ETV Bharat / international

ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ ಉಗ್ರಗಾಮಿ ಪಡೆಯ ಹಠಾತ್ ದಾಳಿ.. 'ಯುದ್ಧ' ಘೋಷಿಸಿದ​ ಪ್ರಧಾನಿ ನೆತನ್ಯಾಹು - ಪ್ರಧಾನಿ ಬೆಂಜಮಿನ್ ನೆತನ್ಯಾಹು

ಇಸ್ರೇಲ್​ ಮೇಲೆ ಪ್ಯಾಲೆಸ್ಟೀನಿಯನ್​ನ ಇಸ್ಲಾಮಿಕ್ ಹಮಾಸ್‌ ಉಗ್ರಗಾಮಿ ಪಡೆಯ ರಾಕೆಟ್‌ಗಳ ದಾಳಿ ಬೆನ್ನಲ್ಲೇ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವು 'ಯುದ್ಧ'ದಲ್ಲಿದೆ ಎಂದು ಘೋಷಿಸಿದ್ದಾರೆ.

Israel is 'at war', will extract unprecedented price from enemy: PM Netanyahu
ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ ಉಗ್ರಗಾಮಿ ಪಡೆಯ ಹಠಾತ್ ದಾಳಿ: 'ಯುದ್ಧ' ಘೋಷಿಸಿದ​ ಪ್ರಧಾನಿ ನೆತನ್ಯಾಹು
author img

By PTI

Published : Oct 7, 2023, 4:33 PM IST

ಜೆರುಸಲೇಂ (ಇಸ್ರೇಲ್​): ಇಸ್ರೇಲ್​ ಮೇಲೆ ಪ್ಯಾಲೆಸ್ಟೀನ್​ನ ಇಸ್ಲಾಮಿಕ್ ಹಮಾಸ್‌ ಉಗ್ರಗಾಮಿ ಪಡೆಯು ಶನಿವಾರ ಹಠಾತ್ ದಾಳಿ ನಡೆಸಿದೆ. ಈ ಕುರಿತು ಮೊದಲ ಬಾರಿಗೆ ಮೊದಲ ಸಾರ್ವಜನಿಕ ಹೇಳಿಕೆ ನೀಡಿರುವ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವು 'ಯುದ್ಧ'ದಲ್ಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ, ಶತ್ರುಗಳು ಹಿಂದೆಂದೂ ಕಂಡಿರದ ಬೆಲೆ ತೆರಲಿದ್ದಾರೆ ಎಂದು ಅವರು ಗುಡುಗಿದ್ದಾರೆ.

ಹಮಾಸ್‌ ಉಗ್ರಗಾಮಿ ಪಡೆಯ ದಾಳಿ ಬೆನ್ನಲ್ಲೇ ತಮ್ಮ ದೇಶವಾಸಿಗಳನ್ನು ಉದ್ದೇಶಿಸಿ ದೂರದರ್ಶನದಲ್ಲಿ ಭಾಷಣ ಮಾಡಿದ ಪ್ರಧಾನಿ ನೆತನ್ಯಾಹು, ನಾವು ಯುದ್ಧದಲ್ಲಿ ತೊಡಗಿದ್ದೇವೆ. ದಾಳಿಕೋರರ ವಿರುದ್ಧ ಕಾರ್ಯಾಚರಣೆಯಲ್ಲಿಲ್ಲ. ನಾನು ಯುದ್ಧದಲ್ಲಿದ್ದೇವೆ. ಶನಿವಾರ ಬೆಳಗ್ಗೆ ಇಸ್ರೇಲ್ ಮತ್ತು ಅದರ ನಾಗರಿಕರ ಮೇಲೆ ಹಮಾಸ್ ಮಾರಣಾಂತಿಕ ಹಠಾತ್ ದಾಳಿಯನ್ನು ಪ್ರಾರಂಭಿಸಿದೆ. ಬೆಳಗ್ಗೆಯಿಂದಲೂ ಹಮಾಸ್ ವಿರುದ್ಧ ಹೋರಾಟದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ನಾನು ಭದ್ರತಾ ಸಂಸ್ಥೆಯ ಮುಖ್ಯಸ್ಥರ ಸಭೆ ಕರೆದು ಮೊದಲಿಗೆ ಭಯೋತ್ಪಾದಕರು ಒಳನುಸುಳುಕೋರರನ್ನು ಹೊರಹಾಕಲು ಆದೇಶಿಸಿದೆ. ಈ ಕಾರ್ಯವನ್ನು ಪ್ರಸ್ತುತ ನಡೆಸಲಾಗುತ್ತಿದೆ ಎಂದು ಇಸ್ರೇಲ್​ ಪಿಎಂ ತಿಳಿಸಿದರು. ಮುಂದುವರೆದು, ನಾನು ಮೀಸಲು ಪಡೆಗಳನ್ನು ವ್ಯಾಪಕವಾಗಿ ಸಜ್ಜುಗೊಳಿಸಲು ಆದೇಶಿಸಲಾಗಿದೆ. ಶತ್ರುಗಳು ಅರಿದ ಪ್ರಮಾಣದ ಪ್ರತಿದಾಳಿಯನ್ನು ನೀಡಲಿದ್ದೇವೆ. ಶತ್ರುಗಳು ಹಿಂದೆಂದೂ ಕಂಡಿರದ ಬೆಲೆ ತೆರಲಿದ್ದಾರೆ. ಇದರ ನಡುವೆ ಇಸ್ರೇಲ್​ನ ರಕ್ಷಣಾ ಪಡೆ ಮತ್ತು ಹೋಮ್ ಫ್ರಂಟ್ ಕಮಾಂಡ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಾನು ಇಸ್ರೇಲ್ ನಾಗರಿಕರಿಗೆ ಕರೆ ನೀಡುತ್ತೇನೆ. ನಾವು ಯುದ್ಧವನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಹಮಾಸ್​ ಉಗ್ರಗಾಮಿಗಳ ದಾಳಿಯಲ್ಲಿ ಇದುವರೆಗೆ ಸುಮಾರು 200 ಇಸ್ರೇಲ್​ ನಾಗರಿಕರು ಗಾಯಗೊಂಡಿದ್ದಾರೆ. ಅಲ್ಲದೇ, ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಇಸ್ರೇಲ್ ಪೊಲೀಸರ ಅಂದಾಜಿನ ಪ್ರಕಾರ, ಸುಮಾರು 60 ಜನ ನುಸುಳುಕೋರರು 14 ವಿವಿಧ ಸ್ಥಳಗಳಲ್ಲಿ ನೆಲೆಸಿದ್ದಾರೆ. ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಸೈನಿಕರ ಅಪಹರಣದ ಬಗ್ಗೆ ವರದಿ ಆಗುತ್ತಿದೆ. ಆದರೆ, ಇದು ಖಚಿತವಾಗಿಲ್ಲ.

ಗಾಜಾ ಪಟ್ಟಿಯ ಉಗ್ರಗಾಮಿ ಹಮಾಸ್ ಉಗ್ರರು ಬೆಳಗಿನ ಜಾವದಲ್ಲಿ ಇಸ್ರೇಲ್‌ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ಹಮಾಸ್‌ನ ಹಲವು ಉಗ್ರಗಾಮಿಗಳು ವಾಯು, ಭೂಮಿ ಮತ್ತು ಸಮುದ್ರದ ಮೂಲಕ ಹಲವಾರು ಸ್ಥಳಗಳಲ್ಲಿ ಬಿಗಿಭದ್ರತೆಯ ಗಡಿಯನ್ನು ನುಸುಳಿ ಸಾವಿರಾರು ರಾಕೆಟ್‌ಗಳನ್ನು ಉಡಾಯಿಸಿದ್ದಾರೆ. ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ ಸಾವಿರಾರು ರಾಕೆಟ್‌ಗಳನ್ನು ಉಡಾಯಿಸಲಾಗಿದೆ ಎಂದು ಖುದ್ದು ಹಮಾಸ್‌ನ ಹಿರಿಯ ಕಮಾಂಡರ್​ವೊಬ್ಬ ತಿಳಿಸಿದ್ದಾನೆ.

ಇದನ್ನೂ ಓದಿ: ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್ ದಾಳಿಕೋರರಿಂದ ರಾಕೆಟ್‌ ದಾಳಿ: ನಾಲ್ಕು ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.