ETV Bharat / international

ಮತ್ತೆ 2 ದಿನ ಕದನ ವಿರಾಮ ವಿಸ್ತರಣೆ: ಇಸ್ರೇಲ್-ಹಮಾಸ್ ಒಪ್ಪಂದದ ಕುರಿತು ಕತಾರ್ ಮಾಹಿತಿ

author img

By PTI

Published : Nov 28, 2023, 8:35 AM IST

Israel-Hamas extend truce for two more days: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಕಳೆದ 50ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿದೆ. ಕತಾರ್ ದೇಶವು ಉಭಯ ಬಣಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.

Israel and Hamas agree  extend truce for two more days  free more hostages and prisoners  Israel and Hamas war  ಕದನ ವಿರಾಮದ ಅವಧಿ ವಿಸ್ತರಣೆ  ಎರಡೂ ಕಡೆಯ ಒಪ್ಪಂದ  ಎಷ್ಟು ಒತ್ತೆಯಾಳುಗಳು ಬಿಡುಗಡೆ  ಬೈಡನ್​ ಇಚ್ಛೆ ಏನು  ಕದನ ವಿರಾಮ ವಿಸ್ತರಣೆ  ಇಸ್ರೇಲ್ ಮತ್ತು ಹಮಾಸ್
ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದವೇನು?

ಟೆಲ್ ಅವೀವ್(ಇಸ್ರೇಲ್): ಇಸ್ರೇಲ್ ಮತ್ತು ಹಮಾಸ್ ಉಗ್ರ ಸಂಘಟನೆ ಸದ್ಯ ಗಾಜಾದಲ್ಲಿ ಕದನ ವಿರಾಮದ ಅವಧಿಯನ್ನು ಇನ್ನೆರಡು ದಿನಗಳವರೆಗೆ ವಿಸ್ತರಿಸಲು ಒಪ್ಪಿಕೊಂಡಿದೆ. ಉಭಯ ಬಣಗಳ ನಡುವಿನ ಕಳೆದ ನಾಲ್ಕು ದಿನಗಳ ಕದನ ವಿರಾಮ ಸೋಮವಾರ ರಾತ್ರಿ ಮುಗಿದಿತ್ತು. ಕತಾರ್ ದೇಶದ ಮಧ್ಯಸ್ಥಿಕೆಯ ನಂತರ ಇದನ್ನೀಗ ವಿಸ್ತರಿಸಲಾಗಿದೆ.

ಕತಾರ್‌ ವಿದೇಶಾಂಗ ಸಚಿವಾಲಯದ ವಕ್ತಾರ ಮಜಿದ್ ಅಲ್ ಅನ್ಸಾರಿ ಸೋಮವಾರ ಸಂಜೆ ಗಾಜಾ ಪಟ್ಟಿಯಲ್ಲಿ ಮಾನವೀಯ ಕದನ ವಿರಾಮವನ್ನು ಹೆಚ್ಚುವರಿ ಎರಡು ದಿನಗಳವರೆಗೆ ವಿಸ್ತರಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಎರಡೂ ಕಡೆಯವರ ನಡುವಿನ ನಾಲ್ಕು ದಿನಗಳ ಕದನ ವಿರಾಮದ ಕೊನೆಯ ದಿನದಂದು ಈ ಘೋಷಣೆ ಹೊರಬಿದ್ದಿದೆ. ಇಸ್ರೇಲ್‌ನೊಂದಿಗೆ ಮಾನವೀಯ ಕದನ ವಿರಾಮವನ್ನು ವಿಸ್ತರಿಸಲು ಕತಾರ್ ಮತ್ತು ಈಜಿಪ್ಟ್‌ನೊಂದಿಗೆ ಒಪ್ಪಿಕೊಂಡಿರುವುದಾಗಿ ಹಮಾಸ್ ಹೇಳಿದೆ. ಒಪ್ಪಂದದ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಾರಿಯೂ ಹಿಂದಿನ ಕದನ ವಿರಾಮದಂತೆಯೇ ಷರತ್ತುಗಳು ಇರಲಿವೆ ಎಂದು ತಿಳಿದುಬಂದಿದೆ.

ಒಪ್ಪಂದವೇನು?: ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದದಂತೆ, ಹಮಾಸ್ 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಾಲ್ಕು ದಿನಗಳ ಕದನ ವಿರಾಮದೊಂದಿಗೆ 150 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಬೇಕಿದೆ. ಈ ಅವಧಿಯ ನಂತರ ಎರಡೂ ಕಡೆಯವರು ಒಪ್ಪಿದರೆ ಹಮಾಸ್ ಪ್ರತಿದಿನ 10 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕದನ ವಿರಾಮವನ್ನು ಒಂದು ದಿನ ವಿಸ್ತರಿಸುವದರೊಂದಿಗೆ 10 ಜನರ ಬದಲಿಗೆ ಮೂರು ಪ್ಯಾಲೆಸ್ತೀನ್ ಕೈದಿಗಳನ್ನು ರಿಲೀಸ್ ಮಾಡಬೇಕು. ಇದೀಗ ಎರಡು ದಿನಗಳ ಕಾಲ ಕದನ ವಿರಾಮ ವಿಸ್ತರಿಸಲಾಗಿದೆ.

ಎಷ್ಟು ಒತ್ತೆಯಾಳುಗಳು ಬಿಡುಗಡೆ?: ಗಾಜಾದಲ್ಲಿ ನಾಲ್ಕು ದಿನಗಳ ಕದನ ವಿರಾಮದ ನಂತರ ಹಮಾಸ್ ಇದುವರೆಗೆ 39 ಇಸ್ರೇಲಿ ಒತ್ತೆಯಾಳುಗಳನ್ನು ಮುಕ್ತಗೊಳಿಸಿದೆ. ಇದರಲ್ಲಿ ಒಬ್ಬ ಅಮೆರಿಕನ್ ಮತ್ತು 17 ಥಾಯ್ಲೆಂಡ್ ಪ್ರಜೆಗಳಿದ್ದಾರೆ. ಇದೇ ಸಮಯದಲ್ಲಿ, ಇಸ್ರೇಲ್ 117 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ. ಕದನ ವಿರಾಮದ ಮೂರನೇ ದಿನ ಇಸ್ರೇಲ್ 39 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಿತ್ತು. ಹಮಾಸ್ 13 ಇಸ್ರೇಲಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 4 ವರ್ಷದ ಅನಾಥ ಹೆಣ್ಣು ಮಗು ಕೂಡಾ ಸೇರಿದೆ. ಅಕ್ಟೋಬರ್ 7ರಂದು ಹಮಾಸ್ ದಾಳಿಯಲ್ಲಿ ಮಗುವಿನ ಪೋಷಕರು ಮೃತಪಟ್ಟಿದ್ದರು. ಈ ಮಗುವನ್ನು ಹಮಾಸ್ ಹೋರಾಟಗಾರರು ಆಕೆಯ ನೆರೆ ಮನೆಯಿಂದ ಅಪಹರಿಸಿದ್ದರು. 18 ಮಕ್ಕಳು ಮತ್ತು 43 ಮಹಿಳೆಯರು ಸೇರಿದಂತೆ ಒಟ್ಟು 183 ಜನರು ಇನ್ನೂ ಹಮಾಸ್ ವಶದಲ್ಲಿದ್ದಾರೆ.

ಅಮೆರಿಕ ಅಧ್ಯಕ್ಷರು ಹೇಳಿದ್ದೇನು?: ಈ ವಿಚಾರವಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಕದನ ವಿರಾಮ ಮುಂದುವರಿಸಲು ಯಾವುದೇ ಸಮಸ್ಯೆ ಇಲ್ಲ ಎಂದು ನೆತನ್ಯಾಹು ಬೈಡನ್​ಗೆ ತಿಳಿಸಿದ್ದಾರೆ. ಹಮಾಸ್ ಪ್ರತಿದಿನ 10 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ನಾವು ಕದನ ವಿರಾಮವನ್ನು ವಿಸ್ತರಿಸುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ. ಕದನ ವಿರಾಮವನ್ನು ಮುಂದುವರೆಸುವ ಬಗ್ಗೆ ಬೈಡನ್ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ನಾಲ್ಕನೇ ಕಂತಿನಂತೆ ಹಮಾಸ್ ಇನ್ನೂ 11 ಒತ್ತೆಯಾಳುಗಳನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಿದೆ. ಮತ್ತೊಂದೆಡೆ, ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಪುನರುಚ್ಚರಿಸಿದ್ದಾರೆ.

ನೆತನ್ಯಾಹು ಕಚೇರಿ ಹೇಳಿಕೆ: ಹಮಾಸ್ ನೀಡಿದ 11 ಒತ್ತೆಯಾಳುಗಳ ಪಟ್ಟಿಯ ಹೆಸರನ್ನು ಪರಿಶೀಲಿಸುವುದಾಗಿ ನೆತನ್ಯಾಹು ಅವರ ಕಚೇರಿ ಹೇಳಿದೆ. ಒಪ್ಪಂದದಂತೆ, ತಾಯಿ ಮತ್ತು ಮಕ್ಕಳನ್ನು ಒಟ್ಟಿಗೆ ಬಿಡುಗಡೆ ಮಾಡಬೇಕೆಂದು ಇಸ್ರೇಲ್ ಬಯಸುತ್ತದೆ. ಆದರೆ ನಾಲ್ಕನೇ ಬ್ಯಾಚ್‌ನಲ್ಲಿ ಈ ನಿಯಮವನ್ನು ಹಮಾಸ್ ಅನುಸರಿಸಿಲ್ಲ. ಹಮಾಸ್ ವಕ್ತಾರ ಒಸಾಮಾ ಹಮ್ದಾನ್ ಎಂಬಾತ ಬಿಡುಗಡೆ ಮಾಡುವ ಕೈದಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ ಎಂದಿದ್ದಾನೆ.

ಫ್ರೆಂಚ್ ನಾಗರಿಕರು ಸೇರಿದಂತೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಹಮಾಸ್‌ನೊಂದಿಗೆ ಕದನ ವಿರಾಮ ವಿಸ್ತರಿಸುವುದು ಉತ್ತಮ. ಇದು ಅಗತ್ಯ ಕ್ರಮ ಎಂದು ಫ್ರೆಂಚ್ ವಿದೇಶಾಂಗ ಸಚಿವ ಕ್ಯಾಥರೀನ್ ಕೊಲೊನೇಡ್ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಎಲೋನ್​ ಮಸ್ಕ್​: ಜಗತ್ತಿನ ಸಿರಿವಂತ, ಅಮೆರಿಕದ ಉದ್ಯಮಿ ಎಲೋನ್ ಮಸ್ಕ್ ಸೋಮವಾರ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಅಧ್ಯಕ್ಷ ಐಸಾಕ್ ಹೆರ್ಜೋಗ್ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿದ್ದಾರೆ. ಗಾಜಾ ಪಟ್ಟಿಯಲ್ಲಿ ಸ್ಟಾರ್‌ಲಿಂಕ್ ಮೂಲಕ ಇಂಟರ್ನೆಟ್ ಸೇವೆ ಒದಗಿಸುವ ಪ್ರಸ್ತಾಪದ ನಂತರ ಮಸ್ಕ್ ಅವರ ಇಸ್ರೇಲ್ ಭೇಟಿಯನ್ನು ಮಹತ್ವದ್ದೆಂದು ಪರಿಗಣಿಸಲಾಗಿದೆ. ಹಮಾಸ್ ಬಿಡುಗಡೆಗೊಳಿಸಿದ ಇಸ್ರೇಲಿಗಳ ಕುಟುಂಬಗಳನ್ನೂ ಮಸ್ಕ್ ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಹಮಾಸ್​ ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿ ಇಸ್ರೇಲ್​ಗೆ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.