ETV Bharat / international

ವೈದ್ಯ ಲೋಕದಲ್ಲೊಂದು ಅದ್ಭುತ.. ಅಪಘಾತದಲ್ಲಿ ಬೇರ್ಪಟ್ಟ ತಲೆ, ಬೆನ್ನು ಮೂಳೆ.. ಬಾಲಕನನ್ನು ಬದುಕಿಸಿದ ವೈದ್ಯರು - ಪ್ರೀತಿಯಿಂದ ಬೆಳೆದ ಮಗನಿಗೆ ಆ್ಯಕ್ಸಿಡೆಂಟ್

ಇಸ್ರೇಲ್​ನಲ್ಲಿ ವೈದ್ಯರು ಪವಾಡ ಮಾಡಿದ್ದಾರೆ. ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನಿಗೆ ಅಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ್ದಾರೆ.

israel doctors reattaches boys head  israel doctors reattaches boys head and spine  reattaches boys head and spine after car accident  ವೈದ್ಯ ಲೋಕದಲ್ಲೊಂದು ಅದ್ಭುತ  ಅಪಘಾತದಲ್ಲಿ ಬೇರ್ಪಟ್ಟ ತಲೆ  ಬಾಲಕನನ್ನು ಬದುಕಿಸಿದ ವೈದ್ಯರು  ಇಸ್ರೇಲ್​ನಲ್ಲಿ ವೈದ್ಯರು ಪವಾಡ  ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯ  ಗಾಯಗೊಂಡಿದ್ದ ಬಾಲಕನಿಗೆ ಅಸಾಮಾನ್ಯ ಶಸ್ತ್ರಚಿಕಿತ್ಸೆ  ಹನ್ನೆರಡು ವರ್ಷದ ಸುಲೇಮಾನ್ ಹಸನ್‌  ಪ್ರೀತಿಯಿಂದ ಬೆಳೆದ ಮಗನಿಗೆ ಆ್ಯಕ್ಸಿಡೆಂಟ್  ವೈದ್ಯರು ಹಸನ್ ಪ್ರಕರಣವನ್ನು ಸವಾಲಾಗಿ ತೆಗೆದು
ವೈದ್ಯ ಲೋಕದಲ್ಲೊಂದು ಅದ್ಭುತ
author img

By

Published : Jul 14, 2023, 11:03 PM IST

ಜೆರುಸಲೇಂ, ಇಸ್ರೇಲ್​: ಜೋರ್ಡಾನ್ ಕಣಿವೆಯ ಹನ್ನೆರಡು ವರ್ಷದ ಸುಲೇಮಾನ್ ಹಸನ್‌ಗೆ ಸೈಕಲ್ ಓಡಿಸುವುದೆಂದರೆ ತುಂಬಾ ಇಷ್ಟ. ಪ್ರತಿದಿನ ಶಾಲೆಯಿಂದ ಮನೆಗೆ ಬರುವಾಗ ಕಣಿವೆಯ ರಸ್ತೆಗಳಲ್ಲಿ ಸೈಕಲ್ ತುಳಿದುಕೊಂಡು ಬರುತ್ತಿದ್ದನು. ಸದಾ ಜನನಿಬಿಡ ಕಣಿವೆಯ ರಸ್ತೆಗಳಲ್ಲಿ ಜಾಗರೂಕರಾಗಿರಲು ಅವರ ಪೋಷಕರು ಆಗಾಗ್ಗೆ ಎಚ್ಚರಿಸುತ್ತಿದ್ದರು. ಆದರೆ, ಒಂದು ದಿನ, ಹಾಸನ್ ಸೈಕಲ್ ಸವಾರಿ ಮಾಡಲು ಹೋದ ಸ್ವಲ್ಪ ಸಮಯದ ನಂತರ, ಒಬ್ಬ ವ್ಯಕ್ತಿ ಅವರ ಮನೆಗೆ ಓಡಿ ಬಂದನು. ಹಸನ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.

ಸುದ್ದಿ ಕೇಳಿ ಹಸನ್ ತಂದೆ-ತಾಯಿ ಬೆಚ್ಚಿಬಿದ್ದರು. ಪ್ರೀತಿಯಿಂದ ಬೆಳೆದ ಮಗನಿಗೆ ಆ್ಯಕ್ಸಿಡೆಂಟ್ ಆಗಿದೆ ಎಂದು ತಿಳಿದಾಗ ಆ ಪೋಷಕರಿಗೆ ಮುಂದೆ ಏನು ಮಾಡಬೇಕೆಂದು ತೋಚಲಿಲ್ಲ. ತಕ್ಷಣ ಆಸ್ಪತ್ರೆಗೆ ತೆರಳಿದರು. ವೈದ್ಯರು ಹಸನ್ ಅವರ ಸ್ಥಿತಿಯ ಬಗ್ಗೆ ಮಾತನಾಡುವಾಗ, ತಮ್ಮ ಮಗ ಬದುಕಲು ಯಾವುದೇ ಅವಕಾಶವಿಲ್ಲ ಎಂದು ಅವರಿಗೆ ಅರ್ಥವಾಯಿತು. ಆದರೆ ಬದುಕಿಸಲು ಪ್ರಯತ್ನಿಸುತ್ತೇವೆ ಎಂದು ವೈದ್ಯರು ಹೇಳಿದಾಗ, ತಮ್ಮ ಮಗ ಎಂದಿನಂತೆ ಬರುತ್ತಾನೆ ಎಂಬ ಸಣ್ಣ ಭರವಸೆ ಅವರಲ್ಲಿ ಮೂಡಿತ್ತು.

ಜೆರುಸಲೇಂನ ಹಡಸ್ಸಾ ಐನ್ ಕೆರೆಮ್ ಆಸ್ಪತ್ರೆಯ ವೈದ್ಯರು ಹಸನ್ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡರು. ಅಪಘಾತದಲ್ಲಿ ಹಸನ್ ಅವರ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದವು. ಜತೆಗೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ಗಾಯವಾಗಿರುವುದು ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ ಮೂಳೆ ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಓಹದ್ ಐನಾವ್, ಹಸನ್ ಅವರ ತಲೆ ಮತ್ತು ದೇಹವು ಪರಸ್ಪರ ಸಂಪೂರ್ಣವಾಗಿ ಬೇರ್ಪಟ್ಟ ಸ್ಥಿತಿಯಲ್ಲಿ ಅವರನ್ನು ತರಲಾಯಿತು ಎಂದು ಹೇಳಿದರು.

''ಹಸನ್​ ಅನ್ನು ಆಸ್ಪತ್ರೆಗೆ ಕರೆತಂದ ಕೂಡಲೇ ಅವರ ಸ್ಥಿತಿ ನೋಡಿ ನಾವೆಲ್ಲ ಬೆಚ್ಚಿಬಿದ್ದೆವು. ತಲೆ ಮತ್ತು ಕುತ್ತಿಗೆಯ ಸಂಧಿಯಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಅಲ್ಲಿ ನರಗಳು ಸಹ ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು. ಅದರ ಜೊತೆಯಲ್ಲಿ ಹೊಟ್ಟೆಯಲ್ಲಿ ತೀವ್ರವಾದ ಗಾಯವನ್ನು ನಾವು ಕಂಡುಕೊಂಡಿದ್ದೇವೆ. ಅವರ ಸ್ಥಿತಿಗತಿ ಕುರಿತು ಶೀಘ್ರ ಪರಿಶೀಲನೆ ನಡೆಸಿ ಆಪರೇಷನ್ ಮಾಡಲು ನಿರ್ಧರಿಸಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಹಸನ್ ಅವರ ತಲೆ ಮತ್ತು ಬೆನ್ನುಮೂಳೆಯು ಮತ್ತೆ ಜೋಡಿಸಲಾಯಿತು ಎಂದು ವೈದ್ಯರು ಹೇಳಿದರು.

ಇದು ಬಹಳ ಸಂಕೀರ್ಣವಾದ ಪ್ರಕ್ರಿಯೆ. ಈ ಕಾರ್ಯಾಚರಣೆಗಾಗಿ ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರ ತಂಡದೊಂದಿಗೆ ನರ್ಸ್‌ಗಳು ಆಪರೇಷನ್ ಥಿಯೇಟರ್‌ನಲ್ಲಿ ಹಲವಾರು ಗಂಟೆಗಳ ಕಾಲ ಶ್ರಮಿಸಿದರು. ಶಸ್ತ್ರಚಿಕಿತ್ಸೆ ಸಮಯದಲ್ಲಿ ವೈದ್ಯರ ತಾಂತ್ರಿಕ ಅನುಭವವು ತುಂಬಾ ಸಹಾಯಕವಾಗಿದೆ. ಈ ನಿರ್ಣಾಯಕ ಕ್ಷಣದಲ್ಲಿ ಅಪಘಾತವಾದ ತಕ್ಷಣ ಸಿಬ್ಬಂದಿ ತಕ್ಷಣವೇ ಪ್ರತಿಕ್ರಿಯಿಸಿದರು ಮತ್ತು ಮೂಲಭೂತ ಚಿಕಿತ್ಸೆ ನೀಡುವುದರಿಂದ ಹಿಡಿದು ಆಪರೇಷನ್ ಮಾಡುವವರೆಗಿನ ಪ್ರತಿಯೊಂದು ನಿರ್ಧಾರವೂ ಹಸನ್ ಅವರ ಜೀವವನ್ನು ಉಳಿಸಲು ಸಹಾಯ ಮಾಡಿತು. ನಮ್ಮ ಶ್ರಮ ವ್ಯರ್ಥವಾಗಲಿಲ್ಲ. ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಡಾ.ಓಹದ್ ಐನಾವ್ ಹೇಳಿದರು.

ಕಳೆದ ತಿಂಗಳು ಈ ಆಪರೇಷನ್ ಮಾಡಲಾಗಿತ್ತು. ಈಗ ಹಸನ್​ನ ಸ್ಥಿತಿ ಸುಧಾರಿಸಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರು ತಿಂಗಳುಗಟ್ಟಲೆ ಹಸನ್ ಅವರನ್ನು ಸೂಕ್ಷ್ಮವಾಗಿ ಗಮನಿಸಿದರು. ಮಗನನ್ನು ಬದುಕಿಸಿದ ವೈದ್ಯರಿಗೆ ಹಸನ್​ನ ತಂದೆ ಕಣ್ಣೀರು ಹಾಕುತ್ತಾ ಕೃತಜ್ಞತೆ ಸಲ್ಲಿಸಿದರು.

“ನನ್ನ ಒಬ್ಬನೇ ಮಗನನ್ನು ಬದುಕಿಸಿದ ವೈದ್ಯರಿಗೆ ನನ್ನ ಉಳಿದ ಜೀವನ ಋಣಿಯಾಗಿದೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ. ಅಪಘಾತದ ನಂತರ ಬದುಕುಳಿಯುವ ಸಾಧ್ಯತೆಗಳು ಕಡಿಮೆ ಇದ್ದರೂ.. ಹೆಚ್ಚು ಅನುಭವಿ ವೈದ್ಯಕೀಯ ಸಿಬ್ಬಂದಿ, ತಂತ್ರಜ್ಞಾನ, ತ್ವರಿತ ನಿರ್ಧಾರ ತೆಗೆದುಕೊಳ್ಳುವುದು, ಆಘಾತ ಮತ್ತು ಮೂಳೆಚಿಕಿತ್ಸೆಯ ತಂಡಗಳು ನಮ್ಮ ಹುಡುಗನನ್ನು ಉಳಿಸಿದವು. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳುವುದನ್ನು ಬಿಟ್ಟು ಬೇರೇನೂ ಮಾಡಲಾರೆ,'' ಎಂದು ಹಸನ್​ ತಂದೆ ಹೇಳಿದರು.

ಓದಿ: ಗುಂಡೇಟು ಬಿದ್ದ ಇಂದಿರಾ ಗಾಂಧಿ ಬದುಕಿನ ಅಂತಿಮ ಕ್ಷಣಗಳು ಹೇಗಿದ್ವು? ಖ್ಯಾತ ವೈದ್ಯ ವೇಣುಗೋಪಾಲರ ಆತ್ಮಚರಿತ್ರೆಯಲ್ಲಿ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.