ETV Bharat / international

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಇಂಥ ಭೀಕರ ದೃಶ್ಯ ಎಂದಾದರೂ ನೋಡಿದ್ದೀರಾ!

ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಮೌಂಟ್ ಮೆರಾಪಿ ಮತ್ತೆ ಸ್ಫೋಟಗೊಂಡಿದೆ. ಅಪಾರ ಪ್ರಮಾಣದ ದಟ್ಟ ಹೊಗೆ, ಬೂದಿ, ಲಾವಾ ಹೊರ ಚಿಮ್ಮಿದೆ.

Indonesias Mount Merapi volcano erupts
ಸಕ್ರಿಯ ಜ್ವಾಲಾಮುಖಿ ಮೌಂಟ್ ಮೆರಾಪಿ ಸ್ಫೋಟ
author img

By

Published : Mar 12, 2023, 8:53 AM IST

Updated : Mar 12, 2023, 8:59 AM IST

ಇಂಡೋನೇಷ್ಯಾ : ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಹಾಗೂ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ಮೌಂಟ್ ಮೆರಾಪಿ ಶನಿವಾರ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಇದರ ಪರಿಣಾಮ ದಟ್ಟವಾದ ಹೊಗೆ ಮತ್ತು ಬೂದಿ ಹೊರ ಚಿಮ್ಮಿದ್ದು, ಅಕ್ಕಪಕ್ಕದ ಹಳ್ಳಿಗಳನ್ನು ಅವರಿಸಿದೆ. ಬೂದಿಯು ಶಿಖರದಿಂದ ಸುಮಾರು 9,600 ಅಡಿ (3,000 ಮೀಟರ್) ಎತ್ತರ ಹಾರಿರುವ ಸಾಧ್ಯತೆಯನ್ನು ಮೆರಾಪಿ ಜ್ವಾಲಾಮುಖಿ ವೀಕ್ಷಣಾಲಯ ಅಂದಾಜಿಸಿದೆ.

"ಜಾವಾದ ಜನನಿಬಿಡ ದ್ವೀಪದಲ್ಲಿರುವ ಮೆರಾಪಿಯ ಬಿಸಿ ಬೂದಿ, ಕಲ್ಲು, ಲಾವಾ ಮತ್ತು ಅನಿಲದ ಮಿಶ್ರಣವು ಇಳಿಜಾರು ಪ್ರದೇಶಗಳಲ್ಲಿ 7 ಕಿಲೋಮೀಟರ್ (4.3 ಮೈಲುಗಳು) ವರೆಗೆ ಹರಿದು ಬಂದಿದೆ. ಜ್ವಾಲಾಮುಖಿಯು ಅಪಾಯಕಾರಿ ಅನಿಲ ಮತ್ತು ಬಿಸಿ ಮೋಡಗಳನ್ನು ಸೃಷ್ಟಿಸಿದೆ. ಗಾಳಿಯಲ್ಲಿ ಇಂಥ ಬಿಸಿ ಮೋಡಗಳು 100 ಮೀಟರ್ ಮೇಲೆ ಏರಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ಹೇಳಿದರು. ಸ್ಫೋಟದ ನಂತರ ಅಧಿಕಾರಿಗಳು ಕುಳಿಯಿಂದ ಏಳು ಕಿಲೋಮೀಟರ್‌ ಪ್ರದೇಶವನ್ನು ಸದ್ಯಕ್ಕೆ 'ನಿರ್ಬಂಧಿತ ವಲಯ' ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಐಸ್‌ಲ್ಯಾಂಡ್‌ನ ಮೌಂಟ್ ಫಾಗ್ರಾಡಾಲ್ಸ್‌ಫ್ಜಾಲ್ ಬಳಿಯ ಕಣಿವೆಯಲ್ಲಿ ಉಕ್ಕಿ ಹರಿಯುತ್ತಿರುವ ಲಾವಾ ರಸ

"ಇದುವರೆಗೂ ಜ್ವಾಲಾಮುಖಿಯಿಂದ ಯಾವುದೇ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಕನಿಷ್ಠ ಎಂಟು ಗ್ರಾಮಗಳಿಗೆ ಜ್ವಾಲಾಮುಖಿ ಬೂದಿ ಹಬ್ಬಿದೆ. ಮೌಂಟ್ ಮೆರಾಪಿ ಸ್ಫೋಟದಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಆ ಭಾಗದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಯಾವುದೇ ಚಟುವಟಿಕೆಗಳಲ್ಲಿ ತೊಡಗದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಭಯಂಕರ ವಿಡಿಯೋ... ಲಾ ಪಾಲ್ಮಾದಲ್ಲಿ ಜ್ವಾಲಾಮುಖಿ ಸ್ಫೋಟ: ಜನರನ್ನು ಸ್ಥಳಾಂತರಿಸಿದ ಸ್ಪೇನ್‌ ಸಿವಿಲ್ ಗಾರ್ಡ್

ಇಂಡೋನೇಷ್ಯಾದ ಸಾಂಸ್ಕೃತಿಕ ರಾಜಧಾನಿ ಯೋಗಕರ್ತಾ ನಗರದಿಂದ 30 ಕಿ.ಮೀ ದೂರದಲ್ಲಿರುವ ಜಾವಾ ದ್ವೀಪದಲ್ಲಿ ಉಂಟಾಗಿರುವ ಭೀಕರ ಜ್ವಾಲಾಮುಖಿ ಸ್ಫೋಟದಿಂದ ಸಮೀಪದ ಹಳ್ಳಿಗಳಲ್ಲಿ ಬೂದಿ ಮುಚ್ಚಿದ ಮನೆಗಳು ಮತ್ತು ರಸ್ತೆಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಹಿಂದಿನ ಘಟನೆಗಳು..: 2010ರಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟವು ಸುಮಾರು 300ಕ್ಕೂ ಹೆಚ್ಚು ಜನರನ್ನು ಆಪೋಶನ ಪಡೆದಿತ್ತು. ಸುಮಾರು 2,80,000 ನಿವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. 1930ರಲ್ಲಿ ಉಂಟಾದ ಜ್ವಾಲಾಮುಖಿಯು ಮೆರಾಪಿಯ ಅತ್ಯಂತ ಶಕ್ತಿಶಾಲಿ ಸ್ಫೋಟವಾಗಿದ್ದು, ಸುಮಾರು 1,300 ಜನರು ಸಾವನ್ನಪ್ಪಿದರು. 1994ರಲ್ಲಿ ಜರುಗಿದ ಸ್ಫೋಟದಲ್ಲಿ ಸುಮಾರು 60 ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ: Watch- ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ: ಮನೆ-ಮಠ ತೊರೆದ ಜನರು

ಕಾರಣವೇನು?: ಸುಮಾರು 130 ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿರುವ ಇಂಡೋನೇಷ್ಯಾವು ಪೆಸಿಫಿಕ್ "ರಿಂಗ್ ಆಫ್ ಫೈರ್" ನಲ್ಲಿದೆ. ಇದು 17,000ಕ್ಕೂ ಹೆಚ್ಚು ದ್ವೀಪ ಸಮೂಹಗಳನ್ನು ಹೊಂದಿದೆ. ಅಲ್ಲಿರುವ ಕಾಂಟಿನೆಂಟಲ್ ಪ್ಲೇಟ್‌ಗಳು (ಭೂಖಂಡದ ಪದರಗಳು) ಪರಸ್ಪರ ಸಂದಿಸುವ ಕಾರಣದಿಂದಾಗಿ ಹೆಚ್ಚಿನ ಜ್ವಾಲಾಮುಖಿ ಮತ್ತು ಭೂಕಂಪನಗಳು ಸಂಭವಿಸುತ್ತಿರುತ್ತವೆ.

Last Updated : Mar 12, 2023, 8:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.