ETV Bharat / international

ಗಾಜಾದಲ್ಲಿ ಆಹಾರ, ನೀರಿಗೆ ತತ್ವಾರ; ಕಂಡಲ್ಲಿ ಗುಂಡಿಕ್ಕಿದ ಹಮಾಸ್​ ಉಗ್ರರ ಅಟ್ಟಹಾಸದ ವಿಡಿಯೋ ಹಂಚಿಕೊಂಡ ಇಸ್ರೇಲ್​

ಇಸ್ರೇಲ್​ ದಾಳಿಯಿಂದಾಗಿ ಗಾಜಾದಲ್ಲಿ ಆಹಾರ, ನೀರಿಗೂ ಹಾಹಾಕಾರ ಉಂಟಾಗಿದೆ. ಇದೇ ವೇಳೆ ಹಮಾಸ್​ ಉಗ್ರರು ರಕ್ತಪಾತ ಹರಿಸಿದ ವಿಡಿಯೋವನ್ನು ಇಸ್ರೇಲ್ ಹಂಚಿಕೊಂಡಿದೆ.

ಹಮಾಸ್​ ಉಗ್ರರ ಗುಂಡಿನ ದಾಳಿ
ಹಮಾಸ್​ ಉಗ್ರರ ಗುಂಡಿನ ದಾಳಿ
author img

By ETV Bharat Karnataka Team

Published : Oct 16, 2023, 9:25 PM IST

ಜೆರುಸಲೇಂ: ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವಿನ ಯುದ್ಧ 9ನೇ ದಿನಕ್ಕೆ ಕಾಲಿಟ್ಟಿದ್ದು, ಭೀಕರ ದಾಳಿಯಲ್ಲಿ 2,670 ಪ್ಯಾಲೆಸ್ಟೈನಿಯನ್ನರು ಸಾವನ್ನಪ್ಪಿ, 9,600 ಮಂದಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ 6 ಮಂದಿ ಹಮಾಸ್​ ಮುಖಂಡರು ಹತರಾಗಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ. ಇನ್ನೊಂದೆಡೆ, ಹಮಾಸ್​ ಉಗ್ರರು ಗಡಿ ದಾಟಿ ಬಂದು ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ಚಿತ್ರ, ವಿಡಿಯೋಗಳನ್ನು ಇಸ್ರೇಲ್ ಹಂಚಿಕೊಂಡಿದೆ.

  • ⚠️Trigger Warning ⚠️

    RAW FOOTAGE: Hamas jihadists squad invasion and killing spree of an innocent Israeli community.

    The filmed terrorist was neutralized by Israeli security forces. pic.twitter.com/4sKuxl9uRq

    — Israel Defense Forces (@IDF) October 15, 2023 " class="align-text-top noRightClick twitterSection" data=" ">

ದಾಳಿಯ ವೇಳೆ ಉಗ್ರರೇ ಮಾಡಿದ ವಿಡಿಯೋಗಳನ್ನು ಇಸ್ರೇಲ್​ ಪಡೆ ತನ್ನ ಅಧಿಕೃತ ಎಕ್ಸ್​ ವೇದಿಕೆಯಲ್ಲಿ ಹಂಚಿಕೊಂಡಿದೆ. ಅದರಲ್ಲಿ ಬಂದೂಕುದಾರಿ ಉಗ್ರರು ಇಸ್ರೇಲಿ ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಮನೆಗಳಿಗೆ ನುಗ್ಗುವುದು, ಎದುರು ಸಿಕ್ಕ ಜನರ ಮೇಲೆಲ್ಲ ಗುಂಡು ಹಾರಿಸುತ್ತಿರುವುದು ಅದರಲ್ಲಿದೆ. ಮನೆಯೊಂದರ ಮೇಲೆ ರಾಕೆಟ್​ ದಾಳಿಯಾಗಿ ಇಡೀ ಮನೆ ಧ್ವಂಸವಾಗಿದ್ದು, ಈ ಮನೆ ಪ್ರೀತಿಯಿಂದ ತುಂಬಿತ್ತು. ಹಮಾಸ್​ ದಾಳಿಗೆ ಹಾಳು ಕೊಂಪೆಯಾಗಿದೆ ಎಂದು ಬರೆದುಕೊಂಡಿದೆ.

ಗಾಜಾದ ಪರಿಸ್ಥಿತಿ: ದಕ್ಷಿಣ ಗಾಜಾದ ಕಡೆಗೆ ಜನರು ಸ್ಥಳಾಂತರವಾಗಿದ್ದರಿಂದ ಇಲ್ಲೂ ಆಹಾರ, ನೀರಿಗೆ ಹಾಹಾಕಾರ ಉಂಟಾಗಿದೆ ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್​​ ನಿರಾಶ್ರಿತರ ಸಂಸ್ಥೆ ಹೇಳಿದೆ. ಇಲ್ಲಿನ ಶಾಲೆಗಳು ಮತ್ತು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಜನರ ಸಂಖ್ಯೆಯು ಅಗಾಧವಾಗಿದೆ. ಅವರಿಗೆ ಸೂಕ್ತ ಸೌಕರ್ಯ ಮತ್ತು ಆಹಾರದ ವ್ಯವಸ್ಥೆ ಇಲ್ಲವಾಗಿದೆ ಎಂದಿದೆ.

ಈ ಭಾಗದಲ್ಲಿ ಸದ್ಯ ಲಭ್ಯವಿರುವ ಆಹಾರ ಅಥವಾ ಔಷಧವೂ ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ. ಇಸ್ರೇಲ್​ ಭಯಾನಕ ದಾಳಿಗೆ ವಾರದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಇಲ್ಲಿಗೆ ಬಂದಿದ್ದಾರೆ. ದಾಳಿ ಮತ್ತು ಒತ್ತೆಯಾಳುಗಳನ್ನು ಇಟ್ಟುಕೊಳ್ಳುವುದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕನಿಷ್ಠ 4 ಲಕ್ಷ ಸ್ಥಳಾಂತರಗೊಂಡ ಜನರು ವಿಶ್ವಸಂಸ್ಥೆಯ ನಿರಾಶ್ರಿತರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಅನೈರ್ಮಲ್ಯ ಮತ್ತು ಆಹಾರ ಅಭದ್ರತೆ ಕಾಡುತ್ತಿದೆ ಎಂದು ಅವರು ತಿಳಿಸಿದರು.

ಗಾಜಾದಲ್ಲಿ ಬಾಂಬ್​, ರಾಕೆಟ್​ ದಾಳಿಗೆ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾಕಷ್ಟು ಜನರು ಹತರಾಗಿದ್ದಾರೆ. ಸತತ ಶೆಲ್​ ದಾಳಿಯಿಂದಾಗಿ ಕುಡಿಯುವ ನೀರೂ ಸಿಗದಾಗಿದೆ. ಕಳೆದ ಹಲವು ಗಂಟೆಗಳಿಂದ, ನಾವು ಕುಡಿಯುವ ನೀರಿಗಾಗಿ ಹುಡುಕುತ್ತಿದ್ದೇವೆ. ಇಸ್ರೇಲ್​ನ ದಾಳಿಗೆ ಸಿಲುಕುವ ಭಯವೂ ಇದೆ ಎಂದು ಮೊಹಮ್ಮದ್ ಅಬು ಮುಘೈಸೀಬ್ ಎಂಬವರು ಹೇಳಿದರು.

ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ- ಹಮಾಸ್ ಉಗ್ರರಿಗೆ ವಿಶ್ವಸಂಸ್ಥೆ ಮನವಿ: ವಿಶ್ವಸಂಸ್ಥೆಯ ಜನರಲ್ ಸೆಕ್ರೆಟರಿ ಆಂಟೋನಿಯೊ ಗುಟೆರೆಸ್ ಅವರು, ಒತ್ತೆಯಾಳಾಗಿಟ್ಟುಕೊಂಡವರನ್ನು ಷರತ್ತುಗಳಿಲ್ಲದೇ ಬಿಡುಗಡೆ ಮಾಡಲು ಹಮಾಸ್​ ಉಗ್ರರಲ್ಲಿ ಮನವಿ ಮಾಡಿದ್ದಾರೆ. ಗಾಜಾದಲ್ಲಿ ಸಿಲುಕಿರುವ ಜನರಿಗೆ ಈಜಿಪ್ಟ್, ಜೋರ್ಡಾನ್, ವೆಸ್ಟ್ ಬ್ಯಾಂಕ್ ಮತ್ತು ಇಸ್ರೇಲ್‌ನಿಂದ ಆಹಾರ, ನೀರು, ವೈದ್ಯಕೀಯ ಸವಲತ್ತು ಸೇರಿದಂತೆ ಇತರ ಅವಶ್ಯಕಗಳನ್ನು ಸರಬರಾಜು ಮಾಡಲು ಕೋರಿದ್ದಾರೆ.

ಇದನ್ನೂ ಓದಿ: ಮತ್ತೆ ಇಸ್ರೇಲ್​ಗೆ ಬಂದ ಅಮೆರಿಕ​ ವಿದೇಶಾಂಗ ಕಾರ್ಯದರ್ಶಿ; ಕದನ ವಿರಾಮವಿಲ್ಲ ಎಂದ ಇಸ್ರೇಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.