ನವದೆಹಲಿ: ರಷ್ಯಾದ ತೈಲ ಬೆಲೆ ಮಿತಿಗೊಳಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಭಾರತವು ಅತ್ಯಂತ ಆಸಕ್ತಿ ತೋರಿಸಿದೆ ಎಂದು ಅಮೆರಿಕದ ಖಜಾನೆ ಉಪ ಕಾರ್ಯದರ್ಶಿ ವಾಲಿ ಅಡೆಯೆಮೊ ಹೇಳಿದ್ದಾರೆ. ಬೆಲೆಯ ಮಿತಿಗೊಳಿಸುವುದರಿಂದ ರಷ್ಯಾಕ್ಕೆ ಆದಾಯ ಕಡಿತಗೊಳ್ಳುತ್ತದೆ. ಅಮೆರಿಕವು ಉಕ್ರೇನ್ ಆಕ್ರಮಣದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು.
ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಇಂಧನ ನೀಡುವ ಉದ್ದೇಶದಲ್ಲಿ ಭಾರತ ಇದೆ. ಭಾರತೀಯ ಅಧಿಕಾರಿಗಳು ಮತ್ತು ನೀತಿ ನಿರೂಪಕರೊಂದಿಗೆ ಬೆಲೆ ಮಿತಿಗೊಳಿಸುವ ಬಗ್ಗೆ ಮಾತುಕತೆ ಮಾಡಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಚರ್ಚೆಗಳನ್ನು ಭಾರತದೊಂದಿಗೆ ಮಾಡಲಾಗುವುದು ಎಂದು ಅಡೆಯೆಮೊ ಹೇಳಿದ್ದಾರೆ.
ಭಾರತ ಮತ್ತು ಇತರ ಕೆಲವು ದೇಶಗಳು ರಷ್ಯಾದಿಂದ ತೈಲ ಖರೀದಿಯನ್ನು ಹೆಚ್ಚಿಸಿವೆ ಮತ್ತು ಈ ಹಿನ್ನೆಲೆಯಲ್ಲಿ ರಷ್ಯಾದ ತೈಲ ಬೆಲೆಯನ್ನು ಮಿತಿಗೊಳಿಸುವ ಮಾರ್ಗಗಳನ್ನು ಅಮೆರಿಕ ಎದುರು ನೋಡುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಆದ ಅಡೆಯೆಮೊ ಅವರು ತೈಲ ಬೆಲೆ ಮಿತಿಗೊಳಿಸುವ ಬಗ್ಗೆ, ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟು ಮತ್ತು ಭಾರತದ ಜಿ 20 ಪ್ರೆಸಿಡೆನ್ಸಿಯ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ರಷ್ಯಾ ತೈಲ ಆಮದಿಗೆ ಅಮೆರಿಕ ನಿಷೇಧ ಎಫೆಕ್ಟ್; ಯುಎಸ್ ಷೇರುಪೇಟೆಗೆ ನಷ್ಟ, ಏಷ್ಯಾ ಮಾರುಕಟ್ಟೆಗಳಲ್ಲಿ ಮಿಶ್ರ ಬೆಳವಣಿಗೆ