮದಲ್ಲಿ ಐವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಸಂಜೆ 6 ಗಂಟೆ ಸುಮಾರಿಗೆ ಸಂದೀಪ್ ಅವರು ಪಂದ್ಯಾವಳಿಗಾಗಿ ಗ್ರಾಮಕ್ಕೆ ಆಗಮಿಸಿದಾಗ ಈ ಘಟನೆ ನಡೆದಿತ್ತು. ಪಂದ್ಯದ ಮಧ್ಯದಲ್ಲಿ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಕ್ರೀಡಾಂಗಣದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ದಾಳಿಕೋರರು ಬಿಳಿ ಕಾರಿನಲ್ಲಿ ಬಂದಿದ್ದರು. ಸಂದೀಪ್ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಿದ್ದರು. ಸಂದೀಪ್ ನಂಗಲ್ ಅಂಬಿಯಾನ್ ಪ್ರಕರಣದಲ್ಲಿ ಪೊಲೀಸರು ಶೂಟರ್‌ಗಳು ಸೇರಿದಂತೆ ಅನೇಕ ದಾಳಿಕೋರರನ್ನು ಬಂಧಿಸಿದ್ದರು. ಈಗ ಆರೋಪಿಗಳು ಅಪರಾಧಗಳಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ತೋಮರ್ ಕುಟುಂಬಗಳ ಮಧ್ಯೆ ನಡೆದ ಗುಂಡಿನ ದಾಳಿ: ಆರು ಮಂದಿ ಸಾವು..!

ಸರ್ಬಿಯಾದ ಬೆಲ್​ಗ್ರೇಡ್​ನಲ್ಲಿ ಗುಂಡಿನ ಮೊರೆತ: ಸರ್ಬಿಯಾದಲ್ಲಿ ಇತ್ತೀಚೆಗೆ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿ, ಸುಮಾರು 10 ಮಂದಿ ಗಾಯಗೊಂಡಿದ್ದರು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ನಗರವು ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ಸರ್ಕಾರಿ ಸ್ವಾಮ್ಯದ RTS ದೂರದರ್ಶನ ವರದಿಯಂತೆ, ಮ್ಲಾಡೆನೋವಾಕ್ ನಗರದಲ್ಲಿ ದಾಳಿ ನಡೆದಿತ್ತು. ದಾಳಿಕೋರ ಚಲಿಸುತ್ತಿದ್ದ ವಾಹನದಿಂದ ಸ್ವಯಂಚಾಲಿತ ಆಯುಧವನ್ನು ತೆಗೆದುಕೊಂಡು ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದ.

ಇದನ್ನೂ ಓದಿ: ಸರ್ಬಿಯಾದಲ್ಲಿ ಪ್ರತ್ಯೇಕ ಗುಂಡಿನ ದಾಳಿ: 8 ಮಕ್ಕಳು ಸೇರಿ 17 ಜನ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.