ನ್ಯೂಯಾರ್ಕ್(ಅಮೆರಿಕ): ಅತ್ಯಂತ ದುರಂತ ರೈಲು ಅಪಘಾತದಲ್ಲಿ ಒಡಿಶಾ ರೈಲು ಅವಘಡ ಕೂಡ ಒಂದು. 1 ಸಾವಿರಕ್ಕಿಂತ ಅಧಿಕ ಜನರು ಗಂಭೀರ ಗಾಯಗೊಂಡಿದ್ದರು, 288 ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಈ ಒಡಿಶಾ ಭೀಕರ ರೈಲು ಅಪಘಾತದಿಂದ ಸಂತ್ರಸ್ತರಾದವರಿಗೆ 16 ವರ್ಷದ ಭಾರತೀಯ ಅಮೆರಿಕನ್ ಬಾಲಕಿ ತನಿಷ್ಕಾ ಧರಿವಾಲ್ ಆರ್ಥಿಕ ಸಹಾಯ ಮಾಡಿದ್ದಾರೆ.
-
#WATCH | New York, US | 16-year-old Indian American Tanishka Dhariwal raised more than 10,000 dollars, a contribution towards helping those affected by the horrific train accident in Odisha
— ANI (@ANI) August 8, 2023 " class="align-text-top noRightClick twitterSection" data="
"I got to know about the train tragedy that occurred in Balasore, Odisha. With my… pic.twitter.com/SYERRx6j9g
">#WATCH | New York, US | 16-year-old Indian American Tanishka Dhariwal raised more than 10,000 dollars, a contribution towards helping those affected by the horrific train accident in Odisha
— ANI (@ANI) August 8, 2023
"I got to know about the train tragedy that occurred in Balasore, Odisha. With my… pic.twitter.com/SYERRx6j9g#WATCH | New York, US | 16-year-old Indian American Tanishka Dhariwal raised more than 10,000 dollars, a contribution towards helping those affected by the horrific train accident in Odisha
— ANI (@ANI) August 8, 2023
"I got to know about the train tragedy that occurred in Balasore, Odisha. With my… pic.twitter.com/SYERRx6j9g
ಹೌದು ತನ್ನ ಕಿರಿ ವಯಸ್ಸಿನಲ್ಲಿ ನೊಂದವರಿಗೆ ತನ್ನಿಂದಾಗುವ ಸಹಾಯವನ್ನು ಆಕೆ ಮಾಡಿರುವುದಕ್ಕೆ ಶ್ಲಾಘಿಸಲೇಬೇಕು. ಈಕೆ ಒಡಿಶಾ ರೈಲು ಸಂತ್ರಸ್ತರಿಗಾಗಿ ಪ್ರಧಾನ ಮಂತ್ರಿ ಆರೈಕೆ ನಿಧಿಗಾಗಿ USD 10,000 (8,27,500 ರೂ) ಸಂಗ್ರಹಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಅವರಿಗೆ ಈ ನಿಧಿಯ ಹಣ ನೀಡಿದ್ದಾಳೆ.
ಈ ಕುರಿತು ತನಿಷ್ಕಾ, ನನ್ನ ಸ್ನೇಹಿತರ ಸಹಾಯದಿಂದ ಇದು ಸಾಧ್ಯವಾಯಿತು."ನಾನು GoFundMe ಎಂಬ ಪುಟವನ್ನು ಪ್ರಾರಂಭಿಸಲು ಸಾಧ್ಯವಾಯಿತು. ಈ ಮೂಲಕ ನಾನು ವಿವಿಧ ಶಾಲೆಗಳು, ಬೇರೆ ಬೇರೆ ನಗರಗಳು, ಸ್ನೇಹಿತರನ್ನು, ಮನೆ ಮನೆಗಳಿಗೆ ಹೋಗಿ 8,27,500 ರೂ ಕ್ಕಿಂತ ಹೆಚ್ಚು ಹಣವನ್ನು ಸಂಗ್ರಹಿಸಿದೆ.
-
#WATCH | Prem Bhandari, President of RANA and Founding Chair of Jaipur Foot USA, says "We will hand over this 10,000 dollar cheque to the Indian Consulate which will be wired to the PM CARES Fund. Over the course of the past decade, India's outreach has extended to more than 100… pic.twitter.com/lOwBSeybcJ
— ANI (@ANI) August 8, 2023 " class="align-text-top noRightClick twitterSection" data="
">#WATCH | Prem Bhandari, President of RANA and Founding Chair of Jaipur Foot USA, says "We will hand over this 10,000 dollar cheque to the Indian Consulate which will be wired to the PM CARES Fund. Over the course of the past decade, India's outreach has extended to more than 100… pic.twitter.com/lOwBSeybcJ
— ANI (@ANI) August 8, 2023#WATCH | Prem Bhandari, President of RANA and Founding Chair of Jaipur Foot USA, says "We will hand over this 10,000 dollar cheque to the Indian Consulate which will be wired to the PM CARES Fund. Over the course of the past decade, India's outreach has extended to more than 100… pic.twitter.com/lOwBSeybcJ
— ANI (@ANI) August 8, 2023
ಈ ಹಣದಿಂದ ನೊಂದಿರುವ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾಳೆ. ಇನ್ನು ತನಿಷ್ಕಾ ಸಂಗ್ರಹಿಸಿದ ಹಣ ಹಸ್ತಾಂತರಿಸುವ ಸಂದರ್ಭದಲ್ಲಿ RANA ನ ಪೋಷಕ ಸದಸ್ಯ ಹರಿದಾಸ್ ಕೋಟೆವಾಲ (ಉತ್ತರ ಅಮೆರಿಕದ ರಾಜಸ್ಥಾನ ಅಸೋಸಿಯೇಷನ್), ಅಶೋಕ್ ಸಂಚೇತಿ, ಜೈಪುರ ಫುಟ್, RANA ಜಂಟಿ ಕಾರ್ಯದರ್ಶಿ ರವಿ ಜರ್ಗರ್, RANA ಹಿರಿಯ ಸದಸ್ಯ ಚಂದ್ರ ಸುಖ್ವಾಲ್ ತನಿಷ್ಕಾ ಧರಿವಾಲ್, ಆಕೆಯ ಪೋಷಕರು ನಿತಿನ್ ಮತ್ತು ಸಪ್ನಾ ಧರಿವಾಲ್ ಉಪಸ್ಥಿತರಿದ್ದರು.
RANA ಅಧ್ಯಕ್ಷ ಪ್ರೇಮ್ ಭಂಡಾರಿ ತನಿಷ್ಕಾ ಅವರಂತಹ ಯುವ ಭಾರತೀಯ - ಅಮೆರಿಕನ್ನರ ಅಸಾಧಾರಣ ಪ್ರಯುತ್ನಗಳನ್ನು ಒತ್ತಿ ಹೇಳಿದ್ದಾರೆ. " ತನಿಷ್ಕಾಳ ಈ ಕೊಡುಗೆಯನ್ನು ನಾವು ಮೆಚ್ಚಲೆಬೇಕು. ಇದು ಕೇವಲ ಆಕೆ ಸಂಗ್ರಹಿಸಿರುವ ಮೊತ್ತದ ಬಗೆಗಿನ ವಿಚಾರವಲ್ಲ. ಈ ರೀತಿಯ ಕಾರ್ಯದ ಹಿಂದಿರುವ ಆಕೆಯ ಆಲೋಚನೆ, ಜನರ ಕುರಿತಾದ ಭಾವನೆ ಪ್ರಮುಖವಾಗುತ್ತದೆ. ತನಿಷ್ಕಾಳ ನಿರ್ಧಾರ ಅಮೆರಿಕದಲ್ಲಿ ಜನಿಸಿದ ಭಾರತೀಯರಿಗೆ ಅವರ ತಾಯ್ನಾಡ ಕುರಿತಾದ ಸಂಬಂಧ, ಪ್ರೀತಿ, ಗೌರವವನ್ನು ಎತ್ತಿ ತೋರಿಸುತ್ತದೆ ಎಂದರು.
RANA ಎಂದರೇನು?: ಉತ್ತರ ಅಮೆರಿಕದ ರಾಜಸ್ಥಾನ ಅಸೋಸಿಯೇಷನ್ ಅನ್ನು RANA ಎಂದು ಕರೆಯಲಾಗುತ್ತದೆ. ಇದು ಜಗತ್ತಿನಾದ್ಯಂತ ಅನಿವಾಸಿ ರಾಜಸ್ಥಾನಿಗಳನ್ನು ಪ್ರತಿನಿಧಿಸುವ ಪ್ರಭಾವಶಾಲಿ ಸಂಸ್ಥೆ. ತನಿಷ್ಕಾ ಕೂಡ ಈ ಉತ್ತರ ಅಮೆರಿಕಾದ ರಾಜಸ್ಥಾನ್ ಅಸೋಸಿಯೇಷನ್‌ನ ಯುವ ಸದಸ್ಯರಾಗಿದ್ದಾರೆ. ಮಾರ್ಚ್ 28, 2020 ರಂದು ದೆಹಲಿಯಲ್ಲಿ PM ಕೇರ್ಸ್ ಫಂಡ್ ಅನ್ನು ಪ್ರಾರಂಭಿಸಿದ ನಂತರ, ಭಾರತದ ಹೊರಗೆ ವಾಸಿಸುವ ರಾಜಸ್ಥಾನದಿಂದ ಬಂದವರನ್ನು ಒಗ್ಗೂಡಿಸುವ ಮತ್ತು ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ ವಿಶೇಷವಾಗಿ ಪ್ರಪಂಚದಾದ್ಯಂತದ ಭಾರತೀಯ ಗಮನೆ ಸೆಳೆಯುತ್ತಿದೆ.
RANA ಸದಸ್ಯರಾದ ಚಂದ್ರ ಮೆಹ್ತಾ ಅವರು ನರೇಂದ್ರ ಮೋದಿ ಪಿಎಂ ಕೇರ್ಸ್ ಫಂಡ್ ಘೋಷಿಸಿದ ದಿನದಂದು ಉದಾರವಾಗಿ 1 ಕೋಟಿ ರೂ ದೇಣಿಗೆ ನೀಡಿದ ಮೊದಲ ಅನಿವಾಸಿ ಭಾರತೀಯರಾಗಿದ್ದಾರೆ.
ಇದನ್ನೂ ಓದಿ: ಪಿಎಂ ಕೇರ್ಸ್ ಫಂಡ್ಗೆ ರತನ್ ಟಾಟಾ ಟ್ರಸ್ಟಿ, ಸಲಹೆಗಾರರಾಗಿ ಸುಧಾಮೂರ್ತಿ ನೇಮಕ