ETV Bharat / international

ಜಂಟಿ ಅಧಿವೇಶನದಲ್ಲಿ ಮೋದಿ ಭಾಷಣಕ್ಕೆ ಬೆಂಗಾವಲಾಗ್ತಿರೋದು ದೊಡ್ಡ ಗೌರವ": ಭಾರತೀಯ - ಅಮೆರಿಕನ್, ಕನ್ನಡಿಗ ಥಾನೇದಾರ್ ಸಂತಸ - PM Modi to visit US

ಅಮೆರಿಕದಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಜಂಟಿ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ಶ್ರೀ ಥಾನೇದಾರ್ ಅವರು ಕರೆದೊಯ್ಯಲಿದ್ದಾರೆ. ಅವರ ಭಾಷಣಕ್ಕೆ ಬೆಂಗಾವಲಾಗ್ತಿರೋದು ದೊಡ್ಡ ಗೌರವ ಎಂದು ಅಮೆರಿಕನ್​ ಕನ್ನಡಿಗ ಸಂತಸ ಥಾನೇದಾರ್ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ,ಥಾನೇದಾರ್
ಪ್ರಧಾನಮಂತ್ರಿ ನರೇಂದ್ರ ಮೋದಿ,ಥಾನೇದಾರ್
author img

By

Published : Jun 20, 2023, 12:01 PM IST

Updated : Jun 21, 2023, 1:36 PM IST

ವಾಷಿಂಗ್ಟನ್(ಅಮೆರಿಕ): ಜೂನ್ 22 ರಂದು ಅಮೆರಿಕಾದಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಜಂಟಿ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ-ಅಮೆರಿಕನ್ ಕಾಂಗ್ರೆಸಿಗ ಶ್ರೀ ಥಾನೇದಾರ್ ಅವರು ಕರೆದೊಯ್ಯಲಿದ್ದಾರೆ. ಶ್ರೀ ಥಾನೇದಾರ್ ಮಿಚಿಗನ್‌ನ 13 ನೇ ಕಾಂಗ್ರೆಸನಲ್ ಡಿಸ್ಟ್ರಿಕ್ಟ್ ಅನ್ನು ಮೊದಲ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. ಕನ್ನಡಿಗ ಅಮೆರಿಕನ್​ ಥಾನೇದಾರ್​ ಅವರನ್ನು ಅಧ್ಯಕ್ಷ ಜೋ ಬೈಡನ್​ ಅದೇ ದಿನ ಪ್ರಧಾನಿ ಮೋದಿ ಅವರ ಗೌರವಾರ್ಥ ಆಯೋಜಿಸಿದ ವೈಟ್ ಹೌಸ್ ಸ್ಟೇಟ್ ಡಿನ್ನರ್‌ಗೆ ಆಹ್ವಾನಿಸಿದ್ದಾರೆ.

ಮೋದಿ ಗುಣಗಾನ, ಬೆಳಗಾವಿಯ ಬಾಲ್ಯದ ನೆನಪು ಮಾಡಿಕೊಂಡ ಥಾನೇದಾರ್​: ಈ ಬಗ್ಗೆ ಮಾತನಾಡಿರುವ ಥಾನೇದಾರ್​, " ಭಾರತದ ಪ್ರಧಾನಿ ಮೋದಿಯವರ ಐತಿಹಾಸಿಕ ಭಾಷಣಕ್ಕೆ, ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನಕ್ಕೆ ಬರಲು ಸಾಧ್ಯವಾಗಿದ್ದು ನನಗೆ ದೊಡ್ಡ ಗೌರವವಾಗಿದೆ ಎಂದು ಅವರು ಸಂತಸ ವ್ಯಕ್ಯಪಡಿಸಿದ್ದಾರೆ. ಥಾನೇದಾರ್​ ಅವರು ಕರ್ನಾಟಕದ ಬೆಳಗಾವಿಯಲ್ಲಿ ಜನಿಸಿ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಕರ್ನಾಟಕದ ಬೆಳಗಾವಿಯಲ್ಲಿ ಕಳೆದ ಬಾಲ್ಯವನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ಮುಂಬೈನಲ್ಲಿ ಉನ್ನತ ಶಿಕ್ಷಣ ಪೂರೈಸಿದ ಅವರು ಅಮೆರಿಕಕ್ಕೆ ವಲಸೆ ಹೋಗಿದ್ದರು. ಅದಕ್ಕೂ ಮೊದಲು ಅವರು 24 ವರ್ಷಗಳ ಕಾಲ ಕರ್ನಾಟಕದ ಮಣ್ಣಿನಲ್ಲಿ ಬದುಕು ಸಾಗಿಸಿದ್ದಾರೆ.

ಅಮೆರಿಕಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಎರಡನೇ ಬಾರಿಗೆ ಮಾತನಾಡುವ ಮೊಟ್ಟ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ. ಪ್ರಧಾನಮಂತ್ರಿಯವರು ಈ ಹಿಂದೆ 2016 ರಲ್ಲಿ ಅಮೆರಿಕ ಕಾಂಗ್ರೆಸ್​ನ್ನು ಉದ್ದೇಶಿಸಿ ಮಾತನಾಡಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಆಗಮನದ ಎದುರು ನೋಡುತ್ತಿರುವ ಅಮೆರಿಕ.. ಭರದಿಂದ ಸಾಗಿದ ಯೋಗ ದಿನಾಚರಣೆ ಸಿದ್ಧತೆಗಳು

ಜೂನ್ 22 ರಂದು ನಡೆಯುವ ರಾಜ್ಯ ಔತಣಕೂಟಕ್ಕೆ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಅವರ ಆಹ್ವಾನವನ್ನು ಸ್ವೀಕರಿಸಲು ನಾನು ಮತ್ತು ನನ್ನ ಪತ್ನಿ ಶಶಿ ಗೌರವಾನ್ವಿತರಾಗಿದ್ದೇವೆ ಎಂದು ಥಾನೇದರ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಆಹ್ವಾನವು ಸಾರ್ವಜನಿಕ ಸೇವೆಗೆ ಅವರ ಬದ್ಧತೆ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಅವರ ಸಮರ್ಪಣೆಗೆ ಸಾಕ್ಷಿಯಾಗಿದೆ.

ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸನಲ್ ನಾಯಕತ್ವವು ವಿನಂತಿಸಿದಂತೆ, ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಭಾಷಣಕ್ಕೆ ಭಾರತೀಯ ಪ್ರಧಾನಿಯನ್ನು ಕರೆದೊಯ್ಯುವ ಅವಕಾಶವನ್ನು ಥಾನೇದಾರ್ ಅವರಿಗೆ ವಹಿಸಲಾಗಿದೆ. ವಲಸಿಗರು ನಿರ್ಮಿಸಿದ ವೈವಿಧ್ಯಮಯ ರಾಷ್ಟ್ರ, ಅವಕಾಶಗಳ ಭೂಮಿ ಮತ್ತು ಪ್ರಜಾಪ್ರಭುತ್ವದ ಸಂಕೇತವಾಗಿ ಯುನೈಟೆಡ್ ಸ್ಟೇಟ್ಸ್‌ನ ಪ್ರಾಮುಖ್ಯತೆಯನ್ನು ಗುರುತಿಸುತ್ತಿರುವ ಕಾಂಗ್ರೆಸ್ಸಿಗ ಥಾನೇದಾರ್‌ಗೆ ಈ ಅವಕಾಶ ವಿಶೇಷವಾಗಿದೆ.

ಇನ್ನು ತಮ್ಮ ವೈಯಕ್ತಿಕ ಜೀವನದ ಕುರಿತು ಹೇಳಿರುವ ಥಾನೇದಾರ್ "ನಾನು ಬಡತನದಲ್ಲಿ ಬೆಳೆದಿದ್ದೇನೆ ಮತ್ತು ಕೇವಲ ಕನಸಿನೊಂದಿಗೆ ಅಮೆರಿಕಕ್ಕೆ ಬಂದಿದ್ದೇನೆ. ನನ್ನ ಅಮೆರಿಕ ಕನಸನ್ನು ಸಾಧಿಸುವಲ್ಲಿ ನಾನು ಅದೃಷ್ಟಶಾಲಿಯಾಗಿದ್ದೇನೆ. ಯುನೈಟೆಡ್ ಸ್ಟೇಟ್ಸ್ ವಲಸಿಗರ ದೇಶ, ಅವಕಾಶಗಳ ಭೂಮಿ, ಮತ್ತು ಈ ವೈವಿಧ್ಯತೆಯು ನಮ್ಮ ದೇಶವನ್ನು ಬಲಿಷ್ಠಗೊಳಿಸುತ್ತದೆ. ಅಮೆರಿಕ ಮತ್ತು ಭಾರತದ ನಡುವಿನ ಬಲವಾದ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ತನಗಿರುವ ಬದ್ಧತೆಯನ್ನು ಥಾನೇದಾರ್ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: PM Modi US Visit: ಅಮೆರಿಕಕ್ಕೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ.. ನಿರ್ಗಮನಕ್ಕೆ ಮುನ್ನ ಹೇಳಿದ್ದೇನು?

Last Updated : Jun 21, 2023, 1:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.