ವಾಷಿಂಗ್ಟನ್, ಅಮೆರಿಕ: ಅಮೆರಿಕ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್ (ಯುಎಸ್ಐಎಸ್ಪಿಎಫ್) ಸಮಾರಂಭದಲ್ಲಿ ಮಾತನಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾರತೀಯ ವಲಸಿಗರನ್ನು ಭೇಟಿ ಮಾಡಲು ವಾಷಿಂಗ್ಟನ್‌ನ ರೇಗನ್ ಸೆಂಟರ್‌ಗೆ ತೆರಳಿದರು. ಮೊದಲಿಗೆ ರೇಗನ್ ಸೆಂಟರ್‌ನಲ್ಲಿ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಗಾಯಕಿ ಮೇರಿ ಮಿಲ್ಬೆನ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದರು. ಪ್ರಧಾನಿ ಮೋದಿ ರಾಷ್ಟ್ರಗೀತೆಗೆ ಗೌರವ ಸೂಚಿಸಿದರು.
-
#WATCH | Award-winning international singer Mary Millben performs the National Anthem of India at the Ronald Reagan Building in Washington, DC pic.twitter.com/kBYkrnsu0N
— ANI (@ANI) June 23, 2023 " class="align-text-top noRightClick twitterSection" data="
">#WATCH | Award-winning international singer Mary Millben performs the National Anthem of India at the Ronald Reagan Building in Washington, DC pic.twitter.com/kBYkrnsu0N
— ANI (@ANI) June 23, 2023#WATCH | Award-winning international singer Mary Millben performs the National Anthem of India at the Ronald Reagan Building in Washington, DC pic.twitter.com/kBYkrnsu0N
— ANI (@ANI) June 23, 2023
ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಒಂದು ರೀತಿಯಲ್ಲಿ ನೀವು ಈ ಸಭಾಂಗಣದಲ್ಲಿ ಸೇರಿರುವುದರಿಂದ ಭಾರತದ ಸಂಪೂರ್ಣ ನಕ್ಷೆಯಂತೆ ಗೋಚರಿಸುತ್ತಿದೆ. ನಾನು ಇಲ್ಲಿ ಭಾರತದ ಮೂಲೆ ಮೂಲೆಗಳಿಂದ ಬಂದ ಜನರನ್ನು ಕಾಣುತ್ತಿದ್ದೇನೆ. ಈ ವೇಳೆ ಈ ಸ್ಥಳ ಒಂದು ರೀತಿ ಮಿನಿ ಇಂಡಿಯಾ ಥರ ಕಾಣುತ್ತಿದೆ ಎಂದರು.
-
#WATCH | I want to thank you all for showing such a beautiful image of 'Ek Bharat, Sreshth Bharat', in America. The amount of love I am getting in the US is wonderful, all the credit goes to the people of this country. President Biden and I had a lot of discussions in the last 3… pic.twitter.com/i80Ku4OguR
— ANI (@ANI) June 23, 2023 " class="align-text-top noRightClick twitterSection" data="
">#WATCH | I want to thank you all for showing such a beautiful image of 'Ek Bharat, Sreshth Bharat', in America. The amount of love I am getting in the US is wonderful, all the credit goes to the people of this country. President Biden and I had a lot of discussions in the last 3… pic.twitter.com/i80Ku4OguR
— ANI (@ANI) June 23, 2023#WATCH | I want to thank you all for showing such a beautiful image of 'Ek Bharat, Sreshth Bharat', in America. The amount of love I am getting in the US is wonderful, all the credit goes to the people of this country. President Biden and I had a lot of discussions in the last 3… pic.twitter.com/i80Ku4OguR
— ANI (@ANI) June 23, 2023
ಅಮೆರಿಕದಲ್ಲಿ 'ಏಕ್ ಭಾರತ್, ಶ್ರೇಷ್ಠ್ ಭಾರತ್' ಅಂತಹ ಸುಂದರವಾದ ಚಿತ್ರವನ್ನು ತೋರಿಸಿದ್ದಕ್ಕಾಗಿ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅಮೆರಿಕದಲ್ಲಿ ನನಗೆ ಸಿಗುತ್ತಿರುವ ಪ್ರೀತಿಯ ಪ್ರಮಾಣ ಅದ್ಭುತವಾಗಿದೆ. ಎಲ್ಲಾ ಕ್ರೆಡಿಟ್ ಈ ದೇಶದ ಜನರಿಗೆ ಸಲ್ಲುತ್ತದೆ. ಅಧ್ಯಕ್ಷ ಬೈಡನ್ ಮತ್ತು ನಾನು ಕಳೆದ 3 ದಿನಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಅವರೊಬ್ಬರು ಅನುಭವಿ ರಾಜಕಾರಣಿ ಎಂದೇ ಹೇಳಬಹುದು. ಅವರು ಯಾವಾಗಲೂ ಭಾರತ- ಅಮೆರಿಕ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ ಅಂತಾ ಮೋದಿ ಅವರು ಹೇಳಿದರು.
-
#WATCH | "In a way, you have charted out the full map of India in this hall. I can see people from all corners of India here. It seems that a mini India has turned up," PM Narendra Modi addresses members of the Indian diaspora in Washington, DC pic.twitter.com/iUmBcTHy3n
— ANI (@ANI) June 23, 2023 " class="align-text-top noRightClick twitterSection" data="
">#WATCH | "In a way, you have charted out the full map of India in this hall. I can see people from all corners of India here. It seems that a mini India has turned up," PM Narendra Modi addresses members of the Indian diaspora in Washington, DC pic.twitter.com/iUmBcTHy3n
— ANI (@ANI) June 23, 2023#WATCH | "In a way, you have charted out the full map of India in this hall. I can see people from all corners of India here. It seems that a mini India has turned up," PM Narendra Modi addresses members of the Indian diaspora in Washington, DC pic.twitter.com/iUmBcTHy3n
— ANI (@ANI) June 23, 2023
ತಂತ್ರಜ್ಞಾನ ವರ್ಗಾವಣೆ- ಉತ್ಪಾದನೆಯಲ್ಲಿ ಸಹಕಾರ: ಈ 3 ದಿನಗಳಲ್ಲಿ ಭಾರತ ಮತ್ತು ಯುಎಸ್ ಸಂಬಂಧಗಳ ಹೊಸ ಮತ್ತು ಗೌರವಾತೀರ್ಥ ಪ್ರಯಾಣವು ಪ್ರಾರಂಭವಾಗಿದೆ. ಈ ಹೊಸ ಪ್ರಯಾಣವು ಜಾಗತಿಕ ಕಾರ್ಯತಂತ್ರದ ವಿಷಯಗಳ ಮೇಲೆ ನಮ್ಮ ಒಮ್ಮುಖವಾಗಿದೆ. ಅಷ್ಟೇ ಅಲ್ಲ ಮೇಕ್ ಇನ್ ಇಂಡಿಯಾ ಮೇಕ್ ಫಾರ್ ದಿ ವರ್ಲ್ಡ್ ಆಗಿ ರೂಪಿಸಲು ನಮ್ಮ ಸಹಕಾರ ಇದೆ. ಅದು ತಂತ್ರಜ್ಞಾನ ವರ್ಗಾವಣೆ ಮತ್ತು ಉತ್ಪಾದನೆಯಾಗಿರಲಿ ನಾವು ಕೈಜೋಡಿಸಲಿದ್ದೇವೆ. ಕೈಗಾರಿಕಾ ಪೂರೈಕೆ ಸರಪಳಿಯಲ್ಲಿ ಸಹಕಾರ ಅಥವಾ ಸಮನ್ವಯವನ್ನು ಹೆಚ್ಚಿಸಿ, ಎರಡೂ ರಾಷ್ಟ್ರಗಳು ಉತ್ತಮ ಭವಿಷ್ಯದತ್ತ ಬಲವಾದ ಹೆಜ್ಜೆಗಳನ್ನು ಇಡುತ್ತಿವೆ. ಭಾರತದಲ್ಲಿ ಯುದ್ಧ ವಿಮಾನಗಳನ್ನು ತಯಾರಿಸುವ ಜನರಲ್ ಎಲೆಕ್ಟ್ರಿಕ್ ಕಂಪನಿಯ ನಿರ್ಧಾರವು ಭಾರತದ ರಕ್ಷಣಾ ವಲಯಕ್ಕೆ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಅಂತಾ ಪ್ರಧಾನಿ ಮೋದಿ ಹೇಳಿದರು.
-
#WATCH | Defence industrial cooperation roadmap will deepen the partnership between the two nations. During my visit, companies like Google Micron, Applied Materials and others have announced to make huge investments in India. All these announcements will help to create… pic.twitter.com/GgI1nwLwVR
— ANI (@ANI) June 24, 2023 " class="align-text-top noRightClick twitterSection" data="
">#WATCH | Defence industrial cooperation roadmap will deepen the partnership between the two nations. During my visit, companies like Google Micron, Applied Materials and others have announced to make huge investments in India. All these announcements will help to create… pic.twitter.com/GgI1nwLwVR
— ANI (@ANI) June 24, 2023#WATCH | Defence industrial cooperation roadmap will deepen the partnership between the two nations. During my visit, companies like Google Micron, Applied Materials and others have announced to make huge investments in India. All these announcements will help to create… pic.twitter.com/GgI1nwLwVR
— ANI (@ANI) June 24, 2023
ರಕ್ಷಣಾ ಕೈಗಾರಿಕಾ ಸಹಕಾರ ಮಾರ್ಗಸೂಚಿಯು ಉಭಯ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಗಾಢಗೊಳಿಸುತ್ತದೆ. ನನ್ನ ಭೇಟಿಯ ಸಮಯದಲ್ಲಿ, ಗೂಗಲ್ ಮೈಕ್ರಾನ್, ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಇತರ ಕಂಪನಿಗಳು ಭಾರತದಲ್ಲಿ ಭಾರಿ ಹೂಡಿಕೆ ಮಾಡಲು ಘೋಷಿಸಿವೆ. ಈ ಎಲ್ಲಾ ಘೋಷಣೆಗಳು ಭಾರತದಲ್ಲಿ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಭಾರತ ಮತ್ತು ಯುಎಸ್ ನಡುವೆ ಸಹಿ ಹಾಕಲಾದ ಆರ್ಟೆಮಿಸ್ ಒಪ್ಪಂದವು ಬಾಹ್ಯಾಕಾಶ ಸಂಶೋಧನೆಯಲ್ಲಿ ಹಲವಾರು ಅವಕಾಶಗಳನ್ನು ಒದಗಿಸುತ್ತದೆ. ನಾಸಾದೊಂದಿಗೆ ಭಾರತವು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ. ಈ ಒಂದು ಕಾರ್ಯಕ್ಕೆ ನಾನು 'Sky is not the limit' ಎಂದಿದ್ದೇನೆ ಅಂತಾ ಪ್ರಧಾನಿ ಮೋದಿ ಉಚ್ಚರಿಸಿದರು.
-
#WATCH | India is the mother of democracy and America is the champion of advanced democracy. Today, the world is seeing the partnership between these two great democracies getting stronger. America is our biggest trading partner and export destination but the real potential of… pic.twitter.com/Dwt6TyermL
— ANI (@ANI) June 24, 2023 " class="align-text-top noRightClick twitterSection" data="
">#WATCH | India is the mother of democracy and America is the champion of advanced democracy. Today, the world is seeing the partnership between these two great democracies getting stronger. America is our biggest trading partner and export destination but the real potential of… pic.twitter.com/Dwt6TyermL
— ANI (@ANI) June 24, 2023#WATCH | India is the mother of democracy and America is the champion of advanced democracy. Today, the world is seeing the partnership between these two great democracies getting stronger. America is our biggest trading partner and export destination but the real potential of… pic.twitter.com/Dwt6TyermL
— ANI (@ANI) June 24, 2023
ಇವು ಒಪ್ಪಂದಗಳಲ್ಲ, ಜೀವದ ಕನಸು - ಭವಿಷ್ಯದ ಪ್ರತಿರೂಪ: ನಾವು ಒಟ್ಟಾಗಿ ನೀತಿಗಳು ಮತ್ತು ಒಪ್ಪಂದಗಳನ್ನು ರೂಪಿಸುತ್ತಿಲ್ಲ. ನಾವು ಜೀವನ, ಕನಸುಗಳು ಮತ್ತು ಭವಿಷ್ಯವನ್ನು ರೂಪಿಸುತ್ತಿದ್ದೇವೆ. ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಅಮೆರಿಕದ ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲಾಗುವುದು. H1B ವೀಸಾ ನವೀಕರಣವನ್ನು ಯುಎಸ್‌ನಲ್ಲಿಯೇ ಮಾಡಬಹುದು ಎಂದು ಈಗ ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
-
#WATCH | The partnership between India and the United States will make the world better in the 21st Century. You all play a crucial role in this partnership. I will be leaving for the airport straight from here, meeting you all is like having a sweet dish after food: PM Modi… pic.twitter.com/5XAhL5D9ov
— ANI (@ANI) June 24, 2023 " class="align-text-top noRightClick twitterSection" data="
">#WATCH | The partnership between India and the United States will make the world better in the 21st Century. You all play a crucial role in this partnership. I will be leaving for the airport straight from here, meeting you all is like having a sweet dish after food: PM Modi… pic.twitter.com/5XAhL5D9ov
— ANI (@ANI) June 24, 2023#WATCH | The partnership between India and the United States will make the world better in the 21st Century. You all play a crucial role in this partnership. I will be leaving for the airport straight from here, meeting you all is like having a sweet dish after food: PM Modi… pic.twitter.com/5XAhL5D9ov
— ANI (@ANI) June 24, 2023
ಭಾರತದ ಪ್ರತಿಯೊಂದು ಸಾಧನೆಯಿಂದ ನೀವು ಸಂತೋಷಪಡುತ್ತೀರಿ. ಯೋಗ ದಿನಾಚರಣೆಗಾಗಿ ವಿಶ್ವಸಂಸ್ಥೆಯ ಹೆಚ್‌ಕ್ಯುನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ದೇಶಗಳು ಒಟ್ಟಾಗಿ ಸೇರಿದ್ದಕ್ಕೆ ನೀವು ಹೆಮ್ಮೆಪಡುತ್ತೀರಿ. ಇಲ್ಲಿನ ಸೂಪರ್‌ಮಾರ್ಕೆಟ್‌ಗಳಲ್ಲಿ ಮೇಡ್ ಇನ್ ಇಂಡಿಯಾವನ್ನು ನೋಡಿದಾಗ ನೀವು ಹೆಮ್ಮೆಪಡುತ್ತೀರಿ. ಕಂಪನಿಗಳನ್ನು ಮುನ್ನಡೆಸುತ್ತಿರುವ ಭಾರತೀಯ ಪ್ರತಿಭೆಗಳನ್ನು ನೋಡಿದಾಗ ನೀವು ಹೆಮ್ಮೆ ಪಡುತ್ತೀರಿ. ಇಡೀ ಜಗತ್ತು 'ನಾಟು ನಾಟು... ಹಾಡಿಗೆ ನೃತ್ಯ ಮಾಡುವಾಗ ನೀವು ಹೆಮ್ಮೆಪಡುತ್ತೀರಿ. ಈ ದಿನ ಭಾರತದ ಸಾಮರ್ಥ್ಯವು ಇಂದು ಜಗತ್ತಿನ ವಿಕಾಸಕ್ಕೆ ಮಾರ್ಗವಾಗಿರುವುದನ್ನು ನೋಡಿ ನೀವು ಇಂದು ಹೆಮ್ಮೆಪಡುತ್ತೀರಿ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ಈ ಅಗಾಧ ಪ್ರಗತಿಗೆ ದೇಶದ 140 ಕೋಟಿ ಜನರ ನಂಬಿಕೆಯೇ ಕಾರಣ. ಮೋದಿ ಒಬ್ಬರೇ ಏನನ್ನೂ ಮಾಡಿಲ್ಲ. ನೂರಾರು ವರ್ಷಗಳ ವಸಾಹತುಶಾಹಿ ಈ ನಂಬಿಕೆಯನ್ನು ನಮ್ಮಿಂದ ದೂರ ಮಾಡಿದೆ. ಭಾರತವು ಪ್ರಜಾಪ್ರಭುತ್ವದ ತಾಯಿ ಮತ್ತು ಅಮೆರಿಕ ಮುಂದುವರಿದ ಪ್ರಜಾಪ್ರಭುತ್ವದ ಚಾಂಪಿಯನ್ ಆಗಿದೆ. ಇಂದು, ಈ ಎರಡು ಮಹಾನ್ ಪ್ರಜಾಪ್ರಭುತ್ವಗಳ ನಡುವಿನ ಪಾಲುದಾರಿಕೆ ಬಲಗೊಳ್ಳುತ್ತಿರುವುದನ್ನು ಜಗತ್ತು ನೋಡುತ್ತಿದೆ ಎಂದರು.
ಅಮೆರಿಕ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ರಫ್ತು ತಾಣವಾಗಿದೆ. ಆದರೆ ನಮ್ಮ ಪಾಲುದಾರಿಕೆಯ ನಿಜವಾದ ಸಾಮರ್ಥ್ಯ ಇನ್ನೂ ಹೊರಬರಬೇಕಿದೆ. ಭಾರತದಲ್ಲಿ ಸಾಧ್ಯವಾದಷ್ಟು ಹೂಡಿಕೆ ಮಾಡಲು ಇದು ಉತ್ತಮ ಸಮಯ. ಭಾರತದಲ್ಲಿ ಗೂಗಲ್‌ನ AI ಸಂಶೋಧನಾ ಕೇಂದ್ರವು 100 ಕ್ಕೂ ಹೆಚ್ಚು ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ಸರ್ಕಾರದ ಸಹಾಯದಿಂದ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಮಿಳು ಅಧ್ಯಯನದ ಪೀಠವನ್ನು ಇಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪಾಲುದಾರಿಕೆಯು 21 ನೇ ಶತಮಾನದಲ್ಲಿ ಜಗತ್ತನ್ನು ಉತ್ತಮಗೊಳಿಸುತ್ತದೆ. ಈ ಪಾಲುದಾರಿಕೆಯಲ್ಲಿ ನೀವೆಲ್ಲರೂ ನಿರ್ಣಾಯಕ ಪಾತ್ರವನ್ನು ವಹಿಸುತ್ತೀರಿ ಎಂಬ ನಂಬಿಕೆ ನನಗಿದೆ. ನಾನು ಇಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೊರಡುತ್ತೇನೆ. ನಿಮ್ಮೆಲ್ಲರನ್ನು ಭೇಟಿಯಾಗಿದ್ದು ನನಗೆ ಊಟದ ನಂತರ ಸಿಹಿ ತಿಂಡಿ ಸೇವಿಸಿದಂತೆ ಆಗಿದೆ. ಎಲ್ಲರೂ ಕ್ಷೇಮವಾಗಿರಿ ಎಂದು ಆಶೀಸಿದರು. ಬಳಿಕ ಕೊನೆಯಲ್ಲಿ ಮೋದಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಮಾತುಗಳನ್ನು ಮುಗಿಸಿ ಏರ್ಪೋರ್ಟ್ನತ್ತ ನಡೆದರು.
ಓದಿ: ನನಗೆ ಮೋದಿಯವರ ಬಗ್ಗೆ ತುಂಬಾ ಹೆಮ್ಮೆ ಇದೆ: ಅಮೆರಿಕ ಸಂಸದ ಕನ್ನಡಿಗ ಶ್ರೀ ಥಾನೇದಾರ್ ಸಂತಸ