ETV Bharat / international

'ಅವಳಿಗೂ ಗುಂಡು ಹೊಡೆದೆ..' ಇಸ್ರೇಲಿಗರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡ ಹಮಾಸ್​ ಉಗ್ರರು - etv bharat kannada

ಹಮಾಸ್​ ಭಯೋತ್ಪಾದಕರು ಇಸ್ರೇಲ್​ನಲ್ಲಿ ನಡೆಸಿದ ಅತ್ಯಂತ ಭೀಕರ ಕೃತ್ಯಗಳನ್ನು ತಾವೇ ಒಪ್ಪಿಕೊಂಡಿರುವ ವಿಡಿಯೋವನ್ನು ಇಸ್ರೇಲ್​ ಸೆಕ್ಯುರಿಟೀಸ್​ ಅಥಾರಿಟಿ (ISA) ಸೋಮವಾರ ಬಿಡುಗಡೆ ಮಾಡಿದೆ.

Israel Securities Authority drops chilling video of hamas terrorists confessing acts
'ಅವಳಿಗೂ ಗುಂಡು ಹೊಡೆದೆ..' ಇಸ್ರೇಲಿಗರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡ ಹಮಾಸ್​ ಉಗ್ರರು
author img

By ETV Bharat Karnataka Team

Published : Oct 24, 2023, 7:28 AM IST

ಟೆಲ್​ ಅವಿವ್​ (ಇಸ್ರೇಲ್​): ಅಕ್ಟೋಬರ್​ 7ರಂದು ದಕ್ಷಿಣ ಇಸ್ರೇಲ್​ನಲ್ಲಿ ನಡೆದ ಮಾರಣಾಂತಿಕ ಭಯೋತ್ಪಾದಕ ದಾಳಿಯಲ್ಲಿ ಹಮಾಸ್​ ಉಗ್ರರು ಯಾವ ರೀತಿಯಾಗಿ ಅಲ್ಲಿನ ಜನರನ್ನು ನಡೆಸಿಕೊಂಡರು ಎಂದು ಹೇಳುವ ವಿಡಿಯೋ ಕ್ಲಿಪ್​ ಅನ್ನು ಇಸ್ರೇಲ್​ ಸೆಕ್ಯುರಿಟೀಸ್​ ಅಥಾರಿಟಿ (ISA) ಸೋಮವಾರ ಬಿಡುಗಡೆ ಮಾಡಿದೆ. ಇದರಲ್ಲಿ ಹಮಾಸ್​ ಭಯೋತ್ಪಾದಕರು ನಡೆಸಿದ ಅತ್ಯಂತ ಭೀಕರ ಕೃತ್ಯಗಳನ್ನು ತಾವೇ ಒಪ್ಪಿಕೊಂಡಿದ್ದಾರೆಂದು ತೋರಿಸಲಾಗಿದೆ.

ISA ಕಮ್ಯುನಿಕೇಷನ್ಸ್​ ಒದಗಿಸಿದ ವಿಡಿಯೋ ಫೈಲ್​ ಅನ್ನು ವಿಚಾರಣೆ ಸಮಯದಲ್ಲಿ ಅಕ್ಟೋಬರ್​ 7ರಂದು ದಾಳಿಯಲ್ಲಿ ಭಾಗಿಯಾಗಿರುವ ಹಮಾಸ್​ ಭಯೋತ್ಪಾದಕರ ಹೇಳಿಕೆಗಳಿಗೆ ಲಗತ್ತಿಸಲಾಗಿದೆ ಎಂದು ಪ್ರಾಧಿಕಾರವು ತಿಳಿಸಿದೆ. ವಿಡಿಯೋದ ಪ್ರಕಾರ, ಹಮಾಸ್​ ಭಯೋತ್ಪಾದಕರು ಇಸ್ರೇಲ್​ನಿಂದ ಗಾಜಾಕ್ಕೆ ಜನರನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಳ್ಳಲು ಅವರಿಗೆ ಸ್ಟೈಫಂಡ್​ (ಸಂಬಳ) ನೀಡುವುದಾಗಿ ಭರವಸೆ ನೀಡಿದ್ದರು ಎಂದು ಹೇಳಲಾಗುತ್ತದೆ.

"ಯಾರು ಒತ್ತೆಯಾಳನ್ನು ಅಪಹರಿಸಿ ಅವರನ್ನು ಗಾಜಾಕ್ಕೆ ಕರೆ ತರುತ್ತಾರೋ ಅವರಿಗೆ USD 10,000 ಸ್ಟೈಫಂಡ್​ ಮತ್ತು ಅಪಾರ್ಟ್​ಮೆಂಟ್​ ಸಿಗುತ್ತದೆ" ಎಂದು ಹಮಾಸ್​ ಭಯೋತ್ಪಾದಕನೊಬ್ಬ ವಿಡಿಯೋದಲ್ಲಿ ಹೇಳುತ್ತಿರುವುದು ಕೇಳುತ್ತದೆ. ವಯಸ್ಸಾದ ಮಹಿಳೆಯರು ಮತ್ತು ಮಕ್ಕಳನ್ನೇ ಟಾರ್ಗೆಟ್​ ಮಾಡಿ ಅವರನ್ನು ಅಪಹರಿಸುವಂತೆ ಅದರಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ಫ್ರಾನ್ಸ್, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್ ನಾಯಕರಿಗೆ ಹಮಾಸ್ ದಾಳಿ ಬಗ್ಗೆ ಮಾಹಿತಿ ನೀಡಿದ ಇಸ್ರೇಲ್ ಪಿಎಂ

ಅಲ್ಲದೇ, "ಒಬ್ಬ ಮಹಿಳೆಯ ನಾಯಿಯು ಹೊರಗೆ ಬಂದಿತು. ಅದನ್ನು ಗುಂಡು ಹೊಡೆದು ಸಾಯಿಸಿದೆ. ನಾನು ಅವಳಿಗೂ ಗುಂಡು ಹೊಡೆದೆ. ಅವಳ ದೇಹವೂ ನೆಲದ ಮೇಲೆ ಬಿದ್ದಿತು. ನೀನು ಸುಮ್ಮನೆ ಗುಂಡುಗಳನ್ನು ಶವದ ಮೇಲೆ ವ್ಯರ್ಥ ಮಾಡುತ್ತಿದ್ದೀಯಾ ಎಂದು ಕಮಾಂಡರ್​ ಬಂದು ನನ್ನಲ್ಲಿ ಹೇಳಿದರು" ಇಂತಹ ಪಾಪಿ ಕೃತ್ಯವನ್ನು ಹಮಾಸ್​ ಭಯೋತ್ಪಾದಕರು ಒಪ್ಪಿಕೊಂಡಿದ್ದಾರೆ.

ಮತ್ತೊಬ್ಬ ಎರಡು ಮನೆಗಳನ್ನು ಸುಟ್ಟು ಹಾಕಿರುವುದಾಗಿ ಹೇಳಿದ್ದಾನೆ. "ನಾವು ಮಾಡಲು ಬಂದದ್ದನ್ನು ಮುಗಿಸಿದ್ದೇವೆ. ನಂತರ ಎರಡು ಮನೆಗಳನ್ನು ಸುಟ್ಟು ಹಾಕಿದ್ದೇವೆ" ಎಂದು ಹೇಳಿದ್ದಾನೆ. ಅಕ್ಟೋಬರ್ 7ರ ಹತ್ಯೆಗಳ ಬಗ್ಗೆ ನಡೆಯುತ್ತಿರುವ ತನಿಖೆಗಳ ಅವಧಿಯಲ್ಲಿ, ಹಲವಾರು "ಥೀಮ್‌ಗಳು" (ಅಪರಾಧಗಳ ಸ್ವರೂಪ ಮತ್ತು ವಿಧಾನ) ಪದೇ ಪದೇ ಕಾಣಿಸಿಕೊಂಡಿವೆ ಎಂದು ISA ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ 18 ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಇಲ್ಲಿಯವರೆಗೆ ಎರಡೂ ಕಡೆಯಿಂದ 6,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 1400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ರೆ, ಗಾಜಾದಲ್ಲಿ 3000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಯುದ್ಧದಲ್ಲಿ 12,000 ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು ಮತ್ತು ಇಸ್ರೇಲ್​ನಲ್ಲಿ 4800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಮಾರು 222 ಮಂದಿ ಇಸ್ರೇಲಿಗರನ್ನು ಹಮಾಸ್​ ಒತ್ತೆಯಾಳನ್ನಾಗಿ ಇಟ್ಟುಕೊಂಡಿದೆ.

ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ಟೈನ್‌ ಯುದ್ಧ: ಗಾಜಾದಲ್ಲಿ ಇಂಧನ, ವಿದ್ಯುತ್​ ಕೊರತೆ; 30 ಆಸ್ಪತ್ರೆಗಳಲ್ಲಿ ರೋಗಿ, ಶಿಶುಗಳ ಸಾವಿನ ಆತಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.