ETV Bharat / international

ಹೈಪರ್​ಸಾನಿಕ್ ಕ್ಷಿಪಣಿ ಫತಾಹ್-2 ಅನಾವರಣಗೊಳಿಸಿದ ಇರಾನ್

author img

By ETV Bharat Karnataka Team

Published : Nov 20, 2023, 7:47 PM IST

ಇರಾನ್​ ಸೇನೆಯು ಹೈಪರ್​ಸಾನಿಕ್ ಕ್ಷಿಪಣಿ ಫತಾಹ್ 2 ಅನ್ನು ಅನಾವರಣಗೊಳಿಸಿದೆ.

Iran unveils hypersonic missile Fattah II

ಟೆಲ್ ಅವೀವ್( ಇಸ್ರೇಲ್​) : ಇರಾನ್ ನ ರೆವಲ್ಯೂಷನರಿ ಗಾರ್ಡ್ಸ್ ಸೋಮವಾರ ಹೈಪರ್​ಸಾನಿಕ್ ಕ್ಷಿಪಣಿ ಫತಾಹ್ 2 ಅನ್ನು ಪ್ರದರ್ಶಿಸಿದೆ. ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅಶುರಾ ಏರೋಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ಫತಾಹ್ 2 ಅನ್ನು ಅನಾವರಣಗೊಳಿಸಿದರು ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಜೂನ್ 2023 ರಲ್ಲಿ, ಇರಾನ್ ಫತಾಹ್ 1 ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು.

ಕ್ಷಿಪಣಿಯ ಸುಧಾರಿತ ಆವೃತ್ತಿಯು ಹೈಪರ್​ಸಾನಿಕ್ ಗ್ಲೈಡ್ ವೆಹಿಕಲ್ (ಎಚ್​ಜಿವಿ) ಅನ್ನು ಒಳಗೊಂಡಿದೆ. ಕ್ಷಿಪಣಿ ಗರಿಷ್ಠ ವೇಗ ತಲುಪಲು ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಫತಾಹ್ 2 ಮ್ಯಾಕ್ 5-20 (6170- 24700 ಕಿ.ಮೀ) ವೇಗ ತಲುಪಬಹುದು ಎಂದು ವರದಿಯಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಸುಧಾರಿತ ಬ್ಯಾಲಿಸ್ಟಿಕ್ ವಿರೋಧಿ ಕ್ಷಿಪಣಿಗಳಿಗಿಂತ ಫತಾಹ್ 2 ಹೆಚ್ಚಿನ ಸಾಮರ್ಥ್ಯ ಹೊಂದಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.

ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧ ಮತ್ತು ವೆಸ್ಟ್​ ಬ್ಯಾಂಕ್​ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾದೊಂದಿಗೆ ಇಸ್ರೇಲ್ ಸಂಘರ್ಷ ನಡೆಯುತ್ತಿರುವ ಮಧ್ಯೆ ಇರಾನ್ ತನ್ನ ಹೊಸ ಕ್ಷಿಪಣಿಯನ್ನು ಅನಾವರಣಗೊಳಿಸಿರುವುದು ಗಮನಾರ್ಹ. ಇಸ್ರೇಲ್ ಯಾವಾಗಲೂ ಇರಾನ್ ಅನ್ನು ಹಮಾಸ್ ಮತ್ತು ಹಿಜ್ಬುಲ್ಲಾ ಎರಡೂ ಸಂಘಟನೆಗಳಿಗೆ ಬೆಂಬಲ ನೀಡುವ ದೇಶವನ್ನಾಗಿ ಪರಿಗಣಿಸಿದೆ.

ಇರಾನ್ ಇತ್ತೀಚಿನ ದಿನಗಳಲ್ಲಿ ಪ್ರಭಾವಶಾಲಿ ಕ್ಷಿಪಣಿ ಕಾರ್ಯಕ್ರಮವನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಹೈಪರ್​ಸಾನಿಕ್ ಕ್ಷಿಪಣಿಗಳ ಪರಿಕಲ್ಪನೆಯು ರಷ್ಯಾ, ಅಮೆರಿಕ ಮತ್ತು ಚೀನಾಗಳಿಗೆ ಚರ್ಚೆಯ ವಿಷಯವಾಗಿದೆ. ಆದರೆ ಈ ತಂತ್ರಜ್ಞಾನದ ಅಭಿವೃದ್ಧಿ ತೀರಾ ಕಷ್ಟಕರ ಎಂದು ಪರಿಗಣಿಸಲಾಗಿದೆ.

ಫತಾಹ್ ಕ್ಷಿಪಣಿಯ ವಿಶೇಷತೆಗಳು: ಇದು ಇರಾನ್ ಅಭಿವೃದ್ಧಿಪಡಿಸಿದ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದು ಶಬ್ದದ ವೇಗಕ್ಕಿಂತ 15 ಪಟ್ಟು ಹೈಪರ್​ಸಾನಿಕ್ ವೇಗದಲ್ಲಿ ಪ್ರಯಾಣಿಸಬಲ್ಲದು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸಬಹುದು. ಇದು 1,400 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಘನ ಪ್ರೊಪೆಲ್ಲಂಟ್ ಗಳನ್ನು ಬಳಸುತ್ತದೆ, ಇದು ಹೆಚ್ಚಿನ ತಂತ್ರಗಾರಿಕೆಗೆ ಅನುವು ಮಾಡಿಕೊಡುತ್ತದೆ.

ಈ ಕ್ಷಿಪಣಿಯು ವಿವಿಧ ಕಾರ್ಯಾಚರಣೆಗಳಿಗೆ ವಿವಿಧ ಸಿಡಿತಲೆಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿದೆ. ಹೈಪರ್​ಸಾನಿಕ್ ಕ್ಷಿಪಣಿಗಳು ಕನಿಷ್ಠ ಮ್ಯಾಕ್ 5 ವೇಗದಲ್ಲಿ ಚಲಿಸುತ್ತವೆ ಮತ್ತು ಹಾರಾಟದ ಮಧ್ಯದಲ್ಲಿ ಕುಶಲತೆಯಿಂದ ಕಾರ್ಯನಿರ್ವಹಿಸಬಲ್ಲವು. ಇದರಿಂದಾಗಿ ಅವುಗಳನ್ನು ಪತ್ತೆಹಚ್ಚಲು ಮತ್ತು ತಡೆಹಿಡಿಯಲು ಕಷ್ಟವಾಗುತ್ತದೆ.

ಇದನ್ನೂ ಓದಿ : ಟ್ರಂಪ್, ಬೈಡನ್ ಮತ್ತೆ ಅಧ್ಯಕ್ಷರಾಗಲು ತೀರಾ ವೃದ್ಧರು: ರಿಪಬ್ಲಿಕನ್ ಅಭ್ಯರ್ಥಿ ಡಿಸಾಂಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.